ವಿಆರ್ ಎಲ್ ಬಸ್ ಅಪಘಾತ: ಕುಟುಂಬದ ನಾಲ್ವರ ಸಾವು

ಕಾರಿನಲ್ಲಿದ್ದ ಮೋಹನ್ ಕುಮಾರ್ (40), ಪುಷ್ಪಾವತಿ (36), ಕುಶಾಲ್ (10) ಮತ್ತು ಲಕ್ಷ್ಮೀ (6) ಮೃತ ದುರ್ದೈವಿಗಳು. ಇವರೆಲ್ಲಾ ಕುಕ್ಕೆ ಶ್ರೀ ಕ್ಷೇತ್ರಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸಾಗುತ್ತಿದ್ದರು. ಆಲೂರಿನ ಪಾಳ್ಯ ಬಳಿ ಬಸ್ ಮತ್ತು ಕಾರಿನ ಮಧ್ಯೆ ಮುಖಾಮುಖಿಯಾಗಿ ರಾತ್ರಿ ಸುಮಾರು 2 ಗಂಟೆಯಲ್ಲಿ ಈ ಅಪಘಾತ ಸಂಭವಿಸಿದೆ.
ಕುಮಾರ್-ಪುಷ್ಪಾವತಿ ಕುಟುಂಬದವರು ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರಿನವರು.
ಬಿಜಾಪುರದಲ್ಲಿ ಲಾರಿಗಳ ಮುಖಾಮುಖಿ: ಮತ್ತೊಂದು ಅಪಘಾತದಲ್ಲಿ ಬಿಜಾಪುರದ ಸಿಂಧಗಿ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಹಿಂದಿನಿಂದ ಡಿಕ್ಕಿಯಾಗಿ, ಡಿಕ್ಕಿ ಹೊಡೆದ ಲಾರಿಯಲ್ಲಿದ್ದ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.












Click it and Unblock the Notifications