Government Employee: ಎಲ್ಲಾ ಅಧಿಕಾರಿ/ ನೌಕರರರಿಗೆ ESR ಮಾಹಿತಿ
ಬೆಂಗಳೂರು, ಮಾರ್ಚ್ 25: ಕರ್ನಾಟಕದಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿರುವ ಎಲ್ಲಾ ಅಧಿಕಾರಿ/ ನೌಕರರ ಸೇವಾ ವಹಿಯನ್ನು ಇಎಸ್‌ಆರ್‌ನಲ್ಲಿ ಅಪ್‌ಡೇಟ್ ಮಾಡುವ ಕುರಿತು ಮಾಹಿತಿಯನ್ನು ನೀಡಲಾಗಿದೆ. ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2.0 ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಸರ್ಕಾರಿ ನೌಕರರು ವೇತನ ಪಡೆಯಲು ಇದು ಮುಖ್ಯವಾಗಿದೆ.

ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿರುವ ಎಲ್ಲಾ ಅಧಿಕಾರಿ/ ನೌಕರರ ಸೇವಾ ವಹಿಯನ್ನು Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸುವ ಕುರಿತು ಎಂಬ ವಿಷಯವನ್ನು ಇದು ಒಳಗೊಂಡಿದೆ. ಸರ್ಕಾರದ ವಿವಿಧ ಸುತ್ತೋಲೆಗಳನ್ನು ಉಲ್ಲೇಖ ಮಾಡಲಾಗಿದೆ.
ಪತ್ರದಲ್ಲಿನ ವಿವರಗಳು: ಹಲವು ಉಲ್ಲೇಖಗಳತ್ತ ತಮ್ಮ ಗಮನವನ್ನು ಸೆಳೆಯಲಾಗಿದೆ. ಸದರಿ ಉಲ್ಲೇಖಗಳನ್ವಯ, 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ ನೌಕರರುಗಳ ಸೇವಾ ವಹಿಯನ್ನು 'ವಿದ್ಯುನ್ಮಾನ ಸೇವಾ ವಹಿ' (Electronic Service Register (ESR)ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ ಎಂದು ಹೇಳಿದೆ.
ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESRಗೆ ಬದಲಾಯಿಸಿ ಮುಂದೆ ESR ನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ ಹಾಗೂ ಹೆಚ್‌ಆರ್‌ಎಂಎಸ್-1 ತಂತ್ರಾಂಶದ ಸೇವಾವಹಿ ಭಾಗದಲ್ಲಿ ಅಧಿಕಾರಿ/ ನೌಕರರ ಮಾಹಿತಿಯು ಲಭ್ಯವಿದ್ದು, ಸದರಿ ಮಾಹಿತಿಯನ್ನು ಹೆಚ್‌ಆರ್‌ಎಂಎಸ್-2 ಯೋಜನೆಯ ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿ (ESR)ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ ಹೆಚ್‌ಆರ್‌ಎಂಎಸ್-1 ತಂತ್ರಾಂಶದಲ್ಲಿ ಲಭ್ಯವಿರುವ ತಮ್ಮ ಇಲಾಖೆಯ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಕೂಡಲೇ ಪರಿಶೀಲಿಸಿ, ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಹಾಗೂ ಸೇರಿಸಲು ಸೂಚಿಸಲಾಗಿದೆ.
ಆದುದರಿಂದ ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಹೆಚ್ಚಿನ ಗಮನಹರಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ಅಧಿಕಾರಿ/ ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗೊಳಿಸುವಂತೆ ಹಾಗೂ ಸಿಬ್ಬಂದಿಗಳ ಇಎಸ್‌ಆರ್ ನಿರ್ವಹಣೆಯಲ್ಲಿ ಯಾವುದೇ ಅಡಚಣೆಯುಂಟಾಗಿದ್ದಲ್ಲಿ ಕೂಡಲೇ ಹೆಚ್‌ಆರ್‌ಎಂಎಸ್ ತಂಡವನ್ನು ಸಂಪರ್ಕಿಸಿ ಸರಿಪಡಿಸಿಕೊಂಡು ಸದರಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಈಗಾಗಲೇ ತಮ್ಮಲ್ಲಿ ಕೋರಲಾಗಿತ್ತು.
