ಸುಳ್ಳು ಸುದ್ದಿ ತಡೆಗೆ ಫ್ಯಾಕ್ಟ್ ಚೆಕ್ ವಿಭಾಗ ಸ್ಥಾಪಿಸಲು ಸರ್ಕಾರದಿಂದ ಏಜೆನ್ಸಿಗಳಿಗೆ ಅಹ್ವಾನ
ಬೆಂಗಳೂರು, ಅಕ್ಟೋಬರ್ 05: ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕೈಗೊಳ್ಳಲು ಕಾನೂನು ಮಾರ್ಗ ಅನುಸರಿಸಲು ಮುಂದಾಗಿರುವ ಸರ್ಕಾರವು ಫ್ಯಾಕ್ಟ್ ಚೆಕ್ ವಿಭಾಗ ಆರಂಭಿಸಲು ಏಜೆನ್ಸಿಗಳಿಗೆ ಆಹ್ವಾನ ನೀಡಿದೆ.
ಕರ್ನಾಟಕ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆಯು 'ಮಾಹಿತಿ ಅಸ್ವಸ್ಥತೆ ಟ್ರ್ಯಾಕಿಂಗ್ ಘಟಕ' (ಐಡಿಟಿಯು) ಸ್ಥಾಪಿಸಲು ಏಜೆನ್ಸಿಗಳಿಂದ ಆಸಕ್ತ ಏಜೆನ್ಸಿಗಳಿಗೆ (ಇಒಐ) ಆಹ್ವಾನ ನೀಡಿದೆ. ನೇಮಕಗೊಂಡ ಏಜೆನ್ಸಿಗಳು ನಕಲಿ ಸುದ್