ಹಾಸನಾಂಬ ಉತ್ಸವ: ಆದಾಯದಲ್ಲಿ ಹೊಸ ಇತಿಹಾಸ ಸೃಷ್ಟಿ!
Hasanamba Utsav; crores of revenue: ಹಾಸನಾಂಬೆ ದೇವಿಯ ದರ್ಶನೋತ್ಸವ ಮುಗಿದ ಬೆನ್ನಲ್ಲೇ ಹುಂಡಿ ಎಣಿಕೆ ನಡೆದಿದ್ದು, ಹಲವು ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ದರ್ಶನೋತ್ಸವವು ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಈ ಬಾರಿ ಹಾಸನಾಂಬೆ ದರ್ಶನ ಪಡೆಯಲು ಭಕ್ತಾಧಿಗಳು ಸಾಕಷ್ಟು ಸವಾಲು ಎದುರಿಸಿದ್ದರು. ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಪರದಾಡಿದ್ದರು. ಇದರ ಹೊರತಾಗಿಯೂ ಈ ಬಾರಿ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.
ಹಾಸನಾಂಬ ದರ್ಶನೋತ್ಸವದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಈ ಬಾರಿಯ ಹಾಸನಾಂಬೆ ದರ್ಶನೋತ್ಸವದಿಂದ ಬರೋಬ್ಬರಿ 12.63 ಕೋಟಿ ರೂಪಾಯಿ ಆದಾಯ (12,63,83,808) ಸಂಗ್ರಹವಾಗಿದೆ. ಹಾಸನಾಂಬ ದೇವಾಲಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮೊತ್ತದ ದಾಖಲೆಯ ಆದಾಯ ಇದು ಎಂದು ಹೇಳಲಾಗುತ್ತಿದೆ.

1,000 ಸಾವಿರ ರೂಪಾಯಿ ಹಾಗೂ 300 ರೂಪಾಯಿ ವಿಶೇಷ ಟಿಕೆಟ್ ಮಾರಾಟ ಹಾಗೂ ಲಡ್ಡು ಪ್ರಸಾದದ ಮಾರಾಟದಿಂದಲೇ ದೇವಾಲಯದ ಆಡಳಿತ ಮಂಡಳಿಗೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ. ಹಾಸನಾಂಬ ದೇವಾಲಯದಲ್ಲಿ ಟಿಕೆಟ್ ಮಾರಾಟ ಹಾಗೂ ಪ್ರಸಾದದಿಂದಲೇ ಬರೋಬ್ಬರಿ 9,67,27,180 ರೂಪಾಯಿ ಆದಾಯ ಸಂಗ್ರಹವಾಗಿರುವುದು ವರದಿಯಾಗಿದೆ.
20 ಲಕ್ಷ ಜನ ಭಕ್ತಾಧಿಗಳ ಭೇಟಿ: ಈ ಬಾರಿ ಬರೋಬ್ಬರಿ 20 ಲಕ್ಷ ಜನ ಭಕ್ತಾಧಿಗಳು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ ನೂಕು ನುಗ್ಗಲು, ಅವ್ಯವಸ್ಥೆ ಹಾಗೂ ಟಿಕೆಟ್‌ಗಳ ಗೊಂದಲದ ನಡುವೆಯೂ ದಾಖಲೆಯ ಭಕ್ತಾಧಿಗಳು ದೇವಿಯ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಾರಿ ಹಾಸನಾಂಬ ದರ್ಶನೋತ್ಸವದಲ್ಲಿ ಬರೋಬ್ಬರಿ 20.40 ಲಕ್ಷ ಜನ ಭಕ್ತಾಧಿಗಳು ಭೇಟಿ ನೀಡಿರುವುದು ದಾಖಲಾಗಿದೆ. ಇದು ಕಳೆದ ಬಾರಿಗಿಂತ ಹೆಚ್ಚಾಗಿದೆ. ಇನ್ನು ಹುಂಡಿ ಸೇರಿ ಕಾಣಿಕೆಯಾಗಿ 2,55,97,567 ರೂಪಾಯಿ ಸಂಗ್ರಹವಾಗಿದ್ದು, ಹಾಸನಾಂಬೆ ದೇಗುಲಕ್ಕೆ ಒಟ್ಟು 12,63,83,808 ರೂಪಾಯಿ ಹರಿದು ಬಂದಿದೆ.
