Karnataka Govt Holidays 2023 ; ಮಹಾವೀರ ಜಯಂತಿ ರಜೆ ಬದಲಾವಣೆ

ಬೆಂಗಳೂರು, ಜನವರಿ 18; ಕರ್ನಾಟಕ ಸರ್ಕಾರ ಮಹಾವೀರ ಜಯಂತಿ ರಜೆ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ 3/4/2023ರಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿತ್ತು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ-1 ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಟಾಚಾರ) ಅಪೇಕ್ಞಾ ಸತೀಶ್ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲಿ ಸರ್ಕಾರವು 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿರುವ ಸರ್ಕಾರದ ಅಧಸೂಚನೆ ಸಂಖ್ಯೆ ಸಿಆಸುಇ 16 ಹೆಚ್‌ಹೆಚ್ಎಲ್ 2022 ದಿನಾಂಕ 21/11/2022ರ ಅಧಿಸೂಚನೆ-1 ಪಟ್ಟಿಯಲ್ಲಿನ ಕ್ರಮ ಸಂಖ್ಯೆ (4) ರಲ್ಲಿ ಮಹಾವೀರ ಜಯಂತಿ ಪ್ರಯುಕ್ತ ರಜೆ ಘೋಷಣೆ ಮಾಡಲಾಗಿತ್ತು.

Government Of Karnataka Changed Mahavir Jayanti 2023 Holiday Date

ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ 3/4/2023 ಎಂಬುದಾಗಿ ನಮೂದಿಸಲಾಗಿತ್ತು. ಈಗ ಆದೇಶದಂತೆ ದಿನಾಂಕ 4/4/2023 ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ.

ಕರ್ನಾಟಕ ಸರ್ಕಾರದ ಆದೇಶದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಮಹಾವೀರ ಜಯಂತಿ ಆಚರಣೆ ಮಾಡಲಾಗುತ್ತದೆ.

ಸರ್ಕಾರದ ಹಿಂದಿನ ಆದೇಶದಂತೆ 3/4/2023ರ ಸೋಮವಾರ ಮಹಾವೀರ ಜಯಂತಿ ಸರ್ಕಾರಿ ರಜೆ ಇತ್ತು. ಆದರೆ ಪರಿಷ್ಕೃತ ಆದೇಶದಂತೆ 4/4/2023ರ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ.

ಉತ್ತಮ ಬದುಕಿಗೆ ಪ್ರೇರೆಪಣೆ; ಸತ್ಯ, ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಬೋಧಿಸಿದ ಮಹಾವೀರರ ಸಂದೇಶಗಳು ಇಂದಿಗೂ ಪ್ರಸ್ತುತ. 2,600 ವರ್ಷಗಳ ಹಿಂದೆ ಬದುಕಿ, ಉತ್ತಮ ಬದುಕಿಗೆ ಮಾರ್ಗದರ್ಶನ ನೀಡಿದ ಅವರ ಸಂದೇಶಗಳು ನಮ್ಮನ್ನು ಉತ್ತಮವಾಗಿ ಬದುಕಲು ಪ್ರೇರೇಪಿಸುತ್ತದೆ.

ಜಿನ ಎಂದರೆ ಗೆದ್ದವನು ಎಂದರ್ಥ. ಬದುಕಿನ ಗಮ್ಯದೆಡೆಗೆ ತಲುಪಿ ಇತರರು ಅಲ್ಲಿ ತಲುಪಲು ನೆರವಾಗುವುದು. ಬದುಕಿನ ಅರ್ಥವನ್ನು ಹೇಳಿಕೊಡುವುದು, ಪ್ರಕೃತಿಯನ್ನು ಅರಿತು ಬಾಳುವುದರ ಅಗತ್ಯವನ್ನು ಮಹಾತ್ಮರು ನಮಗೆ ಬಹಳ ಹಿಂದಿನಿಂದಲೇ ಬೋಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+