ನಾಳೆ ಅ.28ಕ್ಕೆ ಗ್ರಾಮ ಪಂಚಾಯತಿ ಚುನಾವಣೆ, ಸರ್ಕಾರಿ ನೌಕರರಿಗೆ ರಜೆ
ಬೆಂಗಳೂರು, ಅಕ್ಟೋಬರ್ 27: ಕರ್ನಾಟಕದಲ್ಲಿ ಖಾಲಿ ಇರುವ ಮತ್ತು 2022ರ ಆಗಸ್ಟ್‌ನಿಂದ ನವೆಂಬರ್ ಒಳಗಗೆ ಅವಧಿ ಮುಗಿದ ಗ್ರಾಮ ಪಂಚಾಯತಿಯ ಸ್ಥಾನಗಳಿಗೆ ಅಕ್ಟೋಬರ್ 28ರಂದು ನಾಳೆ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಸಂಬಂಧ ಆ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ರಜೆ ನೀಡಿ ಸರ್ಕಾರ ಆದೇಶಿಸಿದೆ.
ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯತಿಯ ಸ್ಥಾನಗಳಿಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಸಾರ್ವತ್ರಿಕ/ ಉಪಚುನಾವಣೆ ಜರುಗಲಿದೆ.

ಖಾಲಿ ಸ್ಥಾನಗಳಿಗೆ ಚುನಾವಣೆ ನಡೆಯಲಿರು ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ನೌಕರರಿಗೆ 1993ರ ನಿಯಮದಡಿ 114ಪ್ರಜಾಪ್ರತಿನಿಧಿ ಕಾಯ್ದೆಯಡಿ ವೇತನ ಸಹಿತ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‌ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಖಾನೆ, ಸಹಕಾರಿ ರಂಗದ ಸಂಘ-ಸಂಸ್ಥೆಗಳ, ವ್ಯವಹಾರಿಕ ಮತ್ತು ಔದ್ಯಮಿಕ ಸಂಸ್ಥೆಗಳು ಹಾಗೂ ಇತರ ಖಾಯಂ ಹಾಗೂ ದಿನಗೂಡಿ ಕೆಸಲ ಮಾಡುವ ನೌಕರರಿಗೆ ಸಿಮೀವಾಗಿ ಕಾಯ್ದೆಯಡಿ ರಜೆ ಕೊಡಲಾಗಿದೆ.

ಈ ರಜೆಯು ತುರ್ತು ಸೇವೆಗಳ ಮೇಲಿರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಹೀಗಿದ್ದರೂ ತುರ್ತು ಸೇವೆಯ ನೌಕರರಿಗೆ ಮತ ಚಾಲಾಯಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಜೊತೆಗೆ ಚುನಾವಣೆ ಕಾರ್ಯಗಳಿಗೆ ನಿಯೋಜಿತ ನೌಕರರು ಚುನಾವಣೆ ಕಾರ್ಯಕ್ಕೆ ಹಾಜರಿರುವಂತೆ ಸರ್ಕಾರದ ತಿಳಿಸಿದೆ.












Click it and Unblock the Notifications