ವಂಚನೆ : ಕೆಜೆಪಿ ಮುಖಂಡ ಓಲೇಕಾರ ಬಂಧನಕ್ಕೆ ಆದೇಶ

ಜಿಲ್ಲಾ ವಿಶೇಷ ನ್ಯಾಯಾಲಯ ಎರಡನೇ ಬಾ ಈ ರೀತಿ ಜಾಮೀನು ರಹಿತ ಬಂಧನ ಆದೇಶ ಹೊರಡಿಸಿದೆ. ಈ ಮೂವರನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಬಂಧಿಸದ ಹಿನ್ನೆಲೆಯಲ್ಲಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಮತ್ತೆ ಬಂಧನದ ಆದೇಶ ನೀಡಿದ್ದಾರೆ.
ಬಂಧನದ ಜವಾಬ್ದಾರಿಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸತ್ಯನಾರಾಯಣರಾವ್ ಅವರಿಗೆ ನೀಡಲಾಗಿದೆ.
ಜಿಲ್ಲಾ ವಿಶೇಷ ನ್ಯಾಯಾಲಯ ಸೆ.16ರಂದು ಆಪಾದಿತರ ಬಂಧನಕ್ಕೆ ಆದೇಶಿಸಿ, ಶುಕ್ರವಾರಕ್ಕೆ ಹಾಜರು ಪಡಿಸಲು ಸೂಚಿಸಿತ್ತು. ಆದೇಶ ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯ ಮತ್ತೆ ಬಂಧನದ ಆದೇಶ ನೀಡಿದೆ.
ಶುಕ್ರವಾರ ನಡೆದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕೋರ್ಟಿನಲ್ಲಿ ಹೇಳಿಕೆ ನೀಡಿದ ಪೊಲೀಸರು' ಓಲೇಕಾರ ಹಾಗೂ ಅವರ ಪುತ್ರರನ್ನು ಬಂಧಿಸಲು ಮಾಡಿರುವ ಪ್ರಯತ್ನಗಳು ವಿಫಲವಾಗಿದೆ. ಅವರು ಸಿಗುತ್ತಿಲ್ಲ. ಇನ್ನಷ್ಟು ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು.
ಅದರೆ, ಲೋಕಾಯುಕ್ತ ಪೊಲೀಸರ ಮನವಿಯನ್ನು ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ. ಎಚ್ ಪಿ ಸಂದೇಶ್ ಅವರು ಬಂಧನ ಆದೇಶ ಹೊರಡಿಸಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸತ್ಯನಾರಾಯಣರಾವ್ ಅವರಿಗೆ ಜವಾಬ್ದಾರಿ ನೀಡಿದೆ.
ಹಾವೇರಿ ನಗರದ ಗುತ್ತಿಗೆದಾರ ಶಶಿಧರ ಹಳ್ಳಿಕೇರಿ ಮಾಜಿ ಶಾಸಕ ನೆಹರೂ ಓಲೇಕಾರ, ಅವರ ಇಬ್ಬರು ಪುತ್ರರಾದ ಮಂಜುನಾಥ ಹಾಗೂ ದೇವರಾಜ್ ಸೇರಿ ಆರು ಮಂದಿ ಅಧಿಕಾರಿಗಳ ಮೇಲೆ ಸ್ವಜನ ಪಕ್ಷಪಾತ, ಸುಳ್ಳು ದಾಖಲೆ ಪ್ರಮಾಣ ಪತ್ರ ಸೃಷ್ಟಿ ಹಾಗೂ ಲೋಕಾಯುಕ್ತರಿಗೆ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿರುವ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.
ಲೋಕಾಯುಕ್ತ ಪೊಲೀಸರು ಸಮಗ್ರ ತನಿಖೆ ಕೈಗೊಂಡು ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಕುರಿತು 2-3 ಹಂತದಲ್ಲಿ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ನ್ಯಾಯಾಧೀಶ ಹಾಗೂ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ಈ ಆದೇಶವನ್ನು ನೀಡಿದ್ದಾರೆ ಎಂದು ಸರಕಾರಿ ಅಭಿಯೋಜಕ ವೈ.ಬಿ.ಹುಳಪಲ್ಲೆ ತಿಳಿಸಿದ್ದಾರೆ.












Click it and Unblock the Notifications