ಕೆಪಿಎಸ್‌ಸಿ ಪಟ್ಟಿ ದೋಷಪೂರಿತ : ಕುಮಾರಸ್ವಾಮಿ
ಬೆಂಗಳೂರು, ಜ. 5: ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಅಧ್ಯಕ್ಷ ಮತ್ತು ಸಮಿತಿ ಸದಸ್ಯರ ಪಟ್ಟಿಯನ್ನು ರಾಜ್ಯಪಾಲ ವಜುಭಾಯಿ ವಾಲಾ ತಿರಸ್ಕರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ, ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ಪಟ್ಟಿ ಸಲ್ಲಿಸಿದೆ. ಇದು ಕಾನೂನು ಬಾಹಿರ ಪಟ್ಟಿಯಾಗಿದೆ ಎಂದು ಆರೋಪಿಸಿದರು.[ಸರ್ಕಾರ, ರಾಜಭವನದ ನಡುವೆ ಗುದ್ದಾಟ]

ಅಧ್ಯಕ್ಷ ಮತ್ತು ಸದಸ್ಯರ ಪೂರ್ಣ ವಿವರವನ್ನು ಲೋಕಾಯುಕ್ತರು ನೀಡಬೇಕೆಂದು ರಾಜ್ಯಪಾಲರು ಕೇಳಿರುವುದು ಸರಿಯಾಗಿದೆ. ಮಹಿಳೆಯೊಬ್ಬಳ ಅರ್ಜಿ ಇಟ್ಟುಕೊಂಡು 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳನ್ನು ರದ್ದುಪಡಿಸಲಾಯಿತು. ಈಗ ಕೆಪಿಎಸ್‌ಸಿಗೆ ಅಂಟಿರುವ ಕೊಳಕು ತೊಳೆಯಲು ರಾಜ್ಯ ಸರ್ಕಾರದಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.[ಕರ್ನಾಟಕ 2014 : ಸುದ್ದಿ, ಸದ್ದು ಮಾಡಿದ ಹಗರಣಗಳು]
ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಷ ಅಮಿತ್ ಶಾ ಹೇಳಿರುವುದಕ್ಕೆ ಬೇರೆಯದೇ ಅರ್ಥವಿದೆ. ನ್ನದೊಂದು ತಪ್ಪು ಹೆಜ್ಜೆಯಿಂದ ಏಳು ವರ್ಷದ ಹಿಂದೆಯೇ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಿತ್ತು. ಈಗ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಸೇರಿ ರಾಜ್ಯವನ್ನು ಅಧೋಗತಿಗೆ ದೂಡಿವೆ ಎಂದು ಆರೋಪಿಸಿದರು.











Click it and Unblock the Notifications