ಭಾರತದ ಪ್ರಸಿದ್ಧ ಪ್ರವಾಸೋದ್ಯಮ ಗ್ರಾಮ ಘೋಷಿಸಿದ ಕೇಂದ್ರ ಸರ್ಕಾರ, ಕರ್ನಾಟಕದ್ದೇ ಅದು ಯಾವುದು ತಿಳಿಯಿರಿ
ವಿಜಯನಗರ, ಸೆಪ್ಟೆಂಬರ್ 28: ಕರ್ನಾಟಕದ ವಿಶ್ವಪರಂಪರೆಯ ತಾಣವಾದ ಹಂಪಿಯ ಖ್ಯಾತಿಗೆ ಈಗ ಮತ್ತೊಂದು ಗರಿ ಮೂಡಿದೆ. ವಿಜಯನಗರ ಸಾಮ್ರಾಜ್ಯ ಕಾಲದ ಈ ಸ್ಥಳವನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಬುಧವಾರ 2023ರ ಭಾರತದ ಪ್ರವಾಸೋದ್ಯಮ ಗ್ರಾಮ ಎಂದು ಘೋಷಣೆ ಮಾಡಿದೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದ್ದು, ಇದು ಗ್ರಾಮೀಣ ಮೂಲಸೌಕರ್ಯ ಮತ್ತು ಅದರ ಪರಂಪರೆ, ಸಂಸ್ಕೃತಿಯನ್ನು ಸುಧಾರಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನವನ್ನು ಪಡೆಯಲು ಸಹಾಯವಾಗುತ್ತದೆ. ಇದು ಯುನೆಸ್ಕೋ ರಕ್ಷಿತ ಪ್ರದೇಶವನ್ನು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ನೋಡಲ್ ಏಜೆನ್ಸಿ, ರೂರಲ್ ಟೂರಿಸಂ ಮತ್ತು ರೂರಲ್ ಹೋಸ್ಟೇ ಆಯೋಜಿಸಿದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಸ್ಪರ್ಧೆ-2023 ಆವೃತ್ತಿಯ ಭಾಗವಾಗಿತ್ತು.

ಪ್ರವಾಸೋದ್ಯಮ ಸ್ಪರ್ಧೆಯ ಒಂಬತ್ತು ಉತ್ತಮ ಸ್ಥಳಗಳಲ್ಲಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವಾಗಿ ಹಂಪಿ ಗುರುತಿಸಲ್ಪಟ್ಟಿದೆ ಎಂದು ಸಚಿವಾಲಯವು ನೀಡಿದ ಪ್ರಶಸ್ತಿಯನ್ನು ಪ್ರಕಟಿಸಿದ ಪತ್ರದಲ್ಲಿ ತಿಳಿಸಲಾಗಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಿದ 795 ಅರ್ಜಿಗಳಲ್ಲಿ ಹಂಪಿಯನ್ನು ಆಯ್ಕೆ ಮಾಡಲಾಗಿದೆ. ಇದೊಂದು ಹೆಮ್ಮೆಯ ಕ್ಷಣ ಎಂದು ಕರ್ನಾಟಕ ಪ್ರವಾಸೋದ್ಯಮ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಬುಧವಾರ ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತವು ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಜನಪ್ರಿಯಗೊಳಿಸಲು ಮತ್ತು ಹೋಮ್‌ಸ್ಟೇಗಳ ನೋಂದಣಿ, ಕಾರ್ಯಾಚರಣೆಯನ್ನು ಉತ್ತೇಜಿಸಲು ಕೆಲಸ ಮಾಡಬಹುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಗ್ರಾಮೀಣ ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಹಳ್ಳಿಯ ಅನುಭವವನ್ನು ಪಡೆಯಲು ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಕೃಷಿ ಮತ್ತು ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ರಾಜ್ಯಕ್ಕೆ ದೊಡ್ಡ ಉತ್ತೇಜನವಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮತ್ತೊಬ್ಬ ಅಧಿಕಾರಿ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಸ್ವಚ್ಛತಾ ಪಖವಾಡ (ಸ್ವಚ್ಛತೆ ಪಾಕ್ಷಿಕ) ಮತ್ತು ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಇಲಾಖೆಯು ಒಂಬತ್ತು ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನವನ್ನು ಕೈಗೊಂಡಿತು. ಅವುಗಳೆಂದರೆ ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನ, ಹಂಪಿ, ಪಟ್ಟದಕಲ್ಲು, ಬೇಲೂರು, ಶೃಂಗೇರಿ, ಸೋಮನಾಥಪುರ, ಮೇಲುಕೋಟೆ ಮತ್ತು ಶ್ರೀರಂಗಪಟ್ಟಣ. ಇದರೊಂದಿಗೆ ಇಲಾಖೆಯು ಎಲೆಕ್ಟ್ರಿಕ್ ಬೈಕ್ ರ‍್ಯಾಲಿಯನ್ನು ಸಹ ಆಯೋಜಿಸಿದ್ದು, ವರ್ಷದ ಥೀಮ್-ಗ್ರೀನ್ ಇನ್ವೆಸ್ಟ್ಮೆಂಟ್ ಅನ್ನು ಒತ್ತಿಹೇಳಿತು.












Click it and Unblock the Notifications