Prajwal Revanna Wikipedia Update: 'ಗೂಗಲ್'ನಲ್ಲಿ 'ಸೇವ್' ಆಯ್ತು ಪ್ರಜ್ವಲ್ ರೇವಣ್ಣ ಅಶ್ಲೀಲ ಕೇಸ್
ಬೆಂಗಳೂರು, ಏಪ್ರಿಲ್ 28: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಜೆಡಿಎಸ್ ಸಂಸದ ಸಾವಿರಾರು ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದಾರೆ. ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ ಬೆನ್ನಲ್ಲೆ ಸಂಸದರ ಈ ಪ್ರಕರಣದ ವಿವರ 'ಗೂಗಲ್ ವಿಕೀಪಿಡಿಯಾ' (Wikipedia) ಸೇರಿದೆ.
ಹೌದು, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳುಳ್ಳ ಪೆನ್‌ಡ್ರೈವ್ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಗೂಗಲ್ ನಲ್ಲಿ ಪ್ರಜ್ವಲ್ ರೇವಣ್ಣ ಅವರ ಹಿನ್ನೆಲೆ ತಿಳಿಸುವ Wikipedia Profile ನಲ್ಲೂ 'ಸೆಕ್ಸ್ ಸ್ಕ್ಯಾಂಡಲ್' ಹೆಸರಿನಲ್ಲಿ ಮಾಹಿತಿ ಅಪ್ಲೋಡ್ ಆಗಿದೆ.

ಈ ಮೂಲಕ ಪೆನ್‌ಡ್ರೈವ್ ಸುಳಿಗೆ ಸಿಲುಕಿ ದೇಶ ಬಿಟ್ಟು ವಿದೇಶ (ಜರ್ಮನಿ) ಸೇರಿರುವ ಪ್ರಜ್ವಲ್ ರೇವಣ್ಣ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಪ್ರವೇಶ, ಕ್ಷೇತ್ರ, ರಾಜಕೀಯ ಪಕ್ಷ ಸೇರಿದಂತೆ ಇಡೀ ಅವರ ಇತಿಹಾಸ ತಿಳಿಸುವ ಗೂಗಲ್ ವಿಕೀಪಿಡಿಯಾದಲ್ಲಿ ಅವರ ಅಶ್ಲೀಲ ವಿಡಿಯೋ ಜಾತಕ ಸಹ ಲಭ್ಯವಾಗಲಿದೆ. ಹಾಗಾದರೆ ಯಾವ ವಿಷಯ ಪ್ರೋಫೈಲ್‌ನಲ್ಲಿ ಅಪ್ಡೇಟ್ ಆಗಿದೆ ಎಂದು ಇಲ್ಲಿ ತಿಳಿಯೋಣ.
ಪ್ರಜ್ವಲ್ ರೇವಣ್ಣ ಗೂಗಲ್ ಪ್ರೋಫೈಲ್ ಅಪ್ಡೇಟ್
ಸಾಮಾನ್ಯವಾಗಿ ಒಬ್ಬರ ರಾಜಕಾರಣಿಯಾಗಲಿ, ಸೆಲೆಬ್ರೆಟಿಗಳಾಗಲಿ ಅಥವಾ ಇನ್ನಿತರ ಸಾರ್ವಜನಿಕ ಜೀವನದಲ್ಲಿರುವ ಪ್ರಮುಖ ವ್ಯಕ್ತಿಗಳ ಜೀವನ, ಇತಿಹಾಸ ಎಲ್ಲವು ಗೂಗಲ್‌ನಲ್ಲಿ (ವೀಕಿಪಿಡಿಯಾ) ಲಭ್ಯವಿರುತ್ತವೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರ ಮಾಹಿತಿ ಸಹ ಲಭ್ಯವಿತ್ತು.
ಆದರೆ ಪೆನ್‌ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣ ಹೊರ ಬರುತ್ತಿದ್ದಂತೆ ಅವರ ಗೂಗಲ್ ಪ್ರೋಪೈಲ್ ನಲ್ಲಿ 'ಸೆಕ್ಸ್ ಸ್ಕ್ಯಾಂಡಲ್-ತನಿಖೆ' ಉಪ ಶಿರ್ಷಿಕೆಯಡಿ ಪ್ರಕರಣದ ಮಾಹಿತಿ ಅಪ್ಲೋಡ್ ಆಗಿವೆ.

