ಹಾವೇರಿ: ಕಾಲು ಜಾರಿ ಬಿದ್ದು ಸಹೋದರರು ಸೇರಿ 3 ಬಾಲಕರ ಸಾವು
ಕಾಲು ಜಾರಿ ಬಿದ್ದು ಇಬ್ಬರು ಸಹೋದರರು ಸೇರಿ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗಿರಿಸಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹಾವೇರಿ, ಅಕ್ಟೋಬರ್ 6: ಕಾಲು ಜಾರಿ ಬಿದ್ದು ಇಬ್ಬರು ಸಹೋದರರು ಸೇರಿ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗಿರಿಸಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಳಿ ಇರೋ ಅರಳೀಕಟ್ಟಿ ಕೆರೆಯ ಬಳಿ ಮೂವರು ಬಾಲಕರು ಸೇರಿ ಆಟವಾಡಲು ಹೋಗಿದ್ದ ವೇಳೆ ಕಾಲು ಜಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ದುರ್ಧೈವಿ ಬಾಲಕರನ್ನು ನಾಗರಾಜ ಕುರುಬರ 12 ವರ್ಷ, ನವೀನ ಕುರುಬರ 10 ವರ್ಷ ಮತ್ತು ಶ್ರೀನಿವಾಸ ಸೊನ್ನದವರ 12 ವರ್ಷ ಎಂದು ಗುರುತಿಸಲಾಗಿದೆ.
ಸಂಜೆ ಆಟವಾಡಲು ಕೆರೆಯ ಬಳಿ ತೆರಳಿದ್ದರು. ಬಾಲಕರು ಮನೆಗೆ ಮರಳಿ ಬಾರದ್ದರಿಂದ ಮನೆಯವರು ಗಾಬರಿಯಾಗಿದ್ದಾರೆ. ಬಳಿಕ ಸಂಬಂಧಿಕರೆ ಕರೆ ಮಾಡಿ ವಿಚಾರಿಸಿದ್ದಾರೆ . ಇದೇ ಸಂದರ್ಭದಲ್ಲಿ ಮಕ್ಕಳು ಕರೆಯ ದಡದಲ್ಲಿ ಆಟ ಆಡುತಿದ್ದುದನ್ನು ಊರಿನ ಕಲವರು ನೋಡಿದ್ದರು. ಅವರು ಈ ವಿಷಯವನ್ನು ಪಾಲಕರಿಗೆ ತಿಳಿಸಿದ್ದರು.

ಆಗ ಕೆರೆಯಲ್ಲಿ ಹುಡುಕಾಡಿದಾಗ ಮೂವರ ಹೆಣಗಳು ಪತ್ತೆಯಾಗಿದ್ದು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿದ್ದು ಗೊತ್ತಾಗಿದೆ. ಕೆರೆಯಿಂದ ಮೂವರು ಬಾಲಕರ ಮೃತದೇಹವನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಮೃತರ ಮನೆಗೆ ಹಾನಗಲ್ ತಹಶೀಲ್ದಾರ್ ಶಕುಂತಲಾ ಚೌಗಲಾ ಮತ್ತು ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications