ಭೂ ಸ್ವಾಧೀನ, ಡಿನೋಟಿಫೀಕೇಷನ್ ಮಾಹಿತಿ ಗೆಜೆಟ್ ಮೂಲಕ ಹೊರಡಿಸಿ

ಬೆಂಗಳೂರು, ಜೂನ್ 27: ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಮಾಡಿಕೊಳ್ಳುವ ಭೂ ಸ್ವಾಧೀನ ಮತ್ತು ಆನಂತರ ಡಿನೋಟಿಫೈ ಮಾಡುವ ಎಲ್ಲಾ ಆದೇಶಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವ ಕುರಿತು ಶೀಘ್ರವಾಗಿ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ಹಾಗಾಗಿ ಸರ್ಕಾರ ಇಷ್ಟು ದಿನ ಮಾಡಿದಂತೆ ಭೂ ಸ್ವಾಧೀನ ಹಾಗೂ ಡಿನೋಟಿಫಿಕೇಷನ್ ಆದೇಶಗಳನ್ನು ಕದ್ದು ಮುಚ್ಚಿ ಮಾಡುವಂತಿಲ್ಲ. ಏಕೆಂದರೆ ಬಿಡಿಎ ಗಮನಕ್ಕೆ ತರದೆ ಡಿನೋಟಿಫೈ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಖಡಕ್ ಆದೇಶ ನೀಡಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಾರದೆ ಸರ್ಕಾರ ಡಿನೋಟಿಫಿಕೇಷನ್ ಮಾಡಿದ್ದ ಕ್ರಮವನ್ನು ಏಕ ಸದಸ್ಯ ಪೀಠ ಎತ್ತಿಹಿಡಿದ್ದಿತ್ತು.

HC Directed Chief Secretary To Issue Gazette Of All Orders

ಈ ಆದೇಶವನ್ನು ಪ್ರಶ್ನಿಸಿ ಬಿಡಿಎ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಭಾಗೀಯ ಪೀಠದ ಆದೇಶವೇನು?: ಅಲ್ಲದೆ, ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಕುರಿತ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸೇರ್ಪಡೆ ಮಾಡಿರಬೇಕು ಎಂದು ನ್ಯಾಯಪೀಠ ಹೇಳಿದೆ.

ಡಿನೋಟಿಫಿಕೇಷನ್ ರದ್ದುಗೊಳಿಸುವ ಆದೇಶಗಳನ್ನು ಸಹ ಗೆಜೆಟ್ ಮಾಡಬೇಕು ಮತ್ತು ಸೂಕ್ತ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪುವಂತೆ ಪ್ರಚಾರ ಮಾಡಬೇಕು. ಇದರಿಂದ ಭೂ ಮಾಲೀಕರು ಡಿನೋಟಿಫಿಕೇಷನ್ ಆಧಾರದ ಮೇಲೆ ಸಂಭಾವ್ಯ ಖರೀದಿದಾರರನ್ನು ವಂಚಿಸಲು ಸಾಧ್ಯವಿಲ್ಲ. ಡಿನೋಟಿಫಿಕೇಷನ್ ರದ್ದುಗೊಳಿಸುವ ಆದೇಶಗಳ ಮರೆ ಮಾಚುವುದಕ್ಕೂ ಅವಕಾಶವಿರುವುದಿಲ್ಲ ಎಂದು ಪೀಠ ತಿಳಿಸಿದೆ.

ಡಿನೋಟಿಫೈ ಮಾಡಲಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಮುಗ್ಧ ಖರೀದಿದಾರರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಆದರೆ, ನಂತರ ಅಂತಹ ಡಿನೋಟಿಫಿಕೇಷನ್ ಅನ್ನು ರದ್ದುಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಡಿಎ ಗಮನಕ್ಕೆ ತಾರದೆ ಡಿನೋಟಿಫಿಕೇಷನ್ ಹೊರಡಿಸಿದ್ದರಿಂದ ಪ್ರಸ್ತುತ ಪ್ರಕರಣದಲ್ಲಿನ ಭೂಮಿಯನ್ನು ಸ್ವಾಧೀನದಿಂದ ಹೊರಗಿಡಬೇಕೇ ಎಂಬುದರ ಕುರಿತಂತೆ ಹೊಸದಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಸೂಚನೆ ನಿಡಿದೆ.

ಅಲ್ಲದೆ, ಈ ಕುರಿತು ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭೂ ಮಾಲೀಕರಾದ ಬಿಡಿಎ ಗಮನಕ್ಕೆ ತಾರದೇ ಡಿನೋಟಿಫಿಕೇಷನ್ ಹಿಂಪಡೆದಿರುವ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ವಿವರ: ಬೆಂಗಳೂರು ನಗರದಲ್ಲಿ ನಾಡ ಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ ಚಲ್ಲಘಟ್ಟ ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿಯನ್ನು ಬಿಡಿಎ 2010ರ ಸೆಪ್ಟೆಂಬರ್ 26ರಂದು ಸ್ವಾಧೀನಪಡಿಸಿಕೊಂಡಿತ್ತು. ಉದ್ದೇಶಿಸಿದ್ದ ಭೂಮಿಯನ್ನು ಸರ್ಕಾರ ಬಿಡಿಎ ಗಮನಕ್ಕೆ ತಾರದೆ ಡಿನೋಟಿಫೈ ಮಾಡಲಾಗಿತ್ತು. 2010ರ ಅಕ್ಟೋಬರ್ 19ರಂದು ಡಿನೋಟಿಫಿಕೇಷನ್ ಆದೇಶವನ್ನು ಬಿಡಿಎ ವಿಚಾರಣೆ ನಡೆಸಿರಲಿಲ್ಲ. ಇದೇ ಕಾರಣದಿಂದ ಡಿನೋಟಿಫಿಕೇಷನ್ ಆದೇಶವನ್ನು ಈ ಕುರಿತು ಗೆಜೆಟ್ ಪ್ರಕಟಣೆ ಹೊರಡಿಸಿರಲಿಲ್ಲ.

ಆದರೆ, ಉದ್ದೇಶಿತ ಜಮೀನನ್ನು ಭೂ ಮಾಲೀಕರು ಸ್ವಾಧೀನ ಪ್ರಕ್ರಿಯೆ ಮತ್ತು ಡಿನೋಟಿಫಿಕೇಷನ್ ಕುರಿತಂತೆ ಮಾಹಿತಿ ನೀಡದೆ ಭಾಗ್ಯಲಕ್ಷ್ಮಿ ಎಂಬುವರಿಗೆ ಪರಾಭಾರೆ ಮಾಡಿದ್ದರು. ಈ ನಡುವೆ ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದ ಆದೇಶವನ್ನು ಬಿಡಿಎ ರದ್ದು ಪಡಿಸಿತ್ತು.

ಬಿಡಿಎ ಕ್ರಮವನ್ನು ಭಾಗ್ಯಲಕ್ಷ್ಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯಪೀಠ, ಡಿನೋಟಿಫಿಕೇಷ್ ಆದೇಶವನ್ನು ಎತ್ತಿಹಿಡಿದಿದ್ದು, ಡಿನೋಟಿಫಿಕೇಷನ್ ಹಿಂಪಡೆದಿದ್ದ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+