Hasanamba Temple: ಹಾಸನಾಂಬ ಜಾತ್ರಾ ಮಹೋತ್ಸವ: ದರ್ಶನದ ಸಮಯದಲ್ಲಿ ಬದಲಾವಣೆ, ಸಂಪೂರ್ಣ ವಿವರ
ವರ್ಷಕ್ಕೊಮ್ಮೆ ನಡೆಯುವ ಹಾಸನ ಜಿಲ್ಲೆಯ ವಿಶ್ವವಿಖ್ಯಾತ ಹಾಸನಾಂಬ ದೇವಾಲಯದ ಬಾಗಿಲುಗಳು ತೆರೆಯಲು ಕ್ಷಣಗಣನೆ ಶುರುವಾಗಿದೆ. ಪ್ರತಿ ವರ್ಷದಂತೆ ಅಕ್ಟೋಬರ್ 9ರಿಂದ ದೇವಾಲಯದ ಬಾಗಿಲು ತೆರೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ನೆರೆವೇರಿಸಲಾಗುವುದು. ಮೊದಲ ದಿನ ಪೂಜಾ ಕೈಂಕಾರ್ಯಕ್ಕೆ ಮಾತ್ರ ಅವಕಾಶವಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಸಾರ್ವಜನಿಕರಿಗೆ ಅಕ್ಟೋಬರ್ 10ರಿಂದ ಶುಕ್ರವಾರ ಬೆಳಿಗ್ಗೆ 6ರಿಂದ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅಂದು ಸಂಜೆ 7 ಗಂಟೆಗೆ ದರ್ಶನ ನಿಲ್ಲಿಸಿ, ಪೂಜಾ ಕಾರ್ಯಗಳಿಗೆ ಅವಕಾಶ ನೀಡಲಾಗುತ್ತದೆ. ಇನ್ನುಳಿದ ದಿನಗಳಲ್ಲಿ ದೇವಾಲಯವು 24 ಗಂಟೆಗಳು ತೆರೆದಿದ್ದರೂ ಸಹ ಪ್ರತಿ ದಿನ ನೈವೇಧ್ಯ ಮತ್ತು ಅಲಂಕಾರ ಕಾರ್ಯಗಳಿಗೆ ಮಧ್ಯಾಹ್ನ 2ರಿಂದ ಮಧ್ಯಾಹ್ನ 3.30ರ ನಡುವೆ ಮತ್ತು ಬೆಳಗಿನ ಜಾವ 2ರಿಂದ 5ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಈ ಸಮಯಗಳನ್ನು ಹೊರತುಪಡಿಸಿ ಅಕ್ಟೋಬರ್ 10ರಂದು ಶುಕ್ರವಾರ ಬೆಳಗಿನ ಜಾವ 6ರಿಂದ ಅಕ್ಟೋಬರ್ 22ರ ಬುಧವಾರ ಸಂಜೆ 7 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿದೆ.

ಅಕ್ಟೋಬರ್ 22ರಂದು ಸಂಜೆ 7 ಗಂಟೆಗೆ ಸಾರ್ವಜನಿಕರಿಗೆ ಪ್ರವೇಶ ನಿಲ್ಲಿಸಲಾಗುವುದು. ಅಕ್ಟೋಬರ್ 23ರಂದು ಪೂಜಾ ಕೈಂಕರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಸಮಾರೋಪಗೊಳ್ಳಲಿದೆ. ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮೇಲೆ ತಿಳಿಸಿದ ದರ್ಶನದ ಸಮಯವನ್ನು ಗಮನಿಸಿಕೊಂಡು ಬರುವಂತೆ ಕೋರಲಾಗಿದೆ.
ವಿಶೇಷ ದರ್ಶನಕ್ಕೆ ಟಿಕೆಟ್ ದರ ಎಷ್ಟು?
