Harangi Dam: ಇಂದು ಭಾರೀ ಪ್ರಮಾಣದ ನೀರು ಬಿಡುಗಡೆ, ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಆತಂಕ, ಎಚ್ಚರಿಕೆ
ಬೆಂಗಳೂರು, ಜುಲೈ 14: ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಹಾಮಳೆ ಮುಂದುವರಿದೆ. ಹೀಗಾಗಿ ವಿವಿಧ ಜಲಾಶಯಗಳಲ್ಲಿನ ನೀರು ಒಳಹರಿವು ಹೆಚ್ಚಳ, ನೀರು ಹೊರ ಬಿಡುಗಡೆ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಜುಲೈ 14ರಂದು ಹಾರಂಗಿ ಜಲಾಶಯದಿಂದ ವ್ಯಾಪಕವಾಗಿ ನೀರನ್ನಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಜಲಾನಯನ ಪ್ರದೇಶಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಕೊಡಗು ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಮುಂದುವರಿದ ಪರಿಣಾಮ ವಿವಿಧ ನದಿಗಳ ನೀರು ಸಂಗ್ರಹದಲ್ಲಿ ಏರಿಕೆ ಆಗುತ್ತಿದೆ. ಇದರಿಂದಾಗಿ ಜಲಾಶಯಗಳು ಭರ್ತಿ ಆಗುತ್ತಿವೆ. ಕಾವೇರಿ ಉಪನದಿಯಾಗಿರುವ ಹಾರಂಗಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಣೆಕಟ್ಟಿನ ಒಳಹರಿವು ನೀರು ಹೆಚ್ಚಾಗುತ್ತಿದೆ.

ಹೀಗಾಗಿ ಭಾನುವಾರದಂದು ಬೆಳಗ್ಗೆ 8 ಗಂಟೆಗೆ 4,691 ಕ್ಯೂಸೆಕ್ಸ್ ನೀರು ಬಿಡಲಾಯಿತು. ಇದಾಗಿ ಕೆಲವೇ ಗಂಟೆಗಳಲ್ಲಿ ಮತ್ತೆ ಅಂದರೆ 11ಗಂಟೆಗೆ ಹೊತ್ತಿಗೆ 9600 ಕ್ಯೂಸೆಕ್ ನೀರನ್ನು ಹಾರಂಗಿ ನದಿಗೆ ಬಿಡಲಾಯಿತು. ಹಾರಂಗಿ ನದಿ ಮತ್ತು ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿಯ ಆತಂಕ ಆ ಭಾಗದ ನಿವಾಸಿಗಳಲ್ಲಿ ಮನೆ ಮಾಡಿದೆ.
ಒಂದು ಕಡೆ ಮಳೆ ಸುರಿಯುವಿಕೆ ಮುಂದುವರಿದರೆ, ಮತ್ತೊಂದೆಡೆ ಜಲಾಶಯಗಳಿಂದ ನೀರು ಹೊರ ಹರಿವು ಏರಿಕೆ ಆಗುತ್ತಿದೆ. ಮೊನ್ನೆಯಷ್ಟೇ ಕೆಆರ್ಎಸ್‌ನಿಂದ ನೀರು ಬಿಡಲು ಆರಂಭಿಸಿದ್ದರು. ಇದೀಗ ಹಾರಂಗಿ ಜಲಾಶಯದಿಂದ ನೀರು ಬಿಡಲಾಗುತ್ತಿದೆ.
ಕ್ರಮೇಣ ಆಣೆಕಟ್ಟಿನ ಒಳಹರಿವು ಏರಿಕೆ
ಸರ್ಕಾರ ನೀರು ಬಿಡುಗಡೆ ಮಾಡುವ ಮೊಲದೇ ಹಾರಂಗಿ ಅಣೆಕಟ್ಟಿನ ಒಳಹರಿವು ಏರಿಕೆ ಆಗಿದ್ದು, ಯಾವ ಸಮಯದಲ್ಲಾದರೂ ನೀರನ್ನು ನದಿಗೆ ಬಿಡುಗಡೆ ಮಾಡಬಹುದು. ಗೇಟ್ ತೆರೆಯುವ ಮೊದಲೇ ಜಲಾನಯನ ಪ್ರದೇಶ ವ್ಯಾಪ್ತಿಯ ನಿವಾಸಿಗಳು ಎಚ್ಚರಿಕೆ ವಹಿಸಬೇಕು. ಸುರಕ್ಷಿತ ಸ್ಥಳಕ್ಕೆ ತೆರಯಬೇಕು ಎಂದು ಎಚ್ಚರಿಕೆ ನೀಡಿತ್ತು.

ಸದ್ಯ ಹಾರಂಗಿ ಜಲಾಶಯದ ಕ್ರೆಸ್ತ್ ಗೇಟ್ ತೆರೆದು ಹಾರಂಗಿ ನದಿಗೆ ನೀರು ಬಿಡಲಾಗಿದೆ. ಇದು ಕುಡಗೈನಲ್ಲಿ ಕಾವೇರಿ ನದಿ ಸೇರುತ್ತದೆ. ಹೀಗಾಗಿ ಈ ನದಿ ಕಾವೇರಿ ಉಪನದಿಗಳಲ್ಲಿ ಒಂದಾಗಿದೆ.
ಹಾರಂಗಿ ಇಂದಿನ ಮಟ್ಟ ಎಷ್ಟಿದೆ?
ಇಂದು ಭಾನುವಾರ ಜುಲೈ 14ರ ಹಾರಂಗಿ ಆಣೆಕಟ್ಟಿನ ನೀರಿನ ಮಟ್ಟ ನೋಡುವುದಾದರೆ, ಹಾರಂಗಿ ಒಟ್ಟು ಸಾಮರ್ಥ್ಯ 871 ಟಿಎಂಸಿ ಇದ್ದು, ಈಗಾಗಲೇ ನಿರಂತರ ಮಳೆಯಿಂದಾಗಿ 869 ಟಿಎಂಸಿ ಯಷ್ಟು ನೀರು ತುಂಬಿದಿದೆ. ಒಳಹರಿವು ನಿರಂತರವಾಗಿ ಹೆಚ್ಚಾಗಿದ್ದು ನೀರು ಹೊರ ಬಿಡಲಾಗುತ್ತಿದೆ.
ಹಾರಂಗಿ ಒಳಹರಿವು 2854 ಕ್ಯೂಸೆಕ್ ಇತ್ತು, ನೀರಿನ ಹೊರ ಹರಿವು ಮೊದಲು 2851 ಕ್ಯೂಸೆಕ್ ಇತ್ತು. ನಂತರ ಹೊರ ಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ಮಾಹಿತಿ ನೀಡಿದೆ.












Click it and Unblock the Notifications