ಸಿದ್ದರಾಮಯ್ಯ ಟ್ವೀಟ್‌ಗೆ ವಿಶ್ವನಾಥ್ ಪ್ರತಿಟ್ವೀಟ್‌

ಬೆಂಗಳೂರು, ಮೇ 13: ಸಿದ್ದರಾಮಯ್ಯ-ವಿಶ್ವನಾಥ್ ಅವರ ನಡುವಿನ ವಾಕ್ಸಮರ ಹೆಚ್ಚಾಗುತ್ತಲೇ ಇದೆ, ಪರಸ್ಪರರು ಒಬ್ಬರನ್ನೊಬ್ಬರು ದೂಷಿಸಿಕೊಳ್ಳುತ್ತಲೇ ಇದ್ದಾರೆ.

ವಿಶ್ವನಾಥ್ ಅವರ ವಿರುದ್ಧ ಸಿದ್ದರಾಮಯ್ಯ ಅವರು ಇಂದು ಮಾಡಿದ್ದ ಟ್ವೀಟ್‌ಗೆ ಪ್ರತಿಯಾಗಿ ವಿಶ್ವನಾಥ್ ಅವರು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಮೈತ್ರಿ ಧರ್ಮಕ್ಕೆ ಧಕ್ಕೆ ಬರುವ 'ನಾನೇ ಮುಖ್ಯಮಂತ್ರಿ' ಎನ್ನುವ ವಿಷಯ ಪ್ರಸ್ತಾವನೆ ಪ್ರಥಮವಾಗಿ ಸಿದ್ದರಾಮಯ್ಯನವರೆ ನಿಮ್ಮಿಂದಲೇ ಆಗಿದು ಎಂದು ಸಿದ್ದರಾಮಯ್ಯ ಅವರನ್ನು ತಿವಿದಿದ್ದಾರೆ.

H Vishwanath reply to Siddaramaiah tweet about him

ಮುಂದುವರೆದು, ನನ್ನ ಹೇಳಿಕೆ ಬಹಳ ಜವಾಬ್ದಾರಿಯುತವಾಗಿದೆ. ಕಿಡಿಗೇಡಿತನ, ಕುಖ್ಯಾತಿ, ಎಲ್ಲರನ್ನೂ ಏಕವಚನದಲ್ಲಿ ಸಂಭೋದಿಸುವುದು, ಸುಳ್ಳು ಹೇಳುವುದು ನನ್ನ ಜನ್ಮದಲ್ಲಿ ನನ್ನ ರಕ್ತದಲ್ಲಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಸಮನ್ವಯ ಸಮಿತಿಗೆ ನನ್ನನ್ನು ಆಹ್ವಾನಿಸಿ ಅಲ್ಲಿಯೇ ಬಂದು ಉತ್ತರಿಸುತ್ತೇನೆ ಎಂದಿರುವ ವಿಶ್ವನಾಥ್, ನಿಮಗೆ ನಮ್ಮ ಕುಲದೈವ ಬೀರೇಶ್ವರ ಒಳ್ಳೆಯ ಬುದ್ದಿ ಕೊಡಲಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲವೆಂದು ವಿಶ್ವನಾಥ್ ಅವರು ಹೇಳಿದ್ದರು, ಇದಕ್ಕೆ ಆಕ್ರೋಶದಿಂದ ಸಿದ್ದರಾಮಯ್ಯ ಉತ್ತರಿಸಿದ್ದರು, ಇವರಿಬ್ಬರು ನಾಯಕರ ನಡುವಿನ ವಾಗ್ವಾದ ದಿನೇ-ದಿನೇ ಹೆಚ್ಚಾಗುತ್ತಿದ್ದು, ಜೆಡಿಎಸ್-ಕಾಂಗ್ರೆಸ್‌ ಪಕ್ಷಗಳ ನಡುವಿನ ಜಗಳವಾಗಿ ಬದಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+