ಪ್ರಜ್ವಲ್ ರೇವಣ್ಣ ಬಾಲ್ಯ, ಕೌಟುಂಬಿಕ-ರಾಜಕೀಯ ಹಿನ್ನೆಲೆ, ಆರಂಭಿಕ ಜೀವನ, ರಾಜಕೀಯ ಜೀವನ ಜೊತೆಗೆ 'ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್ ಕೇಸ್ ನ ಅಂಶಗಳು ಅಪ್ಲೋಡ್ ಆಗಿವೆ.
ಲೋಕಸಭಾ ಚುನಾವಣೆ ದಿನವೇ ಪ್ರಕರಣದ ಬಯಲಿಗೆ
ಇದರಲ್ಲಿ ''2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮತ್ತೆ ಹಾಸನ ಲೋಕಸಭಾ ಕ್ಷೇತ್ರದಿಂದ ಕಣ್ಣಕ್ಕಿಳಿದಿದ್ದಾರೆ. ಚುನಾವಣೆಯ ದಿನದಂದು (ಏಪ್ರಿಲ್ 26) ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್ ಸಂಬಂಧಿತ ಕೆಲವು ಅಶ್ಲೀಲ ವಿಡಿಯೋ, ಫೋಟೋಗಳು ವ್ಯಾಪಕವಾಗಿ ಮುನ್ನೆಲೆಗೆ ಬಂದವು.
ಹೀಗೆಂದು ಆರೋಪಿಸಿ ಪೋಲಿಂಗ್ ಏಜೆಂಟ್ ಪೊಲೀಸರಿಗೆ ದೂರು ನೀಡಿದ್ದರು. "ಆರೋಪಿಗಳು ಮನೆ ಮನೆಗೆ ಹೋಗಿ ಈ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸುತ್ತಿದ್ದಾರೆ, ಪ್ರಜ್ವಲ್‌ಗೆ ಮತ ಹಾಕದಂತೆ ಜನರನ್ನು ಪ್ರಚೋದಿಸುತ್ತಿದ್ದಾರೆ" ಎಂದು ಏಜೆಂಟ್ ಆರೋಪಿಸಿದ್ದರು.
ಲೈಂಗಿಕ ಹಗರಣ ಎಂದ ಮಾಧ್ಯಮಗಳು
ಇದರ ಬೆನ್ನಲ್ಲೆ ಅನೇಕ ಮಹಿಳೆಯರನ್ನು ಒಳಗೊಂಡ ಸಾವಿರಾರು ಸೆಕ್ಸ್ ವೀಡಿಯೊಗಳನ್ನು ಪ್ರಜ್ವಲ್ ರೆಕಾರ್ಡ್ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ವಿಷಯ ಚುನಾವಣೆಗೂ ಮೊದಲು ಸ್ವತಃ ಕ್ಷೇತ್ರದಲ್ಲಿ ಗಿರಕಿ ಹೊಡೆಯಿತು. ನಂತರ ರಾಜ್ಯವ್ಯಾಪಿ ವ್ಯಾಪಿಸುತ್ತಿದ್ದಂತೆ ಮಾಧ್ಯಮಗಳು ಇದನ್ನು "ಲೈಂಗಿಕ ಹಗರಣ" ಎಂದು ಕರೆದವು.
ಏಪ್ರಿಲ್ 27 ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಕೋರಿದ ನಂತರ ಕರ್ನಾಟಕ ರಾಜ್ಯ ಸರ್ಕಾರವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿ ಆದೇಶಿತು. ಇಂದು ಪ್ರಜ್ವಲ್ ರೇವಣ್ಣ ಅವರು ದೇಶವನ್ನು ತೊರೆದು ಜರ್ಮನಿಗೆ ಪಲಾಯನ ಮಾಡಿದ ಎಂದು ವರದಿಯಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮಹಿಳೆಯರನ್ನು ಬಲವಂತವಾಗಿ ಅಥವಾ ಅವರ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದೆ. ಸರ್ಕಾರಕ್ಕೆ ಆಯೋಗದಿಂದ ಪತ್ರ ಬರೆಯಲಾಗಿದೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದು, ಮಹಿಳೆಯರಿಗೆ ರಕ್ಷಣೆಗೆ ಆಗ್ರಹಿಸಿತ್ತು. ಆಮ್ ಆದ್ಮಿ ಪಕ್ಷದ ಮಹಿಳಾ ಘಟಕವು ಈ ಹಾಸನದ ಪೆನ್‌ಡ್ರೈವ್ ಪ್ರಕರಣ ಸಿಐಡಿ ವಹಿಸಬೇಕು ಎಂದು ಆಗ್ರಹಿಸಿದ್ದರು. ಇದೀಗ ಅರಸಿಕೆರೆಯಲ್ಲಿ ಮನೆ ಕೆಲಸದಾಕೆ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದೆ. ಸದ್ಯ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ತಪ್ಪು ಯಾರೇ ಮಾಡಿದರೂ ತಪ್ಪು. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.












Click it and Unblock the Notifications