Get Updates
Get notified of breaking news, exclusive insights, and must-see stories!

ಡಿ ರೂಪಾ, ಹೇಮಂತ್ ನಿಂಬಾಳ್ಕರ್ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾರ್ವಣೆ

ಬೆಂಗಳೂರು, ಡಿ. 31: ಬಿ.ಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಭಾರತೀಯ ಪೊಲೀಸ್ ಸೇವೆಯಲ್ಲಿರುವ ಹಲವು ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ(ಡಿಸೆಂಬರ್ 31) ಸಂಜೆ ಆದೇಶ ಹೊರಡಿಸಿದೆ.

ತಕ್ಷಣದಿಂದಲೇ ಜಾರಿಯಾಗುವಂತೆ ಆದೇಶಿಸಿ ಹಿರಿಯ ಅಧಿಕಾರಿಗಳಾದ ಡಿ ರೂಪಾ, ಹೇಮಂತ್ ನಿಂಬಾಳ್ಕರ್, ವರ್ತಿಕಾ ಕಟಿಯಾರ್ ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆಯಾಗಿದೆ.

ಆಗಸ್ಟ್ ತಿಂಗಳ ಆರಂಭದಲ್ಲಿಯಷ್ಟೇ ಡಿ. ರೂಪಾ, ರೋಹಿಣಿ ಕಟೋಚ್, ಉಮೇಶ್ ಕುಮಾರ್, ಶಶಿಕುಮಾರ್, ಅನುಚೇತ್ ಸೇರಿದಂತೆ 17 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

Karnataka Govt Transfers D Roopa, Hemant Nimbalkar and other IPS officers

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು ಹಾಗೂ ಎಲ್ಲಿಂದ ಎಲ್ಲಿಗೆ? ವಿವರ:

* ಕೆ ರಾಮಚಂದ್ರರಾವ್ (1993 ಬ್ಯಾಚ್), ಎಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ವಿಭಾಗದಿಂದ ಎಡಿಜಿಪಿ ಮಾನವ ಹಕ್ಕು ವಿಭಾಗಕ್ಕೆ ವರ್ಗಾವಣೆ

* ರೂಪಾ ಡಿ (2000 ಬ್ಯಾಚ್), ಐಜಿಪಿ ಹಾಗೂ ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ ಇಂದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

* ಮಾಲಿನಿ ಕೃಷ್ಣಮೂರ್ತಿ (2000 ಬ್ಯಾಚ್) ಎಡಿಜಿಪಿ, ಮಾನವ ಹಕ್ಕುಗಳ ವಿಭಾಗದಿಂದ ಎಡಿಜಿಪಿ ಹಾಗೂ ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ.

* ಹೇಮಂತ್ ನಿಂಬಾಳ್ಕರ್ (1998 ಬ್ಯಾಚ್) ಐ ಜಿ ಪಿ ಹಾಗೂ ಎಸಿಪಿ (ಆಡಳಿತ) ಬೆಂಗಳೂರು ನಗರ ವಿಭಾಗದಿಂದ ಐಜಿಪಿ ಆಂತರಿಕ ಭದ್ರತಾ ವಿಭಾಗ(ಐಎಸ್ ಡಿ) ಬೆಂಗಳೂರು.ಎಂ ಚಂದ್ರಶೇಖರ್ (1998 ಬ್ಯಾಚ್) ಎಸಿಪಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬೆಂಗಳೂರು ವಿಭಾಗದಿಂದ ಐಜಿಪಿ ಸೆಂಟ್ರಲ್ ರೇಂಜ್, ಬೆಂಗಳೂರು

* ವಿಪುಲ್ ಕುಮಾರ್ (1999 ಬ್ಯಾಚ್) ಐಜಿಪಿ, ದಕ್ಷಿಣ ರೇಂಜ್ ಮೈಸೂರು ವಿಭಾಗದಿಂದ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಐಜಿಪಿ ಹಾಗೂ ನಿರ್ದೇಶಕ.

* ವಿಕಾಶ್ ಕುಮಾರ್ ವಿಕಾಶ್ (2004 ಬ್ಯಾಚ್) ಡಿಐಜಿ ಅಂಡ್ ಮಂಗಳೂರು ನಗರ ಆಯುಕ್ತ ಹುದ್ದೆಯಿಂದ ಕರ್ನಾಟಕ ಮೀಸಲು ಪಡೆ(ಕೆಎಸ್ ಆರ್ ಪಿ) ಡಿಐಜಿಯಾಗಿ ವರ್ಗ.

* ವಾರ್ತಿಕಾ ಕಟಿಯಾರ್ (2010 ಬ್ಯಾಚ್) ರಾಜ್ಯ ಕ್ರಿಮಿನಲ್ ರೆಕಾರ್ಡ್ ಬ್ಯುರೋ ಎಸ್ಪಿ, ಬೆಂಗಳೂರು.

* ರಂಜಿತ್ ಕುಮಾರ್ ಬಂಡಾರು ( 2017 ಬ್ಯಾಚ್) ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಹುದ್ದೆಯಿಂದ ಭಟ್ಕಳ ಉಪ ವಿಭಾಗ, ಕಾರವಾರ, ಉತ್ತರ ಕನ್ನಡ ಜಿಲ್ಲೆಯ ಎಸಿಪಿಯಾಗಿ ವರ್ಗಾವಣೆ.

* ಡಾ. ಪಿ ರವೀಂದ್ರ ನಾಥ್ (1989 ಬ್ಯಾಚ್) ಎಡಿಜಿಪಿ ಅರಣ್ಯ ಘಟಕ ಹುದ್ದೆಯಿಂದ ಬಡ್ತಿ ನೀದಿ ಡಿಜಿಪಿ, ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ.