ಚಿನ್ನ, ಬೆಳ್ಳಿ ದಾನ: ಭಕ್ತಾಧಿಗಳು ದೇವರಿಗೆ ಹಣ ಮಾತ್ರವಲ್ಲ. ಚಿನ್ನಾ ಹಾಗೂ ಬೆಳ್ಳಿಯನ್ನೂ ಸಹ ಕಾಣಿಕೆಯಾಗಿ ನೀಡಿದ್ದಾರೆ. ಈ ಬಾರಿ ಹಾಸನಾಂಬ ಉತ್ಸವದಲ್ಲಿ ಬರೋಬ್ಬರಿ 51 ಗ್ರಾಂ ಚಿನ್ನ, 913 ಗ್ರಾಂ ಬೆಳ್ಳಿ ಮೂಲಕ ಭಕ್ತರು ಕಾಣಿಕೆ ನೀಡಿದ್ದಾರೆ. ಇನ್ನು ಹುಂಡಿ ಎಣಿಕೆ ಕಾರ್ಯವು ಸುದೀರ್ಘವಾಗಿ ನಡೆದಿತ್ತು. ಹುಂಡಿ ಎಣಿಕೆಯನ್ನು 500ಕ್ಕೂ ಹೆಚ್ಚು ಜನ ಬರೋಬ್ಬರಿ ಹಾಗೂ ಸತತ 7 ಗಂಟೆಗಳ ಕಾಲ ಎಣಿಸಿದ್ದಾರೆ. ಕೇವಲ 9 ದಿನಗಳಲ್ಲಿ ಹಾಸನಾಂಬ ದೇವಾಲಯದಲ್ಲಿ ಬರೋಬ್ಬರಿ ಕೋಟಿ ಕೋಟಿ ಆದಾಯ ಹರಿದು ಬಂದಿದೆ.
ಹಾಸನದ ಪ್ರಸಿದ್ಧ ದೇವಾಲಯಗಳಲ್ಲಿ ಹಾಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಹಾಸನಾಂಬ ದೇವಾಲಯ ವಿಶೇಷವಾಗಿದೆ. ಈ ಬಾರಿ ದೇವಿಯ ದರ್ಶನ ಮಾಡಲು ಭಕ್ತಾಧಿಗಳು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ವರ್ಷದಲ್ಲಿ ಒಮ್ಮೆ ಮಾತ್ರ ದೇವಸ್ಥಾನದ ಬಾಗಿಲುಗಳನ್ನು ತೆಗೆಯಲಾಗುತ್ತದೆ.
ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಹಾಸನದ ಹಾಸನಾಂಬ ದೇವಾಲಯವೂ ಒಂದಾಗಿದೆ. ಈ ದೇವಾಲಯ ಹಲವು ಕಾರಣಗಳಿಗೆ ಪ್ರಸಿದ್ಧಿ ಗಳಿಸಿದೆ. ವರ್ಷದಲ್ಲಿ ಒಮ್ಮೆ ಮಾತ್ರ ಈ ದೇವಾಲಯದ ಬಾಗಿಲುಗಳನ್ನು ತೆಗೆಯುವುದು ಹಾಗೂ ವರ್ಷ ಪೂರ್ತಿ ಇಲ್ಲಿ ದೇವಿಗೆ ಇರಿಸಿದ ದೀಪ ಉರಿಯುತ್ತದೆ ಎನ್ನುವುದು ವಿಶೇಷವಾಗಿದೆ.












Click it and Unblock the Notifications