ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೀರು, ಟಿಪ್ಪು ತಾತನ ನೆನಪೆಂದರೆ ಚುನಾವಣೆ ಕಾಲ ಬಂದಿದೆ ಎಂದರ್ಥ: ಬಿ.ಎಲ್.ಸಂತೋಷ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಟಿಪ್ಪು ತಾತನ ಹೆಸರು ನೆನಪಾಗುವ ಇನ್ನೊಂದು ಪಕ್ಷ ಇದೆ. ಚುನಾವಣಾ ಕಾಲ ಬಂದ ಕಾರಣ ಹೀಗೆ ಆಗುತ್ತಿದೆ. ಕೆಲವರಿಗೆ ಭಯೋತ್ಪಾದಕ ಚಟುವಟಿಕೆಯಲ್ಲೂ ಬುದ್ಧಿ ಸರಿ ಇಲ್ಲದ ಪ್ರಶ್ನೆ ಏಳುತ್ತದೆ. ಯಾಕೆಂದರೆ ಇದು ಚುನಾವಣೆ ಆರಂಭದ ಕಾಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟೀಕಿಸಿದರು.

ಭಾನುವಾರ ನಗರದ ಅರಮನೆ ಮೈದಾನದ "ಗಾಯತ್ರಿ ವಿಹಾರ"ದಲ್ಲಿ ರಾಜ್ಯ ಪ್ರಕೋಷ್ಠಗಳ ಸಮಾವೇಶ 'ಶಕ್ತಿ ಸಂಗಮ'ದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಪ್ರಕೋಷ್ಠಗಳ ಮೊಟ್ಟ ಮೊದಲ ರಾಜ್ಯ ಸಮಾವೇಶ ಇದಾಗಿದೆ. ಇದಕ್ಕಾಗಿ ಪ್ರಕೋಷ್ಠಗಳ ಮುಖ್ಯಸ್ಥರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಅನೇಕ ವರ್ಗದ ಕಾರ್ಯಕರ್ತರು ವೇದಿಕೆ ಮೇಲೆ ಹಾಗೂ ವೇದಿಕೆ ಕೆಳಗಿದ್ದಾರೆ ಎಂದು ತಿಳಿಸಿದರು. ವಿವಿಧ ಪ್ರಕೋಷ್ಠಗಳ ಕಾರ್ಯಕರ್ತರನ್ನು ಪರಿಚಯ ಮಾಡಿ ಇತರ ಪ್ರಕೋಷ್ಠದವರು ಅವರಿಗೆ ಚಪ್ಪಾಳೆ ಹೊಡೆದು ಅಭಿನಂದಿಸುವಂತೆ ಮಾಡಿದರು.

ನಾವು ಸಂಘಟನೆಯನ್ನೂ ಕಟ್ಟುತ್ತೇವೆ. ಚುನಾವಣೆ ಗೆದ್ದು ಜನರ ಸೇವೆಯನ್ನೂ ಮಾಡುತ್ತೇವೆ. ಜಗತ್ತಿನ ಕಲ್ಯಾಣದ ಯೋಚನೆಯನ್ನೂ ಮಾಡುತ್ತೇವೆ. ಕುಕ್ಕರ್ ಬಾಂಬ್‍ನ ಕೊಳಕು ರಾಜಕೀಯ ನಮ್ಮದಲ್ಲ ಎಂದು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ತಿಳಿಸಿದರು.

Grandfather Tippu Remembers Sacrifices During Elections B l Santhosh Said

ರಾಜ್ಯಾಧ್ಯಕ್ಷರಿಂದ ಪೇಜ್ ಪ್ರಮುಖ್ ವರೆಗೆ ಎಲ್ಲ ವೃತ್ತಿಪರ ಪ್ರಕೋಷ್ಠಗಳನ್ನು ಜಾಗೃತಿಗೊಳಿಸುವ ಕಾರ್ಯ ನಡೆಯುತ್ತಿದೆ. ಇನ್ನು 100 ದಿನಗಳಲ್ಲಿ ಚುನಾವಣೆ ದಿನಾಂಕ ಪ್ರಕಟಗೊಳ್ಳಲಿದೆ. ಒಂದೇಸಾರಿ ಪಂಚರತ್ನ ಬಂದಿದೆ. ಪ್ರತಿ ಸಾರಿ ಇದು ಕೊನೆಯ ಚುನಾವಣೆ ಎಂಬ ಘೋಷಣೆ ಆಗಿದೆ. ವೇದಿಕೆಯಲ್ಲಿ ಕಣ್ಣೀರಿನ ಮೂಲಕ ಚುನಾವಣೆಗೆ ಹೋಗುತ್ತಿದ್ದಾರೆ; ಬೀದಿಗೆ ಬಂದಿದ್ದಾರೆ. ಅಪ್ಪನಿಂದ ಮಗನಿಗೆ, ತಾಯಿಯಿಂದ ಮಗನಿಗೆ ತ್ಯಾಗ ಮಾಡುತ್ತಾರೆ. ಚುನಾವಣೆ ಕಾಲ ಆರಂಭವಾಗಿದೆ ಎಂದು ತಿಳಿಸಿದರು.

ನಮ್ಮದು ಚುನಾವಣೆ ಕಾಲದ ಸಂಘಟನೆ ಅಲ್ಲ. ವರ್ಷದ 365 ದಿನಗಳ ಕಾಲವೂ ನಾವು ಸಂಘಟಿತರಾಗಿ ಇರುತ್ತೇವೆ. ನಾವು ಉತ್ತಮ ಆಡಳಿತ ನೀಡಿದ್ದೇವೆ. ಆದ್ದರಿಂದ ನಾವು ಚುನಾವಣೆಗೆ ಕಣ್ಣೀರಿಲ್ಲದೆ ನಗುತ್ತ ಸಜ್ಜಾಗಿದ್ದೇವೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳದಲ್ಲೂ ಇದೇ ಮಾದರಿಯ ಸಮಾವೇಶಗಳನ್ನು ಬಿಜೆಪಿ ನಡೆಸಲಿದೆ ಎಂದ ಅವರು, ಕಾರ್ಯಕರ್ತರ ಶಕ್ತಿ ಪರಿಚಯಕ್ಕಾಗಿ ಇಂದು ಶಕ್ತಿ ಸಂಗಮ ನಡೆದಿದೆ. ಪ್ರಕೋಷ್ಠದವರು ಸರಿಯಾಗಿ ಕೆಲಸ ಮಾಡಿದರೆ ಬಿಜೆಪಿ ಗೆಲುವಿನ ರಥ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು. ಜನಸಾಮಾನ್ಯರ ಪರವಾಗಿ ಕೇಂದ್ರದ ಮೋದಿಜಿ ಸರಕಾರ ಮತ್ತು ಇಲ್ಲಿನ ಬಿಜೆಪಿ ಸರಕಾರಗಳು ಕೆಲಸ ಮಾಡಿವೆ. ಅದನ್ನು ಜನರಿಗೆ ತಿಳಿಸುವ ಕಾರ್ಯ ನಡೆಸಿ ಎಂದು ಕಿವಿಮಾತು ಹೇಳಿದರು.

ಮುಂದಿನ 4 ತಿಂಗಳು ಅಪಾರ ಶ್ರಮ ಇರಬೇಕಾದ ಕಾಲ. ನಮ್ಮ ಕೆಲಸ ಜನಸಾಮಾನ್ಯರ ಮಧ್ಯದಲ್ಲಿ ಇರಬೇಕು. ಬಿಜೆಪಿ ಗೆಲುವು ಕಾಲದ ಅವಶ್ಯಕತೆ. ಅಭಿವೃದ್ಧಿಯ ರೈಲಿಗೆ ವೇಗ ಸಿಕ್ಕಿದೆ. ಮತ್ತೆ ಬಿಜೆಪಿ ಗೆದ್ದರೆ ಅದರ ವೇಗ ಹೆಚ್ಚಾಗಲು ಸಾಧ್ಯ. ಕೆಲವೇ ವರ್ಗವನ್ನು ಓಲೈಸುವ ಪಕ್ಷಗಳ ನಾಯಕರು ರಾಜ್ಯವನ್ನು ಹಿಮ್ಮುಖವಾಗಿ ಒಯ್ಯುತ್ತಾರೆ. ಅದಾಗಬಾರದು ಎಂದು ಜನರಿಗೆ ಮನವರಿಕೆ ಮಾಡಬೇಕಿದೆ ಎಂದರು.

ದತ್ತಪೀಠದ ವಿಚಾರ ತಾರ್ಕಿಕ ಅಂತ್ಯ ಕಾಣಲು ಬಿಜೆಪಿ ಸರಕಾರ ಕಾರಣ ಎಂದು ವಿಶ್ಲೇಷಿಸಿದರು. ಎಸ್‍ಸಿ, ಎಸ್‍ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಬಿಜೆಪಿ ಸರಕಾರದಿಂದ ಆಗಿದೆ. ಶಾಂತಿಯುತವಾಗಿ- ಸುವ್ಯವಸ್ಥಿತವಾಗಿ ಕೋವಿಡ್ ಲಸಿಕೆ ಲಭಿಸಲು ಮೋದಿಜಿ ಕಾರಣ. ಸರಕಾರದ ಅಭಿವೃದ್ಧಿಯ ವೇಗ ಮುಂದುವರಿಸಲು ಬಿಜೆಪಿಗೆ ಮತ ಕೊಡಬೇಕು ಎಂದು ತಿಳಿಸಿದರು. ಬಿಜೆಪಿ ರಥವನ್ನು ವಿಜಯದ ಕಡೆಗೆ ಎಳೆಯಬೇಕಿದೆ ಎಂದು ಮನವಿ ಮಾಡಿದರು.

Grandfather Tippu Remembers Sacrifices During Elections B l Santhosh Said

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಅಧಿಕಾರಕ್ಕಾಗಿಯೇಇರುವ ಹಲವು ಪಕ್ಷಗಳು ದೇಶದಲ್ಲಿವೆ. ಆದರೆ, ಈ ದೇಶವನ್ನು ಸದೃಢ, ಸ್ವಾಭಿಮಾನದಿಂದ ಕಟ್ಟುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಸಾಮಾಜಿಕ ಸಾಮರಸ್ಯ, ಎಲ್ಲ ವೃತ್ತಿಗಳಿಗೆ ಗೌರವ, ಅಸ್ಮಿತೆ ಕೊಡುವ, ಮೇಲುಕೀಳಿಲ್ಲದೆ ಎಲ್ಲ ವರ್ಗದವರನ್ನೂ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯಿಂದ ಪ್ರಕೋಷ್ಠಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಎಲ್ಲ ವೃತ್ತಿಯವರಿಗೆ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಬಿಜೆಪಿ ಮಾಡಿದೆ. ನಮ್ಮ ಪಕ್ಷ ವ್ಯಕ್ತಿಯಿಂದ ಆರಂಭಿಸಿ ದೇಶದ ವರೆಗೆ ಕಟ್ಟುವ ಕಾರ್ಯವನ್ನು ಮಾಡುತ್ತಿದೆ. ಬಹಳಷ್ಟು ಪಕ್ಷಗಳು ಅಧಿಕಾರದ ರಾಜಕಾರಣ ಮಾಡಿದರೆ, ಬಿಜೆಪಿ ಜನರ ಅಭಿವೃದ್ಧಿ ರಾಜಕಾರಣಕ್ಕೆ ಬದ್ಧವಾಗಿದೆ. ವಿಶ್ವಕ್ಕೇ ಮಾದರಿ ಎನಿಸುವ ಪಕ್ಷವಾಗಿ ಅದು ಹೊರಹೊಮ್ಮಿದೆ ಎಂದರು.

ದುಡ್ಡಿದ್ದವ ದೊಡ್ಡಪ್ಪ ಎಂಬ ಕಾಲ ಇತ್ತು. ಜ್ಞಾನ ಮತ್ತು ಶ್ರಮದ ಶತಮಾನವಿದು. ಬಿಜೆಪಿ ಮೋದಿಜಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದುಡಿಯುವ ವರ್ಗ ಮತ್ತು ಶ್ರಮಿಕರನ್ನು ಗುರುತಿಸಿ ಅವರಿಗೆ ತರಬೇತಿ ಕೊಟ್ಟು, ಕೌಶಲ್ಯ ವೃದ್ಧಿ ಮಾಡುತ್ತಿದೆ. ತಳಹಂತದಿಂದ ದೇಶ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ವಿವರಿಸಿದರು.

ದುಡಿಯುವ ವರ್ಗದ ಶ್ರಮದಿಂದ ದೇಶದಲ್ಲಿ ಬದಲಾವಣೆ ಆಗುತ್ತಿದೆ. ರೈತನ ಬೆವರಿನಿಂದ ದೇಶ ಅಭಿವೃದ್ಧಿ ಸಾಧಿಸುತ್ತಿದೆ. ಇದನ್ನು ನಂಬಿ ಬಿಜೆಪಿ ಪ್ರಕೋಷ್ಠಗಳನ್ನು ಮಾಡಿದೆ ಎಂದರು.
ದೇಶದ ಪ್ರಗತಿಯ ವೇಗ ಇನ್ನಷ್ಟು ಹೆಚ್ಚಾಗಲು ಆತ್ಮನಿರ್ಭರ- ಸ್ವಾವಲಂಬಿ ಭಾರತ ಕಟ್ಟಲು ಮುಂದಿನ 25 ವರ್ಷ ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಬೇಕಿದೆ. 2023 ರ ಅಸೆಂಬ್ಲಿ ಚುನಾವಣೆ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

English summary
grandfather tippu remembers sacrifices during elections b l santhosh said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X