Breaking: ಸಂಚಾರ ನಿಯಮ ಉಲ್ಲಂಘನೆ, 50% ರಿಯಾಯಿತಿ ಅವಧಿ ಫೆ. 28ರವರೆಗೆ ವಿಸ್ತರಣೆ, ನಾಳೆ ಆದೇಶ
ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50 ರಿಯಾಯಿತಿ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಿಸಿ ಆದೇಶ ಹೊರಡಿಸಲಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ತಿಳಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 13: ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50 ರಿಯಾಯಿತಿ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಿಸಿ ಆದೇಶ ಹೊರಡಿಸಲಿದೆ.
ಹೌದು, ಫೆಬ್ರವರಿ 3ರಂದು ರಾಜ್ಯ ಸರ್ಕಾರವು ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೇಲೆ ಅರ್ಧದಷ್ಟು ರಿಯಾಯಿತಿ (50% Discount) ಆದೇಶವನ್ನು ಫೆಬ್ರವರಿ 11ಕ್ಕೆ ಸಿಮೀತವಾಗಿ ಆದೇಶಿಸಿತ್ತು. ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಭರಪೂರ ಸ್ಪಂದನೆ ದೊರೆತಿದೆ. ಸರ್ಕಾರದ ಭೊಕ್ಕಸಕ್ಕೆ ಕೋಟಿಗಟ್ಟಲೇ ಹಣ ಹರಿದು ಬಂದಿದೆ.
ಈ ಸಂಬಂಧ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50 ರಿಯಾಯಿತಿ ಅವಧಿಯನ್ನು ರಾಜ್ಯ ಸರ್ಕಾರ ಫೆಬ್ರವರಿ 14 ರಿಂದ ಪೆಬ್ರವರಿ 28ರವರೆಗೆ ವಿಸ್ತರಣೆ ಮಾಡಲಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಅವರು ಖಚಿತಪಡಿಸಿದ್ದಾರೆ.

ಇನ್ನೂ ಸಾಕಷ್ಟು ಸಂಚಾರ ನಿಯಮ ಉಲ್ಳಂಘನೆ (Traffic Violation case) ಪ್ರಕರಣಗಳು ತೆರವಾಗುವುದು ಬಾಕಿ ಇವೆ., ಆರ್ಥಿಕ ಹಿನ್ನೆಡೆ ಇರುವವರು ಅನೇಕ ಮಂದಿ ದಂಡ ಕಟ್ಟುವುದು ಬಾಕಿ ಇದೆ ಎನ್ನಲಾಗಿದೆ.
ಈ ರೀತಿಯ ಕೆಲವು ಕಾರಣಕ್ಕೆ ಫೆಬ್ರವರಿ 14 ರಿಂದ ಫೆಬ್ರವರಿ 28ರವರೆಗೆ ದಂಡದ ಮೇಲೆ ಶೇಕಡಾ 50 ರಿಯಾಯಿತಿ ಅವಧಿ ವಿಸ್ತರಣೆ ಮಾಡಲಿದೆ. ಈ ಕುರಿತು ರಾಜ್ಯ ಸರ್ಕಾರ ಮಂಗಳವಾರ ಫೆಬ್ರವರಿ 14ರಂದು ಅಧಿಕೃತ ಆದೇಶ ಹೊರಡಿಸಲಿದೆ. ಈ ಬಗ್ಗೆ ನಾಳೆಯೇ ತೀರ್ಮಾನವಗಲಿದೆ ಎಂದು ನ್ಯಾ. ಬಿ.ವೀರಪ್ಪ ಅವರು ಹೇಳಿದರು.












Click it and Unblock the Notifications