MV Rajeev Gowda: ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷರಾಗಿ ಎಂವಿ ರಾಜೀವ್ ಗೌಡ ನೇಮಕ

ಬೆಂಗಳೂರು, ಆಗಸ್ಟ್ 14: ಲೋಕಸಭಾ ಚುಣಾವಣೆ 2024ರ ಸಿದ್ದತೆಯಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯ ಪರಿವರ್ತನಾ ಸಂಸ್ಥೆ (ರಾಜ್ಯ ಯೋಜನಾ ಮಂಡಳಿ)ಯ ಉಪಾಧ್ಯಕ್ಷರಾಗಿ ಪಕ್ಷದ ಮುಖಂಡ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯರೂ ಆದ ಪ್ರೊ. ಎಂ.ವಿ. ರಾಜೀವ್ ಗೌಡ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಸೋಮವಾರ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯದ ಪರಿವರ್ತನಾ ಸಂಸ್ಥೆ (ರಾಜ್ಯ ಯೋಜನಾ ಮಂಡಳಿ)ಯ ಉಪಾಧ್ಯಕ್ಷರಾಗಿ ಎಂ.ವಿ. ರಾಜೀವ್ ಗೌಡ ಅವರನ್ನು ನಿಯೋಜಿಸಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ಆದೇಶ ಅಧಿಸೂಚನೆ ಹೊರಡಿಸಿದೆ. ಇವರಿಗೆ ಕಾಂಗ್ರೆಸ್ ಮುಖಂಡರು ಶುಭ ಹಾರೈಸಿದ್ದಾರೆ.

state-transitional-institutions-vice-chairman

ಈ ಕುರಿತು ಮಂಗಳವಾರ ರಾತ್ರಿ ಟೀಟ್ ಮಾಡಿರುವ ರಾಜ್ಯ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ನೇಮಕಗೊಂಡ ಎಂ.ವಿ. ರಾಜೀವ್ ಗೌಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಸುಧೀರ್ಘ ರಾಜಕೀಯ ಅನುಭವದಿಂದ ನೂತನ ಜವಾಬ್ದಾರಿಯನ್ನು ಸಹ ಯಶಸ್ವಿಯಾಗಿ ನಿರ್ವಹಿಸುವರೆಂಬ ವಿಶ್ವಾಸವಿದೆ ಎಂದು ಹಾರೈಸಿದ್ದಾರೆ.

ವಿಧಾನಪರಿಷತ್​ಗೆ 3 ಹೆಸರು ಅಂತಿಮ: ಪಟ್ಟಿ ನೋಡಿ

ಹಲವು ವಿರೋಧಗಳ ನಡುವೆಯು ಕರ್ನಾಟಕ ರಾಜ್ಯ ವಿಧಾನಪರಿಷತ್​ಗೆ ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನೂ ಕಾಂಗ್ರೆಸ್ ಒಳಗೇ ಕೆಲ ಮುಖಂಡರ ಮಧ್ಯೆ MR ಸೀತಾರಾಮ್ ಮತ್ತು ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಸೇರಿ ಈ ಮೂವರನ್ನು ಹೆಸರು ಅಂತಿಮ ಮಾಡಲಾಯಿತು. ಸದ್ಯ ಆ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+