2011ರ ಕೆಎಎಸ್ ಬ್ಯಾಚ್ ಆಯ್ಕೆ ಪಟ್ಟಿಗೆ ಮರುಜೀವ ಪ್ರಯತ್ನ: ಪ್ರತಿಭಟನೆ
ಬೆಂಗಳೂರು, ಫೆ.12: ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾರಣದಿಂದ ರದ್ದು ಮಾಡಲಾಗಿದ್ದ 2011ನೇ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ರಾಜ್ಯ ಸರ್ಕಾರ ಮರು ಜೀವ ಕೊಡಲು ಪ್ರಯತ್ನಿಸುತ್ತಿದ್ದು, ಇದನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಭ್ರಷ್ಟಾಚಾರ ಕಾರಣದಿಂದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ 2011ನೇ ಬ್ಯಾಚ್ ನ 362ನೇ ಆಯ್ಕೆ ಪಟ್ಟಿಯನ್ನು ರದ್ದುಮಾಡಿದ್ದರೂ ಸರ್ಕಾರ , ಆಯ್ಕೆ ಪಟ್ಟಿಗೆ ಮರುಜೀವ ನೀಡಲು ಹೊರಟಿದೆ. 2011 ನೇ ಬ್ಯಾಚ್ ನ ಕೆಎಎಸ್ 362 ಹುದ್ದೆಗಳ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ದಲಿತ ಪದವಿಧರರ ಅಸೋಸಿಯೇಷನ್ ಸದಸ್ಯರು ಬೆಂಗಳೂರಿನ ಮೌರ್ಯವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, 'ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಎಸಗಿರುವ 362 ಹುದ್ದೆಗಳ ಆಯ್ಕೆ ಪಟ್ಟಿ ಅಸಿಂಧುಗೊಳಿಸಿದ್ದರೂ ಸರ್ಕಾರ ಆಯ್ಕೆ ಪಟ್ಟಿಗೆ ಮರು ಜೀವ ನೀಡಲು ಮುಂದಾಗಿದೆ. ಕೋರ್ಟ್ ಆದೇಶಕ್ಕೆ ಬೆಲೆ ಇಲ್ಲದಂತೆ ಆಗಿದೆ' ಎಂದು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗ 362 ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿತ್ತು. ಈ ಹಿನ್ನೆಲೆಯಲ್ಲಿಸಿಐಡಿ ವರದಿಗಳ ಅನ್ವಯ ಸರ್ಕಾರವು ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಅನೇಕ ಪ್ರತಿಭಾನ್ವಿತ ನಿರುದ್ಯೋಗ ಪದವೀಧರರು 2011ರಲ್ಲಿ ಕರೆಯಲಾಗಿದ್ದ ಪರೀಕ್ಷೆಯು ಸುಪ್ರೀಂಕೋರ್ಟ್‌ನ ಮೂರು ತೀರ್ಪುಗಳು ಹಾಗೂ ರಾಜ್ಯ ಹೈ ಕೋರ್ಟ್‌ನ ಎರಡು ತೀರ್ಪುಗಳಲ್ಲಿ ನೀಡಿದ್ದ ಆದೇಶಗಳಲ್ಲಿ ಸಂಪೂರ್ಣ ರದ್ದಾಗಿರುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಒಂದು ವೇಳೆ 2011ನೇ ಬ್ಯಾಚ್‌ನ 362 ಕೆಎಎಸ್ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ್ದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದರು

'ಸರ್ಕಾರ ತಮ್ಮ ಈ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸಿ 2011ರ 362 ಕೆ ಎಎಸ್ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಿ ಪಾರದರ್ಶಕವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಾರ್ವಜನಿಕ ಸೇವೆಗೆ ನೇಮಕಾತಿ ಮಾಡಬೇಕು' ಎಂದು ದಲಿತ ಪದವೀದರ ಸಂಘದ ಅಧ್ಯಕ್ಷ ಲೋಕೇಶ್ ವಿ. ಆಗ್ರಹಿಸಿದರು.












Click it and Unblock the Notifications