DK Shivakumar: ನನ್ನ ಮೇಲೆ ಐಟಿ, ಇಡಿ ದಾಳಿಗೆ ದೇವೇಗೌಡ್ರು, ಕುಮಾರಸ್ವಾಮಿಯೇ ಕಾರಣ: ಕಿಡಿಕಾರಿದ ಡಿಕೆಶಿ
ಪ್ರಜಾಧ್ವನಿ ಯಾತ್ರೆ ವೇಳೆ ಜೆಡಿಎಸ್ ವಿರುದ್ದ ಡಿ ಕೆ ಶಿವಕುಮಾರ್ ಕಿಡಿಕಾರಿದರು
ಮಂಡ್ಯ, ಮಾರ್ಚ್ 14: 2023 ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಐಟಿ, ಇಡಿ ದಾಳಿ ವಿಚಾರ ಚರ್ಚೆಗೆ ಬಂದಿದ್ದು, ಪ್ರಜಾಧ್ವನಿ ಯಾತ್ರೆಯ ವೇಳೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಸೋಮವಾರ ಮಂಡ್ಯದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ನನ್ನ ಮೇಲೆ ಐಟಿ, ಇಡಿ ದಾಳಿ ನಡೆಯಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರಣ. ಅವರೆಲ್ಲಾಏನು ಹಣ, ಆಸ್ತಿ ಮಾಡಿಲ್ವಾ ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಇವೆಲ್ಲಾಅವರಿಗೆ ನೆನಪಾಗುತ್ತಿಲ್ಲ, ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಂಪುಟದಿಂದ ಹೊರಗಿಡಲು ಜೆಡಿಎಸ್ ವರಿಷ್ಠರೇ ಕಾರಣ. ದೇವೇಗೌಡರು ಪ್ರಧಾನಿಯಾದ ವೇಳೆ ಜೆಡಿಎಸ್ ಪಕ್ಷದಿಂದ 16 ಮಂದಿ ಗೆದ್ದಿದ್ದ ಸಂಸದರಲ್ಲಿಒಬ್ಬರು ಆ ಪಕ್ಷದಲ್ಲಿಉಳಿದಿಲ್ಲ ಏಕೆ ಎಂದು ಪ್ರಶ್ನಿಸಿದರು.
ಜೆಡಿಎಸ್-ಬಿಜೆಪಿ ಒಂದೇ ಪ್ರಧಾನಿ ನರೇಂದ್ರಮೋದಿ ಮಂಡ್ಯಕ್ಕೆ ಬಂದು ಜೆಡಿಎಸ್ ಪಕ್ಷದ ಬಗ್ಗೆ ಒಂದು ಮಾತು ಆಡಿಲ್ಲ, ಮಂಡ್ಯ ಜಿಲ್ಲೆಯಲ್ಲಿ7, ರಾಮನಗರ ಜಿಲ್ಲೆಯಲ್ಲಿ3, ಮೈಸೂರು ಜಿಲ್ಲೆಯಲ್ಲಿ4 ಮಂದಿ ಜೆಡಿಎಸ್ ಶಾಸಕರಿದ್ದರೂ ಪ್ರಧಾನಿ ಒಂದು ಮಾತುಗಳನ್ನು ಆಡದಿರುವುದು ಜನರಲ್ಲಿಜೆಡಿಎಸ್-ಬಿಜೆಪಿ ಒಂದು ಎಂಬ ಭಾವನೆ ಮೂಡಿದೆ. ಅವರು ಕಾಂಗ್ರೆಸ್ ಪಕ್ಷವನ್ನು ಹಾಗೂ ನಮ್ಮ ನಾಯಕರ ಬಗ್ಗೆ ಮಾತನಾಡಿರುವುದು ನಮ್ಮ ಪಕ್ಷ ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತಿದೆ. ಆದ್ದರಿಂದ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಇದು ರಾಜ್ಯದ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಗೊತ್ತು. ಹಾಗಿದ್ದರೆ ಅರಸೀಕೆರೆ ಶಿವಲಿಂಗೇಗೌಡ, ವೈ.ಎಸ್.ವಿ.ದತ್ತ, ಮಂಜುನಾಥ ಗೌಡ, ಶ್ರೀನಿವಾಸಗೌಡ ಹೀಗೆ ಹಲವರೇಕೆ ಆ ಪಕ್ಷವನ್ನು ಬಿಡುತ್ತಿದ್ದರು ಎಂದರು.

ಸಾಲಮನ್ನಾ ಮಾಡದಿದ್ದರೂ ಪರವಾಗಿಲ್ಲ ಕುಮಾರಣ್ಣ, ಸುಳ್ಳು ಹೇಳಬೇಡಣ್ಣಾ. ಕಳೆದ ಚುನಾವಣೆಯಲ್ಲಿಭರಪೂರ ಯೋಜನೆಗಳನ್ನು ಹೇಳಿದ ಕುಮಾರಣ್ಣ, ಅಧಿಕಾರಕ್ಕೆ ಬಂದ ಕೂಡಲೇ ಸ್ತ್ರೀ ಶಕ್ತಿ ಸೇರಿದಂತೆ ಮಹಿಳೆಯರ ಸಾಲಮನ್ನಾ ಮಾಡುವ ವಿಚಾರ ಹೇಳಿ, ಈಗ ನಾನು ಸಾಲಮನ್ನಾ ಮಾಡುವ ಬಗ್ಗೆ ಹೇಳಿಲ್ಲಎಂಬುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.
ಉದಯ್ ಅವರಿಗೆ ಟಿಕೆಟ್ ನೀಡಲಾಗುವುದೇ ಎಂಬ ಕುರಿತು ಮಾತನಾಡಿ, ನಾವು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಬೇಷರತ್ತಾಗಿ ಬರಬೇಕು. ಪಕ್ಷಕ್ಕೆ ದುಡಿಯಬೇಕು. ನಂತರ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧವಾಗಿರಬೇಕು. ಪಕ್ಷ ಅಗತ್ಯ ಸಮಯದಲ್ಲಿ ಸೂಕ್ತ ತೀರ್ಮಾನ ಮಾಡಲಿದೆ' ಎಂದು ತಿಳಿಸಿದ್ದೇನೆ ಎಂದರು.
ಉದಯ್ ಅವರು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದರು ಎಂಬ ಅಪಾದನೆ ಇದೆಯಲ್ಲ ಎಂದು ಕೇಳಿದಾಗ 'ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದರು. ವಿರೋಧ ಪಕ್ಷದಲ್ಲಿದ್ದಾಗ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಜತೆ ಇದ್ದ ಎ.ಮಂಜು ಅವರು ಈಗ ಜೆಡಿಎಸ್ ಗೆ ಹೋಗಿದ್ದಾರೆ. ಜೆಡಿಎಸ್ ನಲ್ಲಿದ್ದ ಶಿವಲಿಂಗೇಗೌಡರು, ಗುಬ್ಬಿ ವಾಸು, ಮಧುಬಂಗಾರಪ್ಪ ಸೇರಿದಂತೆ ಅನೇಕರು ಕಾಂಗ್ರೆಸ್ ಗೆ ಬಂದಿದ್ದಾರೆ. ನಾನು ಕುಮಾರಸ್ವಾಮಿ ಅವರು ಪರಸ್ಪರ ಎದುರಾಳಿಯಾಗಿ ಗುದ್ದಾಡಿದ್ದರೂ ಪೈಕಮಾಂಡ್ ನಿರ್ದೇಶನದ ಮೇರೆಗೆ ಅವರ ಜತೆ ಸೇರಿ ಮೈತ್ರಿ ಸರ್ಕಾರ ಮಾಡಿದ್ದೇವೆ. ರಾಜಕಾರಣದಲ್ಲಿ ಇಂತಹ ಬೆಳವಣಿಗೆ ಸಹಜ' ಎಂದು ತಿಳಿಸಿದರು.
ಪುಟ್ಟಣ್ಣ ಅವರು ಪಕ್ಷ ಸೇರ್ಪಡೆ ಯಾವಾಗ ಎಂದು ಕೇಳಿದಾಗ, 'ಅವರ ಅರ್ಜಿ ಇನ್ನು ಬಂದಿಲ್ಲ. ಅರ್ಜಿ ಬಂದ ನಂತರ ಎಲ್ಲರಿಗೂ ಮಾಹಿತಿ ನೀಡುತ್ತೇವೆ. ಈ ಕಚೇರಿ ದೇವಾಲಯವಿದ್ದಂತೆ. ಈ ದೇವಾಲಯಕ್ಕೆ ಯಾರು ಬೇಕಾದರೂ ಬರಬಹುದು' ಎಂದರು












Click it and Unblock the Notifications