ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವ ಕಲ್ಯಾಣ ಅಭಿವೃದ್ಧಿಗೆ ಗೊ.ರು. ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸಮಿತಿ

|
Google Oneindia Kannada News

ಬೆಂಗಳೂರು, ಮೇ 21 : ಬೀದರ್ ಜಿಲ್ಲೆಯ ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರ, ಇದಕ್ಕಾಗಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲು ನಿರ್ಧರಿಸಿದೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 'ಬಸವ ಕಲ್ಯಾಣದ ಸದ್ಯದ ಪರಿಸ್ಥಿತಿ ಹೇಗಿದೆ? ಅಲ್ಲಿ ಆಗಬೇಕಾದ ಕೆಲಸಗಳೇನು ಎಂಬುದನ್ನು ಖುದ್ದಾಗಿ ನೋಡಬೇಕಿದೆ. ಆದ್ದರಿಂದ ಮಂಡಳಿಯ ಮುಂದಿನ ಸಭೆಯನ್ನು ಬಸವಕಲ್ಯಾಣದಲ್ಲಿ ನಡೆಸೋಣ' ಎಂದು ಸಿದ್ದರಾಮಯ್ಯ ಹೇಳಿದರು. [ಬಸವ ತತ್ವ ಅಧ್ಯಯನಕ್ಕೆ ಅಂತರಾಷ್ಟ್ರೀಯ ಕೇಂದ್ರ : ಸಿಎಂ]

basavakalyan

'ಅನುಭವ ಮಂಟಪ ನಿರ್ಮಾಣ ಸೇರಿದಂತೆ ಹಲವು ಕೆಲಸ, ಕಾರ್ಯಗಳು ಬಸವ ಕಲ್ಯಾಣದಲ್ಲಿ ಆಗಬೇಕಿದೆ. ಇದಕ್ಕೆ ಬಸವೇಶ್ವರರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸಿದವರ ಮಾರ್ಗದರ್ಶನ ಬೇಕು. ಹೀಗಾಗಿ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿ' ಎಂದು ಮುಖ್ಯಮಂತ್ರಿಯವರು ಮಂಡಳಿಯ ಆಯುಕ್ತರಿಗೆ ಸೂಚನೆ ನೀಡಿದರು. [ಬಸವಕಲ್ಯಾಣದ ಲೇಖಕನಿಗೆ ದಲಿತ ಕಥಾ ಪ್ರಶಸ್ತಿ]

'ಬಸವೇಶ್ವರರು ಮತ್ತು ಇತರ ಶರಣರು ರಚಿಸಿರುವ ವಚನಗಳು ಒಂದೇ ಕಡೆ ಸಿಗುವಂತೆ ವೆಬ್‌ಸೈಟ್‌ ಆರಂಭಿಸುವಂತೆ ಸಿದ್ದರಾಮಯ್ಯ ಆದೇಶ ನೀಡಿದರು. ಜೊತೆಗೆ ಬಸವ ಕಲ್ಯಾಣದಲ್ಲಿ ಈ ವರ್ಷ ಆಗಬೇಕಿರುವ ಕಾಮಗಾರಿಗಳು ಮತ್ತು ಅದಕ್ಕೆ ಬೇಕಿರುವ ಅನುದಾನ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ' ಎಂದು ನಿರ್ದೇಶನ ನೀಡಿದರು. [ಬಸವಣ್ಣ ಎಂದೆಂದಿಗೂ ಜಗತ್ತಿಗೆ ಜ್ಯೋತಿ: ಸಿದ್ದರಾಮಯ್ಯ]

bidar

ಮಂಡಳಿಗೆ ತುರ್ತಾಗಿ ಅಗತ್ಯ ಇರುವ ಎಂಜಿನಿಯರ್, ಪ್ರಥಮ ದರ್ಜೆ ಸಹಾಯಕ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಶಾಸಕರಾದ ರಾಜಶೇಖರ ಪಾಟೀಲ್, ಮಲ್ಲಿಕಾರ್ಜುನ ಖೂಬಾ, ಈಶ್ವರ ಖಂಡ್ರೆ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

English summary
Karnataka Chief Minister Siddaramaiah directed Basavakalyan Development Board to set up committee in the leadership of Folk scholar and Kannada writer Go.Ru. Channabasappa to development Basavakalyan at Bidar, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X