Gruha Lakshmi Scheme: ಮಹಿಳೆಯರಿಗೆ ಸಿಗಲಿದೆ ಗುಡ್‌ ನ್ಯೂಸ್‌: 'ಗೃಹಲಕ್ಷ್ಮಿ ಹಣ 4,000 ರೂ.ಗೆ ಏರಿಕೆ'

ಬೆಂಗಳೂರು, ಮಾರ್ಚ್‌ 19: 2023ರ ವಿಧಾನಸಭೆ ಚುನಾವಣೆ ಗೆದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಆಗಿದ್ದೇ ಪಂಚ ಗ್ಯಾರಂಟಿ ಯೋಜನೆಗಳು. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಿಂದ ರ ಪ್ರತಿ ಕುಟುಂಬದಲ್ಲಿ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ಹಣವನ್ನು ನೀಡುವ ಮಾತು ಕೊಟ್ಟಿದ್ದ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಗೆದ್ದು ಬೀಗಿತ್ತು.ಇನ್ನೂ, ಕೆಲ ತಿಂಗಳಯಿಂದ ಗೃಹ ಲಕ್ಷ್ಮಿ ಹಣ ಜಮಾ ಆಗದಿರುವ ಹಿನ್ನೆಲೆ ಮಹಿಳೆಯರು ಆಕ್ರೋಶವನ್ನು ಹೊರ ಹಾಕಿದ್ರು. ಇದೀಗ 16 ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಇದೀಗ ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಗಲಿದೆ.

ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಜಾಗತಿಕವಾಗಿ ಕೂಡ ಸದ್ದು ಮಾಡುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಿಂದ ಕರ್ನಾಟಕ ದಿವಾಳಿ ಆಗಲಿದೆ ಅಂತಾ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಈ ಸಮಯದಲ್ಲೇ, ಗೃಹಲಕ್ಷ್ಮೀ ಹಣ 4,000 ರೂಪಾಯಿ ಹೆಚ್ಚಳ ಮಾಡುವ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆ ಕುರಿತು ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಅವರು ಮಾತನಾಡಿ, ನಾನು ಡಿಕೆ ಶಿವಕುಮಾರ್ ಪದಗ್ರಹಣದಂದೇ ಬಡವರಿಗೆ ಹೇಗಾದರೂ ಸಹಾಯ ಮಾಡಬೇಕು ಅಂತ ಹೇಳಿದ್ದೆ. ರಾಜ್ಯದಲ್ಲಿ ಯಜಮಾನಿ ಮಹಿಳೆಯರಿಗೆ ಜಾರಿಗೊಳಿಸಿರುವಂತ ಗೃಹ ಲಕ್ಷ್ಮೀ ಯೋಜನೆಯೂ ವಿಶೇಷವಾದಂತ ಹಣಕಾಸು ಯೋಜನೆಯಾಗಿದೆ ಎಂದು ಹೇಳಿದರು.

Gruhalakshmi Money Will Be Increased To Rs 4000 Says Kunigal Ranganath

ನಮ್ಮ ಸರ್ಕಾರವು 2028ರಲ್ಲಿ ಬಂದ್ರೆ ಈಗ ಗೃಹ ಲಕ್ಷ್ಮೀ ಯೋಜನೆಯಡಿ ಯಜಮಾನಿ ಮಹಿಳೆಯರಿ ನೀಡಲಾಗುತ್ತಿರುವಂತ 2000 ಹಣವನ್ನು 4000ಕ್ಕೆ ಏರಿಕೆ ಮಾಡುವುದಾಗಿ ಸದನದಲ್ಲೇ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಘೋಷಿಸಿದರು.ಇಂದು ಗೃಹ ಲಕ್ಷ್ಮೀ ಯೋಜನೆಯಿಂದಾಗಿ ಲಕ್ಷಾಂತರ ಮಹಿಳೆಯ ನೆಮ್ಮದಿಯ ಜೀವನ ನಡೆಸುವಂತೆ ಆಗಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆ ಆರಂಭದಲ್ಲಿ ಬಹಳಷ್ಟು ಜನರು 2000 ಬರುತ್ತಾ? ಕೊಡುತ್ತಾ ಈ ಸರ್ಕಾರ ಅಂತ ಟೀಕೆ ಮಾಡಿದ್ರು. ಆದರೇ 2000 ಕೊಟ್ಟಿದ್ದು ಕಣ್ಣಾರೆಯೇ ನೋಡುತ್ತಿದ್ದೇವೆ ಎಂದು ಹೇಳಿದರು.

ಯಾರಾದರೂ ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ವಿರೋಧ ಮಾಡಿದರೇ ಅವರಿಗೆ ರಾಜ್ಯದ ಯಜಮಾನಿ ಮಹಿಳೆಯರ ಶಾಪ ತಟ್ಟುತ್ತೆ. ಮುಂದಿನ ಬಾರಿಗೆ ನಮ್ಮ ಕಾಂಗ್ರೆಸ್ ಸರ್ಕಾರವೇ ಬಂದ್ರೇ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದ್ರೆ 2000 ಗೃಹ ಲಕ್ಷ್ಮೀ ಹಣವನ್ನು 4000ಕ್ಕೆ ಏರಿಕೆ ಮಾಡಲು ನಾವು ತಯಾರಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಅವರು ತಿಳಿಸಿದರು.

ಹಳ್ಳಿಯಲ್ಲಿ ಇರುವವರಿಗೆ ಇನ್ನೂ 5,000 ಮನೆಗಳನ್ನು ಕೊಡಿಸಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಕೆಲವು ಕುಟುಂಬಗಳು ಗುಡಿಸಲಲ್ಲಿ ವಾಸಮಾಡುತ್ತಿದ್ದಾರೆ. 24,000 ಸಾವಿರ ರೂ. ಪ್ರತಿ ವರ್ಷ ಕೊಟ್ಟರೇ ಆ ಬದುಕಿನ ಬದಲಾವಣೆಯ ಬೆಳಕನ್ನು ನೋಡಬೇಕು ಅಂದರೆ ಬೆಂಗಳೂರಲ್ಲಿ ಇರೋರು ಬಂದು ನೋಡಬೇಕು. ದಯವಿಟ್ಟು ಗ್ಯಾರಂಟಿ ಸ್ಕೀಂ ಗೃಹಲಕ್ಷ್ಮಿ ಬಗ್ಗೆ ಯಾರಾದರು ವಿರೋಧ ಮಾಡಿದರೆ ಆ ಶಾಪ ತಟ್ಟುತ್ತದೆ ಎಂದು ಹೇಳಲು ಇಚ್ಛೆ ಪಡುತ್ತೇನೆ. ಇವತ್ತು ನಾನು ಚಾಲೆಂಜ್ ಹಾಕುತ್ತಿದ್ದೇನೆ. ಮುಂದಿನ ಸರ್ಕಾರ ಯಾವುದೇ ಬದಲಾವಣೆ ಆದರೂ ಯಾರೂ ಗ್ಯಾರೆಂಟಿ ಸ್ಕೀಂ ನಿಲ್ಲಸಲು ಆಗುವುದಿಲ್ಲ. ಮುಂದಿನ ಸಾಲಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಾಪಾಸ್ ಅಧಿಕಾರಕ್ಕೆ ಬಂದರೆ 2000 ರೂ. ಅನ್ನು 4000 ರೂ.ಗೆ ಏರಿಕೆ ಮಾಡಲು ನಾವು ತಯರಾಗುತ್ತೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+