13 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ ಸೋಮವಾರ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಚುನಾವಣೆಗೆ ಕಲವೇ ದಿನಗಳು ಇರುವಾಗ ಈ ವರ್ಗಾವಣೆ ನಡೆದಿದೆ.

ಬೆಂಗಳೂರು, ಜನವರಿ 30; ಕರ್ನಾಟಕ ಸರ್ಕಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಒಟ್ಟು 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಸೋಮವಾರ ಕರ್ನಾಟಕ ಸರ್ಕಾರ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಮನಗರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳ ಎಸ್‌ಪಿಗಳು ಬದಲಾವಣೆಯಾಗಿದ್ದಾರೆ.

ಕೆ. ಸಂತೋಷ್ ಬಾಬು (ಕೆಎನ್-2011) ರಾಮನಗರ ಎಸ್ಪಿ ತಕ್ಷಣದಿಂದಲೇ ವರ್ಗಾವಣೆ. ಗುಪ್ತದಳದ ಎಸ್‌ಪಿಯಾಗಿ ಮುಂದಿನ ಆದೇಶದ ತನಕ ನಿಯೋಜನೆ.

Government Of Karnataka Transfers 13 IPS Officers

ಟಿ. ಪಿ. ಶಿವಕುಮಾರ್ (ಕೆಎನ್-2012) ಚಾಮರಾಜನಗರ ಎಸ್‌ಪಿ ವರ್ಗಾವಣೆ. ಕೆಪಿಟಿಸಿಎಲ್ ಎಸ್‌ಪಿಯಾಗಿ ನಿಯೋಜನೆ ಮಾಡಿ ಆದೇಶ.

ಕಾರ್ತಿಕ್ ರೆಡ್ಡಿ (ಕೆಎನ್ -2011) ಎಸ್‌ಪಿ ವೈರ್‌ಲೆಸ್‌ ವಿಭಾಗ ಬೆಂಗಳೂರು, ವರ್ಗಾವಣೆ. ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ.

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಪಾಟೀಲ್ ವಿನಾಯಕ್ ವಸಂತರಾವ್ (ಕೆಎನ್-2011) ಅಸಿಸ್ಟೆಂಟ್ ಜನರಲ್ ಆಫ್ ಪೊಲೀಸ್ ಜನರಲ್, ಬೆಂಗಳೂರು ಆಗಿ ನಿಯೋಜನೆ. ಡಿ. ದೇವರಾಜ್ (ಕೆಎನ್-2012) ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿ ನೇಮಕ.

ಡಿ. ಆರ್. ಸಿರಿ ಗೌರಿ (ಕೆಎನ್-2012) ಎಸ್‌ಪಿ ಇಂಟರ್ನಲ್ ಸೆಕ್ಯುರಿಟಿ ಡಿವಿಷನ್ ಆಗಿ ನೇಮಕ. ಪದ್ಮಿನಿ ಸಾಹೋ (ಕೆಎನ್-2015) ಅಸಿಸ್ಟೆಂಟ್ ಜನರಲ್ ಆಫ್ ಪೊಲೀಸ್ ಜನರಲ್, ಬೆಂಗಳೂರು ಚಾಮರಾಜನಗರ ಎಸ್‌ಪಿಯಾಗಿ ನೇಮಕ.

ಪ್ರದೀಪ್ ಗುಂಟಿ (ಕೆಎನ್-2016) ಬಂಧಿಖಾನೆ ಎಸ್‌ಪಿಯಾಗಿ ನೇಮಕ. ಗೀತಾ ಎಂ. ಎಸ್. (ಕೆಎನ್-2016) ಡಿಸಿಪಿ ಮೈಸೂರು ಅಪರಾಧ & ಸಂಚಾರಿ ವರ್ಗಾವಣೆ. ಎಸ್‌ಪಿ & ಪ್ರಿನ್ಸಿಪಲ್ ಪೊಲೀಸ್ ತರಬೇತಿ ಶಾಲೆ ಮೈಸೂರಿಗೆ ನೇಮಕ.

ಕೆ. ರಾಮರಾಜನ್ (ಕೆಎನ್-2017) ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು ವರ್ಗಾವಣೆ, ಕೊಡಗು ಎಸ್‌ಪಿಯಾಗಿ ನೇಮಕ.

ಅಯ್ಯಪ್ಪ ಎಂ. ಎ. (ಎಸ್‌ಎಲ್ 2017) ಕೊಡಗು ಎಸ್‌ಪಿ ವರ್ಗಾವಣೆ. ಗುಪ್ತದಳದ ಎಸ್‌ಪಿಯಾಗಿ ನೇಮಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+