ಹಾಸನದ ಟಿಕೆಟ್ ಫೈಟ್; ಎಚ್. ಡಿ. ರೇವಣ್ಣ ಪ್ಲಾನ್ 'ಬಿ' ಏನು?

ಹಾಸನದ ಟಿಕೆಟ್ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದೆ. ಒಂದು ವೇಳೆ ಭವಾನಿ ರೇವಣ್ಣಗೆ ಟಿಕೆಟ್ ಸಿಗದಿದ್ದರೆ ಪ್ಲಾನ್ ಬಿ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಹಾಸನ, ಫೆಬ್ರವರಿ 12; ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಈ ಜಟಿಲ ಸಮಸ್ಯೆಗೆ ಕಾಲವೇ ಉತ್ತರಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಾಜಿ ಸಚಿವ ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಎಚ್. ಡಿ. ಕುಮಾರಸ್ವಾಮಿ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಚರ್ಚೆಯ ವಿಷಯ.

ರಾಜ್ಯದಲ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಹಾಸನ ಜೆಡಿಎಸ್ ಪಕ್ಷದ ಭದ್ರಕೋಟೆ. ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳಲ್ಲಿಯೂ ಜಯಗಳಿಸಬೇಕು ಎಂಬುದು ಪಕ್ಷದ ಗುರಿಯಾಗಿದೆ. ಆದ್ದರಿಂದ ಬಿಜೆಪಿ ವಶದಲ್ಲಿರುವ ಹಾಸನ ಕ್ಷೇತ್ರವನ್ನು ಮತ್ತೆ ಪಡೆಯಬೇಕು ಎಂದು ಜೆಡಿಎಸ್ ತಂತ್ರ ರೂಪಿಸುತ್ತಿದೆ.

Hassan Ticket Row Will HD Revanna Plan B Working In Elections

ದೇವಾಲಯದಲ್ಲಿ ಎಲ್ಲರ ಭೇಟಿ; ಹಾಸನ ಕ್ಷೇತ್ರದ ಟಿಕೆಟ್ ವಿಚಾರದ ಚರ್ಚೆ ಆರಂಭವಾದ ಬಳಿಕ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್. ಡಿ. ರೇವಣ್ಣ ಕುಟುಂಬ ಜೊತೆ ಕಾಣಿಸಿಕೊಂಡರು.

ಭಾನುವಾರ ಹಾಸನದ ಹೊಳೆನರಸೀಪುರ ತಾಲೂಕಿನ ನಗರ್ತಿ ಗ್ರಾಮದಲ್ಲಿ ಈಶ್ವರ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಎಚ್. ಡಿ. ರೇವಣ್ಣ ಕುಟುಂಬ ಸಮೇತ ಪಾಲ್ಗೊಂಡಿದ್ದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು. ಬಳಿಕ ಕುಮಾರಸ್ವಾಮಿ ಅರಸೀಕರೆಯಲ್ಲಿ ನಡೆಯುವ ಪಕ್ಷದ ಸಮಾವೇಶಕ್ಕೆ ತೆರಳಿದರು.

Hassan Ticket Row Will HD Revanna Plan B Working In Elections

ಎಚ್. ಡಿ. ರೇವಣ್ಣ ಪ್ಲಾನ್ 'ಬಿ'; ಎಚ್. ಡಿ. ರೇವಣ್ಣ ಹಾಸನದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಅವರು ಪ್ಲಾನ್ 'ಬಿ' ಏನು ಎಂದು ಸಹ ಆಲೋಚಿಸಿದ್ದಾರೆ ಎನ್ನುತ್ತಿವೆ ಆಪ್ತ ಮೂಲಗಳು.

ಒಂದು ವೇಳೆ ಎಚ್. ಡಿ. ಕುಮಾರಸ್ವಾಮಿ ಮಾಜಿ ಶಾಸಕ ಪ್ರಕಾಶ್ ಪುತ್ರ ಸ್ವರೂಪ್ ಪ್ರಕಾಶ್‌ಗೆ ಹಾಸನದ ಟಿಕೆಟ್ ನೀಡಿದರೆ ಲೆಕ್ಕಾಚಾರವೇ ಬದಲಾಗುವ ನಿರೀಕ್ಷೆ ಇದೆ. ಎಚ್. ಡಿ. ರೇವಣ್ಣ ಹಾಸನದಿಂದ ತಾವೇ ಸ್ಪರ್ಧೆ ಮಾಡುವುದಾಗಿ ಪಟ್ಟು ಹಿಡಿಯಬಹುದು.

ಹಾಸನ ಮತ್ತು ಹೊಳೆನರಸೀಪುರ ಎರಡೂ ಕಡೆ ಎಚ್. ಡಿ. ರೇವಣ್ಣ ಕಣಕ್ಕೆ ಇಳಿದು. ಹಾಸನದಲ್ಲಿ ಗೆದ್ದರೆ ರಾಜೀನಾಮೆ ನೀಡಿ, ಅಲ್ಲಿನ ಉಪ ಚುನಾವಣೆಯಲ್ಲಿ ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬರುವ ನಿರೀಕ್ಷೆ ಇದೆ.

ಒಂದು ವೇಳೆ ಹಾಸನ ಮತ್ತು ಹೊಳೆನರಸೀಪುರ ಕ್ಷೇತ್ರಗಳಲ್ಲಿ ರೇವಣ್ಣ ಟಿಕೆಟ್ ಕೇಳಿದರೆ ಎಚ್. ಡಿ. ಕುಮಾರಸ್ವಾಮಿ ಸಹ ಸಾಧ್ಯವಿಲ್ಲ ಎಂದು ಹೇಳುವುದು ಅಷ್ಟು ಸುಲಭವ ಮಾತಲ್ಲ. ಇದರಿಂದಾಗಿ ಹಾಸನದ ಟಿಕೆಟ್ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಜ್ವಲ್ ರೇವಣ್ಣ ಹಾಸನದ ಸಂಸದರು, ಎಚ್. ಡಿ. ರೇವಣ್ಣ ಹೊಳೆನರಸೀಪುರದ ಶಾಸಕರು ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯರು ಎಚ್. ಡಿ. ರೇವಣ್ಣ ಕುಟುಂಬದ ಮತ್ತೊಬ್ಬರಿಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣದ ಅಪವಾದ ಎದುರಿಸಬೇಕಾಗುತ್ತದೆ ಎಂಬುದು ಕುಮಾರಸ್ವಾಮಿಯ ಆತಂಕವಾಗಿದೆ.

2018ರ ಚುನಾವಣೆ; ಇನ್ನು 2018ರ ಚುನಾವಣೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ರಾಮನಗರ, ಚನ್ನಪಟ್ಟಣ ಎರಡೂ ಕಡೆ ಚುನಾವಣೆಗೆ ಸ್ಪರ್ಧಿಸಿದ್ದರು. ಎರಡೂ ಕಡೆ ಗೆದ್ದರು. ಚನ್ನಪಟ್ಟಣ ಕ್ಷೇತ್ರ ಇಟ್ಟುಕೊಂಡು ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆಗ ರಾಮನಗರ ಉಪ ಚುನಾವಣೆ ಎದುರಾಯಿತು. ಅನಿತಾ ಕುಮಾರಸ್ವಾಮಿ ಉಪ ಚುನಾವಣೆ ಕಣಕ್ಕಿಳಿದು ಜಯಗಳಿಸಿದರು. ಇದೇ ಮಾದರಿ ಹಾಸದನಲ್ಲಿ ನಡೆದರೂ ಅಚ್ಚರಿ ಇಲ್ಲ ಎಂಬ ಸುದ್ದಿಗಳು ಹಬ್ಬಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+