ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆಗ್ರಹ: ಕಾರಣವೇನು?
ಹುಬ್ಬಳ್ಳಿ, ಮಾರ್ಚ್ 31: ಹನಿಟ್ರ್ಯಾಪ್ ವಿಚಾರವನ್ನು ಸದನದಲ್ಲಿ ಸ್ವತಃ ಹಿರಿಯ ಸಚಿವರಾದ ರಾಜಣ್ಣ ಹೇಳಿದ್ದಾರೆ ಇದು ಗಂಭೀರವಾದ ಆರೋಪ ಆಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹರಿ ಹಾಯ್ದರು.
ಇಂದು(ಮಾರ್ಚ್ 31, ಸೋಮವಾರ) ತಮ್ಮ ಸರ್ಕಾರದಲ್ಲಿ ಇಂತಹ ಪ್ರಕರಣ ನಡೆಯಿತು. ಇದರಿಂದ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಲ್ಲಾ ಅಂತ ರಾಜಿನಾಮೆ ನೀಡಬೇಕಿತ್ತು. ಇಲ್ಲ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಇಲ್ಲ ಸಿಡಿ ಮಾಡಿದವರು ಯಾರು ಅಂತಹವರನ್ನು ಸಂಪುಟದಿಂದ ವಜಾ ಮಾಡಬೇಕಿತ್ತು. ಮಾನ ಮರ್ಯಾದೆ ಇಲ್ಲದೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವುದು ಸರಿಯಲ್ಲ. ಇದನ್ನು ಇಡೀ ದೇಶ ನೋಡುತ್ತಿದ್ದು,ಸಚಿವರು, ಶಾಸಕರು, ಕೆಲವು ಅಧಿಕಾರಿಗಳ ಸಿಡಿ ಮಾಡಿ ಬ್ಲಾಕ್ ಮಾಡುವ ಆರೋಪ ಕೇಳಿ ಬಂದಿದೆ ಎಂದು ಹೇಳಿದರು.

ಸಿಡಿ ಇಟ್ಟುಕೊಂಡು ಫೈಲ್ ಗಳನ್ನು ಸಹಿ ಮಾಡಿಸಿಕೊಳ್ಳುತ್ತಿದ್ದಾರೆ.ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು. ರಾಜಕಾರಣಿಗಳ ಬಗ್ಗೆ ಗೌರವ ಕಡಿಮೆ ಆಗುತ್ತಿದೆ. ಸ್ವಚ್ಛ ನಡವಳಿಕೆಯಿಂದ ರಾಜಕಾರಣಿಗಳು ಆದರ್ಶವಾಗಿ ಕಾಣಬೇಕಿತ್ತು. ಆದರೆ ಇಂದು ರಾಜಕಾರಣಿಗಳು ರಾಕ್ಷಸರಾಗಿ ಕಾಣುತ್ತಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಎಲ್ಲಾ ನೋಡಿಕೊಂಡು ಮೌನವಾಗಿದ್ದರೆ, ನಡೆಯುವುದಿಲ್ಲ ಎಂದು ಗೋವಿಂದ ಕಾರಜೋಳ ಅವರು ಹೇಳಿದರು.
ಒಬ್ಬ ಶಾಸಕ, ಮಂತ್ರಿಯ ಮಗ ಮೇಲೆ ಸುಪಾರಿ ಆರೋಪ ಕೇಳಿ ಬಂದಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನವಾಗಿದೆ. ಅವರು ಮೌನವಾಗಿರುವುದನ್ನ ನೋಡಿದ್ರೆ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಹರಾಜುಕತೆ ಶುರುವಾಗಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಅಭಿವೃದ್ಧಿ ಕುಂಠಿತವಾಗಿದೆ. ಯಾವ ನೈತಿಕತೆಯಿಂದ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾರೆ. ಅರ್ಥವಾಗುತ್ತಿಲ್ಲ, ಸಿಡಿ ಮಾಡಿಸಿದವರು ಯಾರು ಅಂತ ಸರ್ಕಾರ ಹೇಳಬೇಕು. ಇಂತಹ ಕೆಟ್ಟ ಸರ್ಕಾರವನ್ನು ಯಾವತ್ತು ನೋಡಿಲ್ಲ ಮುಂದೆಯೂ ನೋಡಲ್ಲ ಎಂದರು.
ಇನ್ನು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂದ ಅವರು, ಕಾಂಗ್ರೆಸ್ ಗೆ ಇದೊಂದು ಅವಕಾಶ ಕೊಟಿದ್ದು. ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಎದ್ದಿತ್ತು. ಈಗ ಸ್ವತಃ ಅವರೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ಕೇಳುವ ಸ್ಥಾನದಲ್ಲಿ ಇಲ್ಲ. ಇಂದು ಅವರು ನೀಡುವ ಸ್ಥಾನದಲ್ಲಿ ಇದ್ದಾರೆ, ಹೀಗಾಗಿ ಒಂದು ಬಾರಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡಿ ಸಮಾಜಿಕ ನ್ಯಾಯಕ್ಕೆ ಅವಕಾಶ ನೀಡಬೇಕು ಎಂದರು.












Click it and Unblock the Notifications