ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿನೇ ಇಲ್ಲ, 144 ಹಾಕಿ ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ: ಜಿ ಟಿ ದೇವೇಗೌಡ ಕಿಡಿ
ಕಲಬುರಗಿ, ಸೆಪ್ಟೆಂಬರ್ 26: ರಾಜ್ಯಾದ್ಯಂತ ಕಾವೇರಿಗಾಗಿ ಹಲವು ಸಂಘಟನೆಗಳು ಹೋರಾಟ ಮಾಡುತ್ತಿದ್ದು, ಈ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿನೇ ಇಲ್ಲ, 144 ಹಾಕಿ ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ನಾಯಕ ಜಿ ಟಿ ದೇವೇಗೌಡ ಕಿಡಿಕಾರಿದ್ದಾರೆ.
ಈ ಕುರಿತು ಮಂಗಳವಾರ ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇವತ್ತು ಮೋದಿ ನೇತೃತ್ವದಲ್ಲಿ ದೇಶ ಸುರಕ್ಷಿತವಾಗಿದೆ. 1983 ರಲ್ಲಿ ಗೋಲಿ ಬಾರ್ ಆಯ್ತು. ಗೋಲಿ ಬಾರ ಆದ ಸಂದರ್ಭದಲ್ಲಿ ಸರ್ಕಾರವೇ ಹೊಯ್ತು. ಇದೀಗ 144 ಸೆಕ್ಷನ್ ಹಾಕಿದ್ರಿ, ಹೋರಾಟಕ್ಕೆ, ರೈತ ಸಂಘಟನೆಗಳು, ಚಲನಚಿತ್ರ ನಟರು, ವರ್ತಕರು ಎಲ್ಲರೂ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದರು.

ಇನ್ನೂ ಬಿಜೆಪಿ, ಜೆಡಿಎಸ್ ಕೂಡ ಕಾವೇರಿ ಹೋರಾಟಕ್ಕೆ, ಬಂದ್ ಗೆ ಬೆಂಬಲ ಕೊಟ್ಟಿವೆ. ಹೋರಾಟಗಾರರು ಶಾಂತಿಯುತ ಪ್ರತಿಭಟನೆ ಮಾಡ್ತಿದ್ದರು, ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿನೇ ಇಲ್ಲ, 144 ಹಾಕಿ ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹಾಗೂ ಇವರು ಸೇರಿಕೊಂಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ರಾಜ್ಯದ ಹಿತ ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ ಎಂದು ಜಿಟಿ ದೇವೆಗೌಡ ಕಿಡಿಕಾರಿದ್ದಾರೆ. ತಮಿಳುನಾಡು ಹೇಳಿದಂತೆ ಕಾವೇರಿ ತೀರ್ಪು ಕೊಟ್ಟಿದ್ದಾರೆ. ಮಾಧ್ಯಮಗಳಿಗೆ ಇರುವ ಕಾಳಜಿ ಸರ್ಕಾರಕ್ಕೆ ಇಲ್ಲದಂತಾಗಿದೆ. ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ವಿಫಲ ಆಗಿದೆ ಎಂದು ಹೇಳಿದರು.
ಮೇ ತಿಂಗಳಲ್ಲೇ ಹವಾಮಾನ ಇಲಾಖೆ ಮಳೆ ಇಲ್ಲ ಅಂತಾ ವರದಿ ಕೊಟ್ಟಿದೆ. ಆದರೆ, ಕಾಗ್ರೆಸ್ ಸರ್ಕಾರ ಗಮನ ಹರಿಸಲಿಲ್ಲ. ಹವಾಮಾನ ಇಲಾಖೆ ವರದಿ ಕೊಟ್ಟ ತಕ್ಷಣವೇ ಕಾವೇರಿ ನೀರು ನಿರ್ವಹಣೆ ಮಂಡಳಿ ಬಳಿ ಸರ್ಕಾರ ಹೊಗಲೇ ಇಲ್ಲ. ಕಾವೇರಿ ನೀರು ನಿರ್ವಹಣೆ ಮಂಡಳಿಗೆ ವಾಸ್ತವಾಂಶ ತಿಳಿಸಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ರಾಜಕೀಯಗೋಸ್ಕರ ರಾಜ್ಯದ ಹಿತ ಬಲಿಕೊಡ್ತಿದ್ದಾರೆ. ರಾಜ್ಯದ ಹಿಂತವನ್ನ ಬಲಿ ಕೊಟ್ಟು ಲೋಕಸಭೆ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಎಂದು ಗುಡುಗಿದರು.
ಬಿಜೆಪಿ, ಜೆಡಿಎಸ್ ವೈರಿಗಳ ಥರ ಇರಬೇಕು ಅನ್ನೋ ವಿಚಾರ ಕಾಂಗ್ರೆಸ್ ಗೆ ಇದೆ. ಕಾಂಗ್ರೆಸ್ ಸಚಿವರೆ ಮೂರು ಡಿಸಿಎಂ, ಐದು ಡಿಸಿಎಂ ಅಂತಿದ್ದಾರೆ. ಮೂರು ಡಿಸಿಎಂ, ಐದು ಡಿಸಿಎಂ ಬೇಕು ಅನ್ನೋ ಈ ರೀತಿ ಸರ್ಕಾರ ಯಾವತ್ತಾದ್ರು ನೋಡಿದ್ದಿರಾ. ಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿದ್ರು ವಿಫಲವಾದ ಮುಖ್ಯಮಂತ್ರಿ ಆಗೋಗಿ ಬಿಟ್ಟಿರಲ್ಲ ಸಿದ್ದರಾಮಯ್ಯನವರೇ ಎಂದು ಜಿ ಟಿ ದೇವೆಗೌಡ ವ್ಯಂಗ್ಯವಾಡಿದರು.
ಕಾವೇರಿ ನೀರಿನ ಬಗ್ಗೆ ದೇವೆಗೌಡರಿಗೆ ಎಲ್ಲವೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ದೇವೆಗೌಡರಿಗೆ ಬಂದು ಭೇಟಿ ಆಗಲಿಲ್ಲ, ಸಲಹೆ ಪಡೆಯಲಿಲ್ಲ. ರಾಜ್ಯದ ಹಿತ ಇವರಿಗೆ ಬೇಡ ಭ್ರಷ್ಟಾಚಾರ, ವರ್ಗಾವಣೆ ಧಂಧೆಯಲ್ಲಿ ತೊಡಗಿದ್ದಾರೆ. ಕೊರೊನಾ ಬಂದು ಎಷ್ಟೊ ಜನ ಸತ್ತರೂ. ಕಾವೇರಿ ನೀರು ಖಾಲಿ ಅದ್ರೆ ಜನ ಎಲ್ಲಿ ಉಳಿತಾರೆ. ಕಾವೇರಿ ನೀರಿನ ಬಗ್ಗೆ ಸರ್ಕಾರಕ್ಕೆ ಕಾಳಜಿನೇ ಇಲ್ಲ ಎಂದು ಕೈ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications