ಐಎಂಎ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ: ಎಂಬಿ.ಪಾಟೀಲ್

ಮೈಸೂರು, ಜೂನ್ 17: ಐಎಂಎ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಸಹ ಅವರನ್ನು ಬಿಡುವುದಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಗುಡುಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಶಾಸಕರು, ಸಚಿವರು ಯಾರೇ ಐಎಂಎ ಹಗರಣದಲ್ಲಿ ಭಾಗಿಯಾಗಿದ್ದರೂ ಸಹಿತ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ನಮ್ಮ ಪೊಲೀಸ್ ಇಲಾಖೆಯ ಮೇಲೆ ನನಗೆ ಪೂರ್ಣ ನಂಬಿಕೆ ಇದೆ, ಎಸ್‌ಐಟಿಯು ಈ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಲಿದೆ ಎಂದು ಅವರು ಹೇಳಿದರು.

Government will leave no one behind IMA fraud case: MB Patil

ನಮ್ಮ ಮುಂದೆ ಈಗ ಇರುವುದು ಹಣ ಕಳೆದುಕೊಂಡವರಿಗೆ ಹಣ ಮರಳಿ ಕೊಡಿಸುವ ವಿಚಾರ. ಸಿಬಿಐಗೆ ಪ್ರಕರಣಗಳನ್ನು ಒಪ್ಪಿಸಿ ಅವು ಏನಾಗಿದೆ ಎಂಬುದು ಗೊತ್ತಿದೆ, ಬಿಜೆಪಿಯವರಿಗೆ ಏಕಾ-ಏಕಿ ಸಿಬಿಐ ಮೇಲೆ ಪ್ರೀತಿ ಬಂದುಬಿಟ್ಟಿದೆ ಎಂದು ಅವರು ಹೇಳಿದರು.

ಚಾರ್ಜ್‌ಶೀಟ್ ಆಗದೆ ಯಾರ್ಯಾರೋ ಹೆಸರನ್ನು ಹೇಳುವುದು ಸರಿಯಲ್ಲ, ವಂಚನೆ ಮಾಡಿದವರ ಆಸ್ತಿ ಜಪ್ತಿ ಮಾಡುವುದು, ಹಣ ಕಳೆದುಕೊಂಡವರಿಗೆ ಹಣ ತಲುಪಿಸುವುದು ನಮ್ಮ ಮುಂದೆ ಇರುವ ಕೆಲಸ ಎಂದು ಎಂ.ಬಿ.ಪಾಟೀಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+