Get Updates
Get notified of breaking news, exclusive insights, and must-see stories!

ಜಗದೀಶ್ ಶೆಟ್ಟರ್‌ಗೆ ಹಾವೇರಿ, ಸವದಿಗೆ ಬಾಗಲಕೋಟೆ: ಲಿಂಗಾಯತರನ್ನು ಸೆಳೆಯಲು ಅಪ್ಪ-ಮಗನ ಮಹಾತಂತ್ರ

ಬೆಂಗಳೂರು, ಫೆಬ್ರವರಿ 01: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್‌ ಸಿಗದ ಹಿನ್ನಲೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದದದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ನಡೆಸಿದ್ದ ಮಹಾತಂತ್ರದಲ್ಲಿ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ಯಶಸ್ವಿಯಾಗಿದ್ದಾರೆ.

ಹೌದು, ಲೋಕಸಭಾ ಚುನಾವಣೆಯ ಹೊಣೆ ಹೊತ್ತಿರುವ ವಿಜಯೇಂದ್ರ ತಂದೆಯೊಂದಿಗೆ ಹಲವು ಲಿಂಗಾಯತ ನಾಯಕರನ್ನ ಸೆಳೆಯುವ ತಂತ್ರಗಾರಿಕೆಯನ್ನ ನಡೆಸಿದ್ದು, ಇದು ಲೋಕಸಭೆ ಚುನಾವಣೆ ಮೊದಲೇ ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿದಂತಾಗಿದೆ.

Haveri for Jagadish Shettar, Bagalkot for Laxman Savadi: Vijayendra Strategy targets Lingayat votes

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ ಮುನಿಸುಕೊಂಡು ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದರು, ಜಗದೀಶ್‌ ಶೆಟ್ಟರ್‌ ಜೊತೆ ಜೊತೆಗೆ ಲಕ್ಷ್ಮಣ್‌ ಸವದಿ ಕೂಡ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು, ಇದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಪೆಟ್ಟು ಕೊಟ್ಟಿತ್ತು, ಇದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲನ್ನು ಅನುಭವಿಸಿತು. ಇದೆಲ್ಲದವನ್ನು ಮನಗಂಡ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಅವರು ಲಿಂಗಾಯತ ನಾಯಕರನ್ನ ಮರಳಿ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಶಪಥ ಮಾಡಿದ್ರು, ಅದರಂತೆ. ಇದೀಗ ಜಗದೀಶ್‌ ಶೆಟ್ಟರ್‌ ಅವರನ್ನ ಕರೆತರುವಲ್ಲಿ ರಾಜಾಹುಲಿ ಹಾಗೂ ಮರಿ ರಾಜಾಹುಲಿ ಸಕ್ಕಸ್‌ ಕಂಡಿದ್ದಾರೆ.

ಇನ್ನೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ರಾಜಕೀಯ ತಂತ್ರಗಾರಿಕೆಯನ್ನ ತಂದೆ ಹಾಗೂ ಮಗ ಎಣೆದಿದ್ದು, ಪ್ರಮುಖವಾಗಿ ಲಿಂಗಾಯತ ನಾಯಕರನ್ನ ಕಾಂಗ್ರೆಸ್‌ ಪಕ್ಷದಿಂದ ಕರೆತರುವ ನಿಟ್ಟಿನಲ್ಲಿ ಹಲವು ಲೆಕ್ಕಾಚಾರಗಳನ್ನ ಹಾಕಿಕೊಂಡಿದ್ದು, ಜಗದೀಶ್‌ ಶೆಟ್ಟರ್‌ ಬೆನ್ನಲ್ಲೇ ಲಕ್ಷ್ಮಣ್‌ ಸವದಿ ಅವರಿಗೆ ಗಾಳ ಹಾಕಿದ್ದಾರೆ. ಲಕ್ಷ್ಮಣ್‌ ಸವದಿ ಅವರು ಸಹ ಟಿಕೆಟ್‌ ಸಿಗದ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿ ಶಾಸಕರಾಗಿ ಗೆಲುವು ಸಾಧಿಸಿದ್ರು.

ಶಾಸಕರು ಹಾಗೂ ಹಿರಿಯ ಪ್ರಭಾವಿ ನಾಯಕರಾದ ಲಕ್ಷ್ಮಣ್‌ ಸವದಿ ಅವರನ್ನ ಕರೆತರುವ ಜವಾಬ್ದಾರಿಯನ್ನ ಈಗಾಗಲೇ ಬೆಳಗಾವಿ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್‌ ನೀಡಿದ್ದು, ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದೆ. ಇತ್ತ ಬಿ ಎಸ್‌ ಯಡಿಯೂರಪ್ಪ ಅವರು ಸಹ ಲಕ್ಷ್ಮಣ್‌ ಸವದಿ ಹಾಗೂ ಜಗದೀಶ್‌ ಶೆಟ್ಟರ್‌ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಆಫರ್‌ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

Haveri for Jagadish Shettar, Bagalkot for Laxman Savadi: Vijayendra Strategy targets Lingayat votes

ಈಗಾಗಲೇ ಬಿಜೆಪಿ ಹಾಲಿ ಸಂಸದರ ಪೈಕಿ ಕೆಲವು ಸಂಸದರು ವೈಯಕ್ತಿಕವಾಗಿಯೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು, ಕಾಂಗ್ರೆಸ್‌ ನಿಂದ ಮರಳಿ ಕರೆತಂದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನ ಹಾವೇರಿ ಲೋಕಸಭಾ ಕ್ಷೇತ್ರದಿಂದ ಹಾಗೂ ಲಕ್ಷ್ಮಣ್‌ ಸವದಿ ಅವರನ್ನ ಪಕ್ಷಕ್ಕೆ ಕರೆತರುವ ಮೂಲಕ ಬಾಗಲಕೋಟೆ ಕ್ಷೇತ್ರದಿಂದ ಕಣಕ್ಕಿಸುವ ಲೆಕ್ಕಾಚಾರವನ್ನ ಬಿಜೆಪಿ ಹಿರಿಯ ನಾಯಕರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+