ಹಾಲು ಉತ್ಪಾದಕರ ಆಕ್ರೋಶ: ಹಾಲಿನ ದರ ಏರಿಕೆ
ಹಾವೇರಿ, ಏಪ್ರಿಲ್ 07: ಮದ್ಯದ ದರ, ಮೆಟ್ರೋ ದರ, ಕಾಲೇಜು ಪ್ರವೇಶ ಶುಲ್ಕ, ಬಿತ್ತನೆ ಬೀಜ ದರ, ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ. ಅಲ್ಲದೇ ಹಾಲಿನ ದರ ಏರಿಕೆಗೆ ವಿಪಕ್ಷಗಳೂ ಹಾಗೂ ಜನರು ಸರ್ಕಾರದ ವಿರುದ್ದ ಆಕ್ರೋಶವನ್ನ ಹೊರ ಹಾಕಿವೆ. ಈ ನಡುವೆ ಹಾಲು ಉತ್ಪಾದಕರ ಆಕ್ರೋಶಕ್ಕೆ ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೆಮುಲ್) ಮಣಿದಿದೆ. ಹಾಲು ಉತ್ಪಾದಕರಿಗೆ ನೀಡುವ ಲೀಟರ್ ಹಾಲಿನ ದರವನ್ನು ಹೆಚ್ಚಿಗೆ ಮಾಡಿದೆ.
ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೆಮುಲ್) ಮಾರ್ಚ್‌ನಲ್ಲಿ ಹಾಲು ದರ ಕಡಿಮೆ ಮಾಡಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಒಕ್ಕೂಟ ಲೀಟರ್ಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿತ್ತು.ಇದೀಗ ಲೀಟರ್‌ಗೆ 2.50 ರೂ. ಹೆಚ್ಚಳ ಮಾಡಿದೆ. ಹಸುವಿನ ಹಾಲಿಗೆ 33 ರೂ. ಮತ್ತು ಎಮ್ಮೆ ಹಾಲಿಗೆ 45.50 ರೂ. ನಿಗದಿಪಡಿಸಿದೆ.

ಹಾಲು ಉತ್ಪಾದಕರಿಂದ ಹಾಲು ಪಡೆಯುವ ಹಾವೇರಿಯ ಹಾವೆಮುಲ್ 3.50 ರೂ. ಅನ್ನು ಇಳಿಕೆ ಮಾಡಿತ್ತು. ಇದಕ್ಕೆ ಹಾಲು ಉತ್ಪಾದಕರು ವಿರೋಧಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಲೀಟರ್ ಹಾಲಿಗೆ 2.50 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಈ ಹಿಂದೆ ಎಮ್ಮೆ ಹಾಲಿಗೆ 43 ರೂಪಾಯಿ ನೀಡುತ್ತಿತ್ತು. ಹಸುವಿನ ಹಾಲಿಗೆ 30.50 ರೂಪಾಯಿ ನೀಡುತ್ತಿತ್ತು. ಇದೀಗ, 2.50 ರೂಪಾಯಿ ಹೆಚ್ಚಿಗೆ ಮಾಡುವ ಮೂಲಕ ಹಸುವಿನ ಹಾಲನ್ನು ಲೀಟರ್ಗೆ 33 ರೂ., ಎಮ್ಮೆ ಹಾಲನ್ನು ಲೀಟರ್ಗೆ 45.50 ರೂಪಾಯಿ ನೀಡಿ ಹಾಲು ಉತ್ಪಾದಕರಿಂದ ಖರೀದಿಸಲು ಮುಂದಾಗಿದೆ.
ಕಳೆದ ಮಾರ್ಚ್ 27 ರಂದು ಲೀಟರ್ ಗೆ 3.50 ಕಡಿತಗೊಳಿಸಲಾಗಿತ್ತು. ಈ ವೇಳೆ ಹಾವೆಮುಲ್ ವಿರುದ್ಧ ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಹಾವೆಮುಲ್ ಅಧ್ಯಕ್ಷ ಮತ್ತು ನಿರ್ದೇಶಕರ ಜೊತೆ ಸಭೆ ನಡೆಸಿ ಸಚಿವ ಶಿವಾನಂದ್ ಪಾಟೀಲ್ ಸೂಚನೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಸಲಹೆ ಮೇರೆಗೆ ಇದೀಗ 2.50 ಹೆಚ್ಚಳಕ್ಕೆ ನಿರ್ಧರಿಸಲಾಗಿದ್ದು, ಗುಡ್ ನ್ಯೂಸ್ ನೀಡಿದಂತಾಗಿದೆ.
ಹಾವೆಮುಲ್ ಕಳೆದ ಮಾರ್ಚ್ 27ರಂದು ಲೀಟರ್ಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿದ್ದು, ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾವೆಮುಲ್ 18.50 ಕೋಟಿ ರೂಪಾಯಿ ನಷ್ಟದಲ್ಲಿದೆ. ನಷ್ಟದಿಂದ ಮೇಲೆತ್ತಲು ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಬೆಲೆಯಲ್ಲಿ 3.50 ರೂಪಾಯಿ ಕಡಿಮೆ ಮಾಡುವ ಅನಿವಾರ್ಯತೆ ಇದೆ ಎಂದು ಹಾಲು ಒಕ್ಕೂಟದ ಅದ್ಯಕ್ಷರು ಹೇಳಿದ್ದರು. ಆದರೆ, ಈ ನಿರ್ಧಾರಕ್ಕೆ ಹಾಲು ಉತ್ಪಾದಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದು ಭಾನುವಾರ ಹಾವೆಮುಲ್ ಅಧ್ಯಕ್ಷರು, ನಿರ್ದೇಶಕರ ಜೊತೆ ಸಚಿವ ಶಿವಾನಂದ ಪಾಟೀಲ್ ಸಭೆ ನಡೆಸಿದರು. ಸಚಿವರ ಸಲಹೆ ನೀಡಿದ ಹಿನ್ನೆಲೆಯಲ್ಲಿ 2.50 ರೂ. ಹೆಚ್ಚಳಕ್ಕೆ ಹಾವೆಮುಲ್ ನಿರ್ಧರಿಸಿದೆ.
ಹಾವೇರಿ ಹಾಲು ಒಕ್ಕೂಟ 2022 ರಲ್ಲಿ ಪ್ರಾರಂಭವಾಗಿದೆ. ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿ ಪ್ರತಿ ನಿತ್ಯ 1 ಲಕ್ಷ 35 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತೆ. ಅದರಲ್ಲಿ ಮಾರುಕಟ್ಟೆಯಲ್ಲಿ ಕೇವಲ 20,000 ಲೀಟರ್ ಹಾಲು ಮಾತ್ರ ಮಾರಾಟವಾಗುತ್ತೆ. ಇದರಿಂದ ಹಾಲು ಒಕ್ಕೂಟಕ್ಕೆ ನಷ್ಟವಾಗುತ್ತಿದೆ ಎಂದು ಹಾವೆಮುಲ್ ಹೇಳಿದೆ. ಇನ್ನು, ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಬರೋಬ್ಬರಿ 656.07 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿರುವುದಾಗಿ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಉತ್ತರ ನೀಡಿತ್ತು. ಒಟ್ಟು 9,04,547 ಫಲಾನುಭವಿ ರೈತರಿಗೆ ಹಾಲು ಉತ್ಪಾದನಾ ಪ್ರೋತ್ಸಾಹಧನ ಬಾಕಿ ಇದೆ ಎಂದು ಹೇಳಿತ್ತು.
-
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ












Click it and Unblock the Notifications