* ಸೀಮಂತ್ ಕುಮಾರ್ (1996 ಬ್ಯಾಚ್) ಐಜಿಪಿ ಬೆಂಗಳೂರು ಸೆಂಟ್ರಲ್ ರೇಂಜ್ ನಿಂದ ಬಡ್ತಿ ನೀಡಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ), ಬೆಂಗಳೂರು ಎಡಿಜಿಪಿಯಾಗಿ ವರ್ಗ.

* ಪವನ್ ಪ್ರವೀಣ್ ಮುಧುಕರ್ (2003 ಬ್ಯಾಚ್) ಡಿಐಜಿ, ಪೊಲೀಸ್ ನೇಮಕಾತಿ ವಿಭಾಗದಿಂದ ಬಡ್ತಿ ನೀಡಿ ಮೈಸೂರು ದಕ್ಷಿಣ ರೇಂಜ್ ಐಜಿಪಿಯಾಗಿ ವರ್ಗ.

* ಎನ್ ಸತೀಶ್ ಕುಮಾರ್ (2003 ಬ್ಯಾಚ್) ಡಿಐಜಿ, ಕರ್ನಾಟಕ ಮೀಸಲು ಪಡೆ ಪೊಲೀಸ್ ಬಡ್ತಿ ನೀಡಿ ಕಲಬುರಗಿ ನಗರ ಐಜಿ ಅಂಡ್ ಪೊಲೀಸ್ ಆಯುಕ್ತರಾಗಿ ವರ್ಗ.

* ಚೇತನ್ ಸಿಂಗ್ ರಾಥೋರ್ (2007 ಬ್ಯಾಚ್) ನವದೆಹಲಿ ಎಸ್ಪಿ ಗುಪ್ತಚರ ಇಲಾಖೆಯಿಂದ ಡಿಐಜಿಪಿಯಾಗಿ ಬಡ್ತಿ.

* ಅಮಿತ್ ಸಿಂಗ್ (2007 ಬ್ಯಾಚ್) ಎನ್ಐಎ ಎಸ್ಪಿ ಅವರಿಗೆ ಡಿಐಜಿಪಿಯಾಗಿ ಬಡ್ತಿ.

* ಶಶಿಕುಮಾರ್ (2007 ಬ್ಯಾಚ್) ಬೆಂಗಳೂರು ಎಸ್ಪಿ ಬಡ್ತಿ ನೀಡಿ ಡಿಐಜಿಯಾಗಿ ಮಂಗಳೂರು ನಗರ ಜಿಲ್ಲೆ ಡಿಐಜಿ ಅಂಡ್ ಪೊಲೀಸ್ ಅಯುಕ್ತ.

* ವೈಎಸ್ ರವಿಕುಮಾರ್ (2007 ಬ್ಯಾಚ್) ಆಂತರಿಕ ಭದ್ರತಾ ವಿಭಾಗ ಎಸ್ಪಿ ಹುದ್ದೆಯಿಂದ ಬಡ್ತಿ ನೀಡಿ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ.

* ಪ್ರದೀಪ್ ಗುಂಟಿ (2016 ಬ್ಯಾಚ್) ಬೆಳಗಾವಿ ಉಪ ವಿಭಾಗ ಸಹಾಯಕ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹುದ್ದೆಯಿಂದ ಬಡ್ತಿ ನೀಡಿ ಆಂತರಿಕ ಭದ್ರತಾ ವಿಭಾಗದ ಎಸ್ಪಿ.

* ನಿಖಿಲ್ ಬಿ (2017 ಬ್ಯಾಚ್) ಕಾರವಾರ ಉಪ ವಿಭಾಗ ಸಹಾಯಕ ಸಹಾಯಕ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹುದ್ದೆಯಿಂದ ಉಡುಪಿ ಜಿಲ್ಲೆ ಕಾರ್ಕಳ ಸೂಪರಿಟೆಂಡೆಂಟ್ (ಎಎನ್ಎಫ್) ಆಫ್ ಪೊಲೀಸ್.

* ಹರಿರಾಮ್ ಶಂಕರ್ (2017 ಬ್ಯಾಚ್) ಉಡುಪಿ ಜಿಲ್ಲೆ ಕುಂದಾಪುರ ಉಪ ವಿಭಾಗ ಸಹಾಯಕ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹುದ್ದೆಯಿಂದ ಬಡ್ತಿ ನೀಡಿ ಮಂಗಳೂರು ನಗರ ಡಿಸಿಪಿ (ಕಾನೂನೂ ಮತ್ತು ಸುವ್ಯವಸ್ಥೆ)

* ಕೆ ರಾಮಾನುಜನ್ (2017 ಬ್ಯಾಚ್) ರಾಮನಗರ ಉಪ ವಿಭಾಗ ಎಸಿಪಿ ಬಡ್ತಿ ನೀಡಿ ಹುಬ್ಬಳ್ಳಿ-ಧಾರವಾಡ ನಗರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ)

* ಅದ್ದೂರು ಶ್ರೀನಿವಾಸಲು (2017 ಬ್ಯಾಚ್) ಎಎಸ್ ಪಿ ಶಿಕಾರಿಪುರ ಉಪವಿಭಾಗ, ಶಿವಮೊಗ್ಗ ಹುದ್ದೆಯಿಂದ ಎಸ್ಪಿ ವೈರ್ ಲೆಸ್ ಬೆಂಗಳೂರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+