Gruha Lakshmi Scheme: ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದೀರಾ? 32, 33ನೇ ಕಂತಿನ ಕುರಿತು ಇಲ್ಲಿದೆ ಮಹತ್ವದ ಅಪ್‌ಡೇಟ್
ಬೆಂಗಳೂರು: ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ.
ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇನ್ನೂ ಗೃಹ ಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯ ಬಗ್ಗೆ ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಮಾಹಿತಿ ನೀಡಿದ್ದು, ಗ್ಯಾರಂಟಿ ಸರ್ಕಾರದಿಂದ ಕೊಪ್ಪಳ ಜಿಲ್ಲೆಯಲ್ಲಿನ ಒಟ್ಟು 3,13,183 ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜೂನ್-2026ರ ಮಾಹೆಯ ಒಟ್ಟು 62,63,66,000 ರೂ. ಬಿಡುಗಡೆಯಾಗಿದ್ದು, ಅರ್ಹ ಎಲ್ಲ ಫಲಾನುಭವಿಗಳ ಖಾತೆಗೆ 32 ನೇ ಕಂತಿನ ತಲಾ 2,000 ರೂ. ಹಣ ಜಮಾ ಆಗುತ್ತಿದೆ. ಎರಡ್ಮೂರು ದಿನದಲ್ಲಿ ಜಮಾ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.
33ನೇ ಕಂತಿನ ಹಣವು ಕೂಡ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಗೃಹಲಕ್ಷ್ಮಿ ಯೋಜನೆಯ ದಾಖಲಾತಿಗಳ ಪರಿಶೀಲನೆಯಿಂದ ಯಾವುದೇ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಕೊಪ್ಪಳ ಜಿಲ್ಲೆಯಲ್ಲಿನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಮರಣ ಹೊಂದಿದ್ದಾಗಿ ಗುರುತಿಸಿದ 7086 ಫಲಾನುಭವಿಗಳಿಗೆ ಜಮೆಯಾಗಿದ್ದ ಸಹಾಯಧನ ಮೊತ್ತದಲ್ಲಿ ರೂ. 86,67,608 ಗಳನ್ನು ಆ ಫಲಾನುಭವಿಗಳ ಬ್ಯಾಂಕ್ ಖಾತೆಯಿಂದ ಮರಳಿ ಪಡೆದು, ಖಜಾನೆ-2 ಮೂಲಕ ಸರ್ಕಾರಕ್ಕೆ ಮರು ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
32ನೇ ಕಂತಿನ ಹಣ ಯಾರಿಗೆ ಸಿಗಲಿದೆ?
ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು, ಯೋಜನೆಯ ಮಾನದಂಡಗಳನ್ನು ಪೂರೈಸಿರುವ ಅರ್ಹ ಫಲಾನುಭವಿಗಳಿಗೆ 32ನೇ ಕಂತಿನ ಹಣ ಜಮೆಯಾಗಲಿದೆ. ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಸೇರಿದಂತೆ ಅಗತ್ಯ ದಾಖಲೆಗಳು ಸರಿಯಾಗಿರುವುದು ಹಾಗೂ ಖಾತೆ ಸಕ್ರಿಯವಾಗಿರುವುದು ಮುಖ್ಯವಾಗಿದೆ. ಕೆಲವು ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗಿದ್ದರೆ, ಇನ್ನೂ ಕೆಲವರ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹಣ ಜಮೆಯಾಗದವರು ಆತಂಕಪಡುವ ಅಗತ್ಯವಿಲ್ಲ.
ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್, ಮೊಬೈಲ್‌ಗೆ ಬರುವ ಬ್ಯಾಂಕ್ ಸಂದೇಶ ಅಥವಾ ಬ್ಯಾಂಕ್ ಸಂಪರ್ಕಿತ ಸೇವೆಗಳ ಮೂಲಕ ಹಣ ಜಮೆಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.ಹಣ ಜಮೆಯಾಗದಿದ್ದರೆ, ತಮ್ಮಆಧಾರ್-ಬ್ಯಾಂಕ್ ಖಾತೆ ಲಿಂಕ್, ಬ್ಯಾಂಕ್ ಖಾತೆಯ ಸಕ್ರಿಯ ಸ್ಥಿತಿ ಹಾಗೂ ಯೋಜನೆಗೆ ಸಂಬಂಧಿಸಿದ ದಾಖಲೆಗಳ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ.
ದಾಖಲೆಗಳಲ್ಲಿ ಸಮಸ್ಯೆಯಿದ್ದರೆ?
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಯಾವುದೇ ತಾಂತ್ರಿಕ ಅಥವಾ ದಾಖಲೆ ಸಮಸ್ಯೆ ಎದುರಾದರೆ, ಸಂಬಂಧಪಟ್ಟ ಸೇವಾ ಕೇಂದ್ರ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು ಇತರೆ ವಿವರಗಳು ಸರಿಯಾಗಿರುವುದನ್ನು ಫಲಾನುಭವಿಗಳು ಖಚಿತಪಡಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಯೋಜನೆಯಾಗಿ ಮುಂದುವರಿದಿದ್ದು, ಪ್ರತಿ ತಿಂಗಳ ಆರ್ಥಿಕ ನೆರವು ಕುಟುಂಬದ ದೈನಂದಿನ ಅಗತ್ಯಗಳಿಗೆ ಸಹಕಾರಿಯಾಗುತ್ತಿದೆ.


Click it and Unblock the Notifications
