ಬೇಲೇಕೇರಿ ಕೇಸ್: ಅನಿಲ್ ಲಾಡ್ ಅಂಡ್ ಫ್ಯಾಮಿಲಿಗೆ ಜಾಮೀನು
ಬೆಂಗಳೂರು, ಡಿ. 15: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ, ಉದ್ಯಮಿ ಅನಿಲ್ ಲಾಡ್ ಹಾಗೂ ಅವರ ಪತ್ನಿ ಆರತಿ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟಿನ ಏಕಸದಸ್ಯ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
ಸಿಬಿಐ ವರದಿಯಲ್ಲಿ ಅನಿಲ್ ಲಾಡ್ ಹಾಗೂ ಕುಟುಂಬಸ್ಥರ ಹೆಸರು ಇರುವುದರಿಂದ ಜಾಮೀನಿಗೆ ಅರ್ಜಿ ಹಾಕಿದ್ದರು. ಹೈಕೋರ್ಟ್ ನಿಂದ ಜಾಮೀನು ಪಡೆದು ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಅನಿಲ್ ಲಾಡ್ ಹಾಗೂ ಅವರ ಪತ್ನಿ ಆರತಿ ಲಾಡ್ ಮತ್ತು ವಿಎಸ್‍ಎಲ್ ಮೈನಿಂಗ್ ಕಂಪನಿ ತಲಾ 2 ಲಕ್ಷ ರೂ. ವೈಯಕ್ತಿಕ ಬಾಂಡ್, ಒಬ್ಬ ವ್ಯಕ್ತಿಯ ಶ್ಯೂರಿಟಿ ಒದಗಿಸಬೇಕು ಭದ್ರತಾ ಖಾತ್ರಿ(ಶ್ಯೂರಿಟಿ)ಯನ್ನು ಡಿ.30ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಾಕ್ಷಿ ನಾಶಕ್ಕೆ ಯತ್ನಿಸಬಾರದು ಎಂದು ಷರತ್ತು ವಿಧಿಸಲಾಗಿದೆ.
ವಿಎಸ್‍ಎಲ್ ಮೈನಿಂಗ್ ಕಂಪನಿ ಮೂಲಕ ಅನಿಲ್ ಲಾಡ್ ಅವರು ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪ ಹೊತ್ತಿದ್ದಾರೆ. 2012ರಿಂದ 2013ರ ನಡುವೆ 50 ಸಾವಿರ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದೆ ಎಂದು ಆರೋಪ ಹೊರೆಸಿ, ಅನಿಲ್ ಲಾಡ್ ಹಾಗೂ ಕಂಪನಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತಂಡ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಚಾರ್ಜ್ ಶೀಟ್ ಹಾಕಿತ್ತು. ಹೀಗಾಗಿ ಬಂಧನ ಭೀತಿ ಎದುರಿಸಿದ್ದ ಅನಿಲ್ ಲಾಡ್ ಅವರು ಜಾಮೀನು ಕೋರಿ ಅರ್ಜಿ ಹಾಕಿದ್ದರು.












Click it and Unblock the Notifications