ಆದಾಗ್ಯೂ ಇಎಸ್‌ಆರ್ ಅನುಷ್ಠಾನದಲ್ಲಿ ಯಾವುದೇ ಪ್ರಗತಿಯನ್ನು ಕಂಡು ಬಂದಿರುವುದಿಲ್ಲ. ಇದೇ ರೀತಿ ಮುಂದುವರೆದಲ್ಲಿ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿರುವ ಹೆಚ್‌ಆರ್‌ಎಂಎಸ್-2ನಲ್ಲಿ ವೇತನ ಪಡೆಯುವುದು ಕಷ್ಟಕರವಾಗುತ್ತದೆ. ಸೇವಾವಹಿಯು ಸರ್ಕಾರಿ ನೌಕರರ ಒಂದು ಪ್ರಮುಖ ಭಾಗವಾಗಿದ್ದು, ಹೆಚ್‌ಆರ್‌ಎಂಎಸ್ -2 ಅನುಷ್ಠಾನಗೊಳ್ಳಲು ವಿದ್ಯುನ್ಮಾನ ಸೇವಾ ವಹಿ (ಇಎಸ್‌ಆರ್) ಪೂರ್ಣಗೊಳ್ಳುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದೆ.
ಆದುದರಿಂದ ವಿಶೇಷ ಅಭಿಯಾನದ ರೂಪದಲ್ಲಿ ಹೆಚ್ಚಿನ ಒತ್ತು ಕೊಟ್ಟು ಮಾರ್ಚ್ ಅಂತ್ಯದೊಳಗಾಗಿ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿರುವ ಎಲ್ಲಾ ಅಧಿಕಾರಿ/ ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿಯಲ್ಲಿಯೇ ಅನುಷ್ಠಾನಗೊಳಿಸುವ (ESR) ಕಾರ್ಯವನ್ನು ಪೂರ್ಣಗೊಳಿಸುವಂತೆ ಈ ಮೂಲಕ ಕೋರಿದೆ ಎಂದು ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿ/ ನೌಕರರ ಸೇವಾ ವಿವರಗಳನ್ನು ಹೆಚ್.ಆರ್.ಎಂ.ಎಸ್. -2.0 ತಂತ್ರಾಂಶದ ವಿದ್ಯುನ್ಮಾನ ಸೇವಾವಹಿ -ಇಎಸ್ಆರ್ ಗೆ ವರ್ಗಾಯಿಸಲಾಗುತ್ತದೆ. ಆರ್ಥಿಕ ಇಲಾಖೆ ಈ ಕುರಿತು 2022ರಲ್ಲಿಯೇ ಆದೇಶವನ್ನು ಹೊರಡಿಸಿತ್ತು. ಈಗಾಗಲೇ ನೇಮಕವಾದ ಮತ್ತು ಇನ್ನು ಮುಂದೆ ನೇಮಕವಾಗುವ ಎಲ್ಲಾ ನೌಕರರ ಸೇವಾ ವಿವರಗಳನ್ನು ಇಎಸ್ಆರ್‌ನಲ್ಲಿ ದಾಖಲಿಸಿ ನಿರ್ವಹಿಸಲಾಗುತ್ತದೆ. 2021ರ ಏಪ್ರಿಲ್ 1ರ ನಂತರ ಸರ್ಕಾರಿ ಸೇವೆಗೆ ನೇಮಕವಾಗುವ ಎಲ್ಲಾ ಅಧಿಕಾರಿ, ನೌಕರರ ಸೇವಾ ವಹಿಯನ್ನು ಇಎಸ್ಆರ್‌ನಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ದೇಶ ನೀಡಿತ್ತು.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ಮೂರು ವರ್ಷ ಮುಗಿದಿದೆ, ಸಚಿವ ಸಂಪುಟ ಬದಲಿಸಿ: ಹೈಕಮಾಂಡ್ಗೆ ಮನವಿ ಸಲ್ಲಿಸಲು ಟಿ.ಬಿ.ಜಯಚಂದ್ರ ಸಜ್ಜು -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications