ಗೃಹ ಲಕ್ಷ್ಮೀ: ಪಡಿತರ ಚೀಟಿ ತಿದ್ದುಪಡಿ ಅವಕಾಶ ವಿಸ್ತರಣೆ: ದಿನಾಂಕ, ಸಮಯ, ಯಾವ ಜಿಲ್ಲೆಗೆ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಬಡತನ ರೇಖೆಗಿಂತ ಕೆಳಗಿನವರಿಗೆ (BPL ಕಾರ್ಡುದಾರರು) ಮಾರ್ಪಾಡು ಮಾಡಲು, ಹೊಸ ಹೆಸರುಗಳ ಸೇರ್ಪಡೆ, ತೆಗೆಯುವುದು ಸೇರಿದಂತೆ ಪಡಿತರ ಕಾರ್ಡುಗಳ ತಿದ್ದುಪಡಿಗೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ಈ ತಿದ್ದುಪಡಿ ಇರುವ ಅವಕಾಶದ ಸೌಲಭ್ಯವನ್ನು ಇನ್ನೂ 03 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಆದರೆ ಈ ಕಾರ್ಯಕ್ರಮ ನಿರ್ದಿಷ್ಟ ಜಿಲ್ಲೆಗಳಿಗೆ ಮಾತ್ರ ಅನ್ವಯಿಸಲಿದೆ.
ಹೌದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ತಿದ್ದುಪಡಿಗೆ ಅವಕಾಶ ನೀಡಿ ಸೋಮವಾರ ತಿಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್-ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಚೀಟಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸರ್ಕಾರದ 'ಅನ್ನ ಭಾಗ್ಯ' ಮತ್ತು 'ಗೃಹ ಲಕ್ಷ್ಮಿ' ಯೋಜನೆಗಳ ಲಾಭ ಪಡೆಯಲು ಇದು ಉಪಯೋಗವಾಗುತ್ತಿದೆ.

ಈ ಸಂಬಂಧ ಇಲಾಖೆಯು ಬಿಪಿಎಲ್ ಕಾರ್ಡುದಾರರಿಗೆ ಹೆಸರುಗಳ ಮಾರ್ಪಾಡು, ವಿಳಾಸ ಸೇರ್ಪಡೆಯಂತಹ ತಿದ್ದುಪಡಿಗಳಿಗೆ ಮತ್ತೊಂದು ಅವಕಾಶ ನೀಡಿದೆ. ಇನ್ನೂ ಇಲಾಖೆಯ ತೀರ್ಮಾನವು ರಾಜ್ಯದ ಯಾವ ಜಿಲ್ಲೆಗಳಲ್ಲಿ ಅತೀ ಹೆಚ್ಚು ಬೇಡಿಕೆ ಇದೆಯೆ ಆ ಜಿಲ್ಲೆಗಳಿಗೆ ಸೀಮಿತಿವಾಗಿದೆ. ಇದಕ್ಕೆ ಬೆಂಗಳೂರಿನ ನಿವಾಸಿಗಳು ತಿದ್ದುಪಡಿಗೆ ಅನುಮತಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಗದಗ, ದಕ್ಷಿಣ ಕನ್ನಡ, ಹಾಸನ, ಹಾವೇರಿ, ಮೈಸೂರು, ವಿಜಯಪುರ, ಕೊಡಗು, ಮಂಡ್ಯ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಬಿಪಿಎಲ್ ಕಾರ್ಡುದಾರರು ಮಾತ್ರ ತಿದ್ದುಪಡಿಗೆ ಮಾಡಿಕೊಳ್ಳಲು ಅವಕಾಶ ಇದೆ. ಇಲ್ಲಿನ ನಾಗರಿಕಕುರ ಇದೇ ಅಕ್ಟೋಬರ್ 16, 17 ಮತ್ತು 18 ರಂದು ತಿದ್ದುಪಡಿಗಾಗಿ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಅದೇ ರೀತಿ ದಾವಣಗೆರೆ, ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿ, ವಿಜಯನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಜನರಿಗೆ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 19, 20 ಮತ್ತು 21 ರಂದು ಅವಕಾಶ ನೀಡಲಾಗಿದೆ.

ಎಲ್ಲೆಲ್ಲಿ ಪಡಿತರ ಚೀಟಿ (BPL ಕಾರ್ಡ್) ತಿದ್ದುಪಡಿಗೆ ಅವಕಾಶ ಇದೆ
ಮೇಲೆ ತಿಳಿಸಲಾದ ಜಿಲ್ಲೆಗಳ ನಾಗರಿಕರು ತಮ್ಮ ಪಡಿತರ ಕಾರ್ಡುಗಳಲ್ಲಿ ಏನಾದರೂ ತಪ್ಪುಗಳು ಇದ್ದರೆ. ವಿಳಾಸ, ಹೆಸರು ಬದಲಾಯಿಸುವುದು ಇದ್ದರೆ ಇಲ್ಲವೇ ಇನ್ನಿತರ ತಿದ್ದುಪಡಿಗಳು ಇದ್ದಲ್ಲಿ ಅವರು ಹತ್ತಿರದ ಕರ್ನಾಟಕ ಒನ್ ಮತ್ತು ಗ್ರಾಮ್ ಒನ್ ಕೇಂದ್ರಗಳನ್ನು ಸಂಪರ್ಕಿಸಬೇಕು. ಅವುಗಳು ಬೆಳಗ್ಗೆ 10ಗಂಟೆಯಿಂದ ಸಂಜೆ 7 ರವರೆಗೆ ಬೇಟಿ ನೀಡಬಹುದಾಗಿದೆ.
BPL ಕಾರ್ಡ್‌ಗಳಲ್ಲಿ ಬದಲಾವಣೆಗಳನ್ನು ಮಾಡಲು ಕಾರ್ಡುದಾರರು ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಿದ ನಂತರ, ಅದನ್ನು ಪರಿಶೀಲಿಸಲಾಗುತ್ತದೆ ಮತ್ತು ಅನುಮೋದನೆಯಾದರೆ ಹೊಸ ಕಾರ್ಡ್ ನೀಡಲಾಗುತ್ತದೆ.
ಗೃಹ ಲಕ್ಷ್ಮಿ ಯೋಜನೆ ಪ್ರಯೋಜನಗಳನ್ನು ಪಡೆಯಲು ಕುಟುಂಬ ಮಹಿಳೆಯು ಆ ಕುಟುಂಬದ ಮುಖ್ಯಸ್ಥಳಾಗಿರಬೇಕು ಎಂಬ ನಿಯಮ ರೂಪಿಸಳಾಗಿದೆ. ಹೀಗಾಗಿ ಮಹಿಳೆಯು ಬಿಪಿಎಲ್ ಕಾರ್ಡಿನಲ್ಲಿ ಮುಖ್ಯಸ್ಥರ ಸ್ಥಳ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications