IAS, IPS Transfer: ಹಲವು ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಪಟ್ಟಿ

ಬೆಂಗಳೂರು, ಜೂನ್ 15: ಲೋಕಸಭೆ ಚುನಾವಣೆ 2024 ಮುಕ್ತಾಯಗೊಳ್ಳುತ್ತಿದ್ದಂತೆಯೇ ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಹಲವು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಹಿರಿಯ ಐಎಎಸ್ ಅಧಿಕಾರಿಗಳಾದ ಟಿ. ಕೆ. ಅನಿಲ್ ಕುಮಾರ್, ಹರ್ಷ ಗುಪ್ತ ಸೇರಿ ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

Government Of Karnataka IAS And IPS Officers Transfer List

ವರ್ಗಾವಣೆಗೊಂಡ ಅಧಿಕಾರಿಗಳು

* ಅನಿಲ್ ಕುಮಾರ್ ಕೆ. ಟಿ. (ಕೆಎ:1995). ಸರ್ಕಾರದ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ವರ್ಗಾವಣೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ), ಬೆಂಗಳೂರು ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ನೇಮಕ. ಈ ಹುದ್ದೆಯಲ್ಲಿದ್ದ ಮೊಹಮ್ಮದ್ ಮೊಹಸಿನ್ ಬಿಡುಗಡೆ.

* ಹರ್ಷ ಗುಪ್ತ (ಕೆಎನ್: 1997). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಅನಿಲ್ ಕುಮಾರ್ ಕೆ. ಟಿ. ವರ್ಗಾವಣೆಗೊಳಿಸಲಾಗಿದೆ.

* ವಿಪುಪ್ ಬನ್ಸಾಲ್ (ಕೆಎನ್:2005). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಸರ್ಕಾರದ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಎಂಎಸ್‌ಎಂಇ & ಮೈನ್ಸ್), ಬೆಂಗಳೂರು ಹುದ್ದೆಗೆ ನೇಮಿಸಲಾಗಿದೆ. ಈ ಹುದ್ದೆ 30/6/2024ರಿಂದ ತೆರವಾಗಿತ್ತು.

* ರಣದೀಪ್ ಚೌಧರಿ (ಕೆಎನ್: 2008). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಸರ್ಕಾರದ ಕಾರ್ಯದರ್ಶಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಡಾ. ಪ್ರಕಾಶ್ ಜಿ. ಸಿ. ಅವರನ್ನು ಬಿಡುಗಡೆ ಮಾಡಲಾಗಿದೆ.

* ಕುಮಾರ್ ಟಿ. ಹೆಚ್. ಎಂ. (ಕೆಎನ್:2008). ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರು ಹುದ್ದೆಗೆ ಜೊತೆಗೆ ಹೆಚ್ಚುವರಿಯಾಗಿ ಆಯುಕ್ತರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಬೆಂಗಳೂರು, ಹೊಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ನೀಡಲಾಗಿದೆ. ಈ ಹುದ್ದೆಯಲ್ಲಿದ್ದ ಸಿ. ಎನ್. ಶ್ರೀಧರ್ ವರ್ಗಾವಣೆ ಮಾಡಲಾಗಿದೆ.

ಐಪಿಎಸ್ ವರ್ಗಾವಣೆ

* ಕುಲದೀಪ್ ಕುಮಾರ್ ಆರ್. ಜೈನ್ (ಕೆಎನ್:2011) ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ವರ್ಗಾವಣೆ. ಡಿಸಿಪಿ ಟ್ರಾಫಿಲ್ ಪೂರ್ವ ವಿಭಾಗ, ಬೆಂಗಳೂರು ಹುದ್ದೆಗೆ ವರ್ಗಾವಣೆ.

* ಡಿ. ದೇವರಾಜ್ (ಕೆಎನ್:2012). ಹುದ್ದೆಯ ನಿರೀಕ್ಷೆಯಲ್ಲಿದ್ದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಡಿಸಿಪಿ ಪೂರ್ವ ವಿಭಾಗ, ಬೆಂಗಳೂರು ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+