KSRTC Bus: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ಯಾಂಟ್‌ ಬಿಚ್ಚಿದ ಕಾಮುಕ, ಖಾಸಗಿ ಭಾಗ ಸ್ಪರ್ಶಿಸಿ ಯುವತಿಗೆ ಕಾಟ

ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿಕಾಮಣ್ಣರ ಹಾವಳಿ ಹೆಚ್ಚಾಗಿದೆ. ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಕಿರುಕುಳ ನೀಡುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಆದರೆ ಸರ್ಕಾರಿ ಸಾರಿಗೆಯಾದ ಕೆಎಸ್‌ಆರ್‌ಟಿಸಿ ಬಸ್‌ನಲ್ಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವೇ? ಎಂಬ ಪ್ರಶ್ನೆ ಮೂಡಿಸುವಂತಹ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಬೀದಿಕಾಮಣ್ಣರು ಬಸ್‌ನಲ್ಲಿ ಪ್ರಯಾಣಿಸುವ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಈ ಎರಡೂ ಘಟನೆ ನಡೆದಿದೆ. ಬಸ್‌ ತುಂಬಾ ಪ್ರಯಾಣಿಕರಿದ್ದರೂ ನೀಚನೊಬ್ಬ ಮಾಡಬಾರದ ಕೆಲಸ ಮಾಡಿ ವಿಕೃತಿ ಮೆರೆದಿದ್ದಾನೆ.

ಹೌದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಕೃತನನ್ನು ಕಂಡು ಉಳಿದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಸಾರ್ವಜನಿಕರ ಎದುರಲ್ಲೇ ಪ್ಯಾಂಟ್‌ ಬಿಚ್ಚಿ **** ಮಾಡಿಕೊಂಡಿದ್ದಾನೆ. ಆತ ತುಮಕೂರು ನಿವಾಸಿ ಎಂದು ತಿಳಿದುಬಂದಿದೆ.

Harassing Woman In KSRTC Bus Shocking Incidents Reported In Bengaluru Tumkur Doddaballapura

ಬಸ್‌ನಲ್ಲಿ ಸೀಟ್‌ನಲ್ಲಿ ಕುಳಿತಿದ್ದ ಯುವತಿಯ ಪಕ್ಕದಲ್ಲಿ ನಿಂತು ಅನುಚಿತ ವರ್ತಿಸಿದ್ದಾನೆ ತೋರಿದ್ದಾನೆ. ನೆಲಮಂಗಲದ ಟೋಲ್ ಬಳಿ ಕಾಮುಕ, ಯುವತಿಯ ಮೇಲೆ ಕೈ ಇಟ್ಟು, ಪ್ಯಾಂಟ್‌ಗೆ ಕೈಹಾಕಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಕೊನೆಗೆ ಯುವತಿಯ ಬಟ್ಟೆ ಮೇಲೆ ವೀ*ರ್ಯ ಚೆಲ್ಲಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಜೋರಾಗಿ ಕಿರುಚಾಡಿದ್ದಾರೆ. ಆಗ ಬಸ್‌ನಲ್ಲಿದ್ದವರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಆ ಯುವತಿ ತಮ್ಮ ಪೋಷಕರಿಗೆ ಫೋನ್‌ ಮಾಡಿ ವಿಚಾರ ತಿಳಿಸಿದ್ದಾರೆ. ಪೊಲೀಸರು ಕ್ಯಾತಸಂದ್ರ ಟೋಲ್‌ ಬಳಿ ಆತನನ್ನ ವಶಕ್ಕೆ ಪಡೆದು ಕೇಸ್‌ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಖಾಸಗಿ ಭಾಗ ಮುಟ್ಟಿ ಕಿರುಕುಳ

ಇಂತಹ ಮತ್ತೊಂದು ಘಟನೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ನಡೆದಿದೆ. ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವೈದ್ಯೆಯೊಬ್ಬರು ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್‌ ಹತ್ತಿದ ಯುವಕ ವೈದ್ಯೆಯ ಪಕ್ಕ ಬಂದು ಕುಳಿತಿದ್ದ. ಸ್ವಲ್ಪ ಸಮಯದ ನಂತರ ಅವರನ್ನು ಕಂಡು ಪಕ್ಕದಲ್ಲಿಯೇ ಬಂದು ಕುಳಿತಿದ್ದ. ನಂತರ ವೈದ್ಯೆಯ ಖಾಸಗಿ ಭಾಗವನ್ನು ಸ್ಪರ್ಶಿಸಿ ನೀಚತನ ಪ್ರದರ್ಶಿಸಿದ್ದು, ಇದರಿಂದ ಅವರು ಕಸಿವಿಸಿಗೊಂಡಿದ್ದಾರೆ. ಈತ ಪದೇ ಪದೇ ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಬಸ್ ಡ್ರೈವರ್‌ಗೆ ಮಾಹಿತಿ ನೀಡಿದ್ದಾರೆ.

ಬಳಿಕ ವೈದ್ಯೆಯ ಸಹೋದರ ಪೊಲೀಸರಿಗೆ ವಿಷಯ ತಿಳಿಸಿದ್ದು, ಕಾಮುಕ ಕೂಡಲೇ ಅಲ್ಲಿಂದ ಎಸ್ಕೇಪ್‌ ಆಗಲು ಪ್ರಯತ್ನಪಟ್ಟಿದ್ದಾನೆ. ಆಗ ಪ್ರಯಾಣಿಕರು ಹಾಗೂ ಕಂಡಕ್ಟರ್ ಸೇರಿ ಅವನನ್ನು ಹಿಡಿದು ಸಂಜಯ್ ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ವಿರುದ್ಧ ವೈದ್ಯೆ ದೂರು ನೀಡಿದ್ದು, ಪೊಲೀಸರು ಬೆಂಡೆತ್ತಿದ್ದಾರೆ.

ಪ್ರತ್ಯೇಕ ಆಸನ ವ್ಯವಸ್ಥೆ ಜಾರಿ ಮಾಡಿ

ಈ ಘಟನೆಗಳಿಂದ ಬಸ್ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಕೆಎಸ್‌ಆರ್‌ಟಿಸಿ ಕೂಡ ಮಹಿಳೆಯರಿಗೆ ಸೇಫ್‌ ಅಲ್ವಾ? ಎನ್ನುವ ಪ್ರಶ್ನೆ ಎದುರಾಗಿದೆ. ಬಿಎಂಟಿಸಿಯಲ್ಲಿ ಈಗಾಗಲೇ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಇರುವುದರಿಂದ ಇಂತಹ ಬೀದಿಕಾಮಣ್ಣರಿಗೆ ಕಡಿವಾಣ ಬಿದ್ದಿದೆ. ಅದೇ ರೀತಿ ಕೆಎಸ್‌ಆರ್‌ಟಿಸಿಯಲ್ಲೂ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಸನದ ನಿಯಮ ಜಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯಾರು ಎಲ್ಲಿ ಬೇಕಾದರೂ ಕೂರುವ ಅವಕಾಶ ಇರುವುದರಿಂದಲೇ ಇಂತಹ ವಿಕೃತರು ಹೆಚ್ಚಾಗುತ್ತಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+