ಅಕ್ಟೋಬರ್ 10, 11, 17, 18, 19, 20ರಂದು ಸಾರ್ವಜನಿಕರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಈ ದಿನಗಳನ್ನು ಹೊರತುಪಡಿಸಿ, ಬೇರೆ ದಿನಗಳಂದು ಆಗಮಿಸಲು ಪ್ರಯತ್ನ ಮಾಡಬಹುದು. ಬರುವ ಸಾರ್ವಜನಿಕರಿಗೆ ಧರ್ಮದರ್ಶನ, 300 ರೂಪಾಯಿ ಹಾಗೂ 1000 ರೂಪಾಯಿ ಟಿಕೆಟ್ ದರದ ಪ್ರತ್ಯೇಕ ಸಾಲುಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗಣ್ಯರಿ ಭೇಟಿ ಸಮಯ ಬದಲಾವಣೆ
ಸಚಿವರು, ಶಾಸಕರು, ನ್ಯಾಯಮೂರ್ತಿಗಳು, ಉನ್ನತ ಅಧಿಕಾರಿಗಳು, ಇತರೆ ಗಣ್ಯರು ಆಗಮಿಸುವರು, ತಮ್ಮ ಆಗಮನದ ದಿನಾಂಕವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಮೊದಲೇ ತಿಳಿಸಿ ಬರಬೇಕು. ನಿಗದಿತ ದಿನಾಂಕದಂದು ಬೆಳಿಗ್ಗೆ 10.30ರಿಂದ 12.30ರ ನಡುವೆ ಮಾತ್ರವೇ ಆಗಮಿಸಬೇಕು. ಬೇರೆ ಅವಧಿಯಲ್ಲಿ ಗಣ್ಯರಿಗೆ ದರ್ಶನಾವಕಾಶ ಇರುವುದಿಲ್ಲ. ಗಣ್ಯರು ಮೊದಲು ಹಾಸನದ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿ ಜಿಲ್ಲಾಡಳಿತದ ವಾಹನದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.
ಗಣ್ಯರು ದರ್ಶನಕ್ಕೆ ಆಗಮಿಸಲು ದಿನಾಂಕವನ್ನು 5 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳ ಕಛೇರಿ ಇ-ಮೇಲ್ ವಿಳಾಸಕ್ಕೆ ([email protected]) ತಿಳಿಸಿ ದಿನಾಂಕವನ್ನು ಮರು ಖಾತರಿಪಡಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9449343588, ಕಚೇರಿ ದೂರವಾಣಿ ಸಂಖ್ಯೆ 08172-250554, 8971221368, ಹಾಸನ ಉಪವಿಭಾಗ ಕಛೇರಿ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ: 08172-257119 ಅನ್ನು ಸಂಪರ್ಕಿಸಬಹುದು.

3 ವೇದಿಕೆಗಳಲ್ಲಿ ವಿಶೇಷ ಕಾರ್ಯಕ್ರಮಗಳು
ಜಾತ್ರಾ ಮಹೋತ್ಸವದ ಅಂಗವಾಗಿ ಈ ಬಾರಿ 3 ವೇದಿಕೆಗಳಲ್ಲಿ ನಾಡಿನ ಸಂಪದ್ಬರಿತ ನೃತ್ಯ, ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಹೆಲಿಕ್ಯಾಪ್ಟರ್ ಪ್ರವಾಸ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಇವುಗಳ ಸಂಪೂರ್ಣ ಪ್ರಯೋಜನ ಮತ್ತು ಅನುಭವನ್ನು ಪಡೆಯಬೇಕಾಗಿ ಆಗಮಿಸುವ ಸಾರ್ವಜನಿಕರಲ್ಲಿ ಕೋರಿದೆ.
ಹಿಂದಿನ ವರ್ಷಗಳ ಅನುಭವಗಳನ್ನು ಪರಿಶೀಲಿಸಿ, ದೇವಾಲಯ ಪ್ರವೇಶ ಬಹಳ ಕಿರಿದಾಗಿರುವುದರಿಂದ, ರಸ್ತೆ ಸಂಪರ್ಕ ಬಹಳ ಸೀಮಿತವಾಗಿರುವುದರಿಂದ, ದೇಶದಾದ್ಯಂತ ಒಂದು ದಿನಕ್ಕೆ ಸರಾಸರಿ 2 ಲಕ್ಷ ಸಾರ್ವಜನಿಕರ ಆಗಮನದ ನಿರೀಕ್ಷೆ ಇರುವುದರಿಂದ ಈ ಬದಲಾವಣೆಗಳನ್ನು ತರಲಾಗಿದೆ. ಆಗಮಿಸುವ ಲಕ್ಷಾಂತರ ಸಾರ್ವಜನಿಕರ ಸುಗಮ ದರ್ಶನ ಹಾಗೂ ಸುರಕ್ಷತೆಯ ದೃಷ್ಠಿಯಿಂದ ಗಣ್ಯರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications