'ದೇವಾಲಯಗಳಲ್ಲಿ ಸುಪ್ರಭಾತ ಸೇವೆಗೆ ಅವಕಾಶಕ್ಕಾಗಿ ಮನವಿ'
ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸದಿರಲು ಒತ್ತಾಯಗಳ ನಡುವೆ ಹಿಂದೂ ಮುಖಂಡರು ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಈ ಬೇಡಿಕೆಯಲ್ಲಿ ಹಿಂದೂ ದೇವಾಲಯಗಳಲ್ಲಿ ಸುಪ್ರಭಾತ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಕಳೆದ ಕೆಲ ತಿಂಗಳಿನಿಂದಲೂ ಧಾರ್ಮಿಕ ಬಿಕ್ಕಟ್ಟು ಶುರುವಾಗಿದೆ. ಹಿಜಾಬ್, ಆರ್ಥಿಕ ನಿರ್ಬಂಧ, ಹಲಾಲ್, ಆಜಾನ್ ಹೀಗೆ ಅನೇಕ ವಿಷಯಗಳಲ್ಲಿ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ವಿವಾದ ತಾರಕಕ್ಕೇರಿದೆ. ಹುಬ್ಬಳ್ಳಿ ಕಿಚ್ಚು ಹೊತ್ತಿಕೊಂಡಿರುವಾಗ ಹಿಂದೂ ಮುಖಂಡರು, ಧಾರ್ಮಿಕ ಪರಿಷತ್ ಸದಸ್ಯರ ಹರ್ಷ ಮುತಾಲಿಕ್ ಧಾರ್ಮಿಕ ದತ್ತಿಗೆ ಮನವಿ ಸಲ್ಲಿಸಿ ಪ್ರತಿದಿನ ಬೆಳಗ್ಗೆ ಸುಪ್ರಭಾತ ಸೇವೆಗೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಹರ್ಷ ಮುತಾಲಿಕ್ ಸಲ್ಲಿಸಿದ ಮನವಿಯಲ್ಲಿ ಏನಿದೆ?
ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಪ್ರತಿದಿನ ಬೆಳಗ್ಗೆ ಸುಪ್ರಭಾತ ಹಾಕಲು ಹಾಗೂ ವಿಶೇಷ ದಿನಗಳಲ್ಲಿ ಪೂಜೆ ಮತ್ತು ಕೈಕರ್ಯಗಳನ್ನು ಮೈಕ್‍ನ ಮೂಲಕ ಪಠಿಸಲು ಸರಿಯಾದ ಉಪಕರಣಗಳನ್ನು ಬಳಸಲು ನೀಡಬೇಕು. ದೇವಸ್ಥಾನಗಳಲ್ಲಿ ಸುಪ್ರಭಾತ, ಪೂಜಾ ಮಂತ್ರ ಪಠಿಸುವುದನ್ನು ಭಕ್ತಾದಿಗಳಿಗೆ ಮುಟ್ಟಿಸಲು ಮೈಕ್ ಅಗತ್ಯವಾಗಿದೆ. ಹೀಗಾಗಿ ಲೌಡ್ ಸ್ಪೀಕರ್, ಸೌಂಡ್ ಸಿಸ್ಟಂ, ಮೈಕ್ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆಗೊಳಿಸುವ ಅಥವಾ ಅವುಗಳನ್ನು ತೆಗೆದು ಹಾಕುವಂತೆ ಒತ್ತಾಯಗಳ ನಡುವೆ ಈ ವರದಿಯನ್ನು ಸಲ್ಲಿಸಲಾಗಿದೆ.
Recommended Video













Click it and Unblock the Notifications