Yuva Nidhi: ಸರ್ಕಾರದ 5ನೇ 'ಗ್ಯಾರಂಟಿ' ಯೋಜನೆ ಚಾಲನೆಗೆ ಕ್ಷಣಗಣನೆ, ನೋಂದಣಿ ಇಂದಿನಿಂದಲೇ ಶುರು
ಬೆಂಗಳೂರು, ಡಿಸೆಂಬರ್ 26: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿಯಾಗಿರುವ 'ಯುವನಿಧಿ' (Yuvanidhi Scheme) ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ ನಗರದಲ್ಲಿ ಬೃಹತ್ ಕಾರ್ಯಕ್ರಮದಲ್ಲಿ ನಿರುದ್ಯೋಗಿ ಯುವಕರಿಗೆ ಭತ್ಯೆ ವಿತರಣೆ ಯೋಜನೆ ಆರಂಭವಾಗಲಿದೆ. ಇಂದಿನಿಂದ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ರಾಜ್ಯ ಸರ್ಕಾರದ ಕೊನೆಯ ಗ್ಯಾರಂಟಿ ಯೋಜನೆಯಾದ 'ಯುವನಿಧಿ'ಯು ಇಂದು ಡಿಸೆಂಬರ್ 26 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಚಾಲನೆ ಕೊಡಲಿದ್ದಾರೆ.

ಸಮಾರಂಭದಲ್ಲಿ 'ಯುವನಿಧಿ' ಯೋಜನೆ ಪೋಸ್ಟರ್, ಲೋಗೋ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾಮನ್ ಭಾಗವಹಿಸಲಿದ್ದಾರೆ. ಅವರೊಂದಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ-ಐಟಿ ಬಿಟಿ ಸಚಿವ ರಾಜೀವ್ ಚಂದ್ರಶೇಖರ್ ಅವರ ಉಪಸ್ಥಿತಿ ಇರಲಿದೆ. ಹಲವು ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಯುವನಿಧಿಗೆ ಇಂದಿನಿಂದ ನೋಂದಣಿ
'ಯುವನಿಧಿ' ಯೋಜನೆ ಜಾರಿ ಆಗುತ್ತಿದ್ದಂತೆ ಪ್ರಸಕ್ತ ಸಾಲಿನಲ್ಲಿ 2023-24 ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿದರೂ ಉದ್ಯೋಗ ಸಿಗದವರು ಸರ್ಕಾರಿ ವ್ಯಾಪ್ತಿಯ ಸೇವಾ ಸಿಂಧೂ ಪೋರ್ಟ್‌ಲ್‌ನಲ್ಲಿ ಈ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಬಹುದು.
ನಿಮ್ಮ ಹತ್ತಿರ ಗ್ರಾಮ್ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳ ಸಹಿತ ನೀವು ಇವತ್ತಿನಿಂದ ಅರ್ಜಿ ಸಲ್ಲಿಸಬಹುದು. ಅರ್ಹರಿಗೆ ಮುಂದಿನ ಜನವರಿ 12ರಂದು ಅರ್ಹ ಪದವೀಧರರಿಗೆ ಮಾಸಿಕ 3000 ರೂಪಾಯಿ ಹಾಗೂ ಡಿಪ್ಲೋಮಾ ಪಾಸಾದವರಿಗೆ ಮಾಸಿಕ 1500 ರೂಪಾಯಿ ಭತ್ಯೆಯ ಹಣ ನೇರೆ ಫಲಾನುಭವಿಗಳ ಖಾತೆಗೆ (ಡಿಬಿಟಿ) ವರ್ಗಾವಣೆ ಆಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಯುವನಿಧಿ ಷರತ್ತು ಏನು?
ಪ್ರಸಕ್ತ ಸಾಲಿನಲ್ಲಿ ಪದವಿ ಇಲ್ಲವೇ ಡಿಪ್ಲೋಮಾ ಉತ್ತೀರ್ಣವಾಗಿರಬೇಕು. ಅಲ್ಲದೇ ಅವರು ಪದವಿ ಪೂರ್ಣಗೊಳಿಸಿದರೂ ಕಳೆದ ಆರು ತಿಂಗಳಿಂದ ಉದ್ಯೋಗ ಸಿಕ್ಕಿರಬಾರದು ಎಂಬ ಷರತ್ತು ವಿಧಿಸಲಾಗಿದೆ. ಅಂತವರ ಸ್ವಯಂ ನಿರುದ್ಯೋಗ ಘೋಷಣೆ ಮೂಲಕ ಮಾಸಿಕ ನಿರುದ್ಯೋಗ ಭತ್ಯೆ ಪಡೆಯಬಹುದು.












Click it and Unblock the Notifications