Gruha Lakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಈ ದಿನ ಹಣ ಬಿಡುಗಡೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ, ಫೆಬ್ರವರಿ 24: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮೆ ಆಗುವ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಮುಂದಿನ 8 ದಿನಗಳಲ್ಲಿ ಯಜಮಾನಿಯರ ಖಾತೆಗೆ ಜಮೆ ಆಗಲಿದೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಬಿಜೆಪಿಯವರು ಅಪಪ್ರಚಾರ ಮಾಡಲಿ. ನಾವು ಈಗಾಗಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ತಾಲೂಕು ಪಂಚಾಯಿತಿ ಮುಖಾಂತರ ಬಿಡುಗಡೆ ಮಾಡಬೇಕು ಅಂತ ಹೇಳಿರೋದ್ರಿಂದ ಸ್ವಲ್ಪ ತಡವಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನಿಲ್ಲೋದಿಲ್ಲ. 8-10 ದಿನಗಳಲ್ಲಿ ಬರುತ್ತೆ ಅಂತ ಹೇಳಿದ್ದೆ. 2 ದಿನ ಕಳೆದಿದೆ. ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ರಸ್ತೆ ಅಪಘಾತದಿಂದ ನಾನು ವಿಶ್ರಾಂತಿ ಪಡೆಯುತ್ತಿದ್ದೆ. ವಿಶ್ರಾಂತಿಯಲ್ಲಿದ್ದ ಕಾರಣಕ್ಕೆ ಹಣ ವಿಳಂಬವಾಗಿದೆ. ಇನ್ನೊಂದು 8 ದಿನಗಳಲ್ಲಿ ಹಣ ಮಹಿಳೆಯರ ಖಾತೆಗೆ ಜಮೆಯಾಗಲಿದೆ ಎಂದು ಹೇಳಿದ್ದಾರೆ. ಕೆಲವು ತಾಂತ್ರಿಕ ದೋಷಗಳಿಂದ ಮಹಿಳೆಯರ ಖಾತೆಗೆ ಕಳೆದ ಮೂರು ತಿಂಗಳಿಂದ ಹಣ ಜಮೆಯಾಗಿಲ್ಲ. ಆದರೆ ಮುಂದಿನ 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ ಆಗುತ್ತದೆ. ಹೊಸ ಮಾದರಿಯಲ್ಲಿ ಗೃಹ ಲಕ್ಷ್ಮಿಯ ಹಣ ಜಮಾ ಆಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಐದು ತಾಲ್ಲೂಕು ಪಂಚಾಯಿತಿಗಳಿಗೆ ಹಣ ನೀಡಿದ್ದೇವೆ. ಅಲ್ಲಿಂದ ಸಿಡಿಪಿಒ ಮೂಲಕ ಹಣ ಬಿಡುಗಡೆ ಮಾಡಲಾಯಿತು. ಸರಿಯಾಗಿ ಒಂದು ವಾರ ಹತ್ತು ದಿನದೊಳಗೆ ಗೃಹ ಲಕ್ಷ್ಮಿಯ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉತ್ತರಿಸಿ, ಇಂತಹ ಘಟನೆಗಳನ್ನ ಖಂಡಿಸುತ್ತೇನೆ. ಘಟನೆ ನಡೆದು ಐದೇ ನಿಮಿಷಕ್ಕೆ ಕಮಿಷನರ್ ಅವರಿಗೆ ಮಾತಾಡಿದೆ.
ಯಾರು ತಪ್ಪಿತಸ್ಥರಿದ್ದಾರೆ ಅವರನ್ನ ತಕ್ಷಣ ಅರೆಸ್ಟ್ ಮಾಡುವಂತೆ ಹೇಳಿದ್ದೆ. ನಾವೆಲ್ಲರೂ ಮೊದಲು ಭಾರತೀಯರು, ಕನ್ನಡಿಗರು, ಸ್ವರಾಜ್ಯದ ಬಗ್ಗೆ ಮಾತಾಡಿದಾಗ ನಾಲ್ಕೈದು ಜನ ಪುಂಡರು ಬಂದು. ಭಾಷಾ ವಿವಾದ ಎಳೆದು ರಾಜಕೀಯ ಬೆಳೆ ಬೇಯಿಸಿಕೊಳ್ತಿದ್ದಾರೆ ಇದನ್ನ ಖಂಡಿಸುತ್ತೇನೆ.
ನನ್ನ ಕ್ಷೇತ್ರದಲ್ಲಿ ಭಾಷಾ ವಿವಾದ ಕಿತ್ತು ಹಾಕಿದ್ದೇವೆ. ಸರ್ಕಾರಿ ನೌಕರ ಮೇಲೆ ಕೈ ಮಾಡಿದ್ದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ರೀತಿ ನಾವೆಲ್ಲಾ ಮಾಡ್ತೇವಿ, ಕರ್ನಾಟಕ ರಾಜ್ಯ ಬೇರೆ ಅಲ್ಲಾ ಇನ್ನೊಂದು ರಾಜ್ಯ ಬೇರೆಯಲ್ಲ. ಆ ರಾಜ್ಯದ ಜನರು ನಮ್ಮ ಬಸ್ ಡ್ರೈವರ್ ಗಳಿಗೆ ಧಮಕಿ ಕೊಡುವುದು ನಿಲ್ಲಬೇಕು. ಇದನ್ನ ಇಲ್ಲಿಗೆ ಮುಗಿಸಬೇಕು. ಸ್ಥಳೀಯ ಸಿಪಿಐ ಕರ್ತವ್ಯ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ ಅನ್ನೋದನ್ನ ನಾನು ಕೇಳಿದ್ದೇನೆ. ಸುಮಧುರವಾದ ವಾತಾವರಣ ಇದನ್ನ ಕೆಡಸಬೇಡಿ. ಇದರಲ್ಲಿ ಸ್ಥಳೀಯ ಸಿಪಿಐ ಅವರು ಗಮನಕ್ಕೆ ತರದೇ ಪೋಕ್ಸೋ ಕೇಸ್ ಮಾಡಿದ್ದಾರೆ. ನಾವು ಹೇಳಿದ ಮೇಲೆಯೂ ರಾತ್ರಿ 12ಗಂಟೆಗೆ ಕೇಸ್ ಮಾಡಿದ್ದಾರೆ. ಇದರ ಬಗ್ಗೆ ಗೃಹಸಚಿವರಿಗೆ ಮತ್ತು ಡಿಜಿ ಅವರಿಗೆ ಮಾತಾಡಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.












Click it and Unblock the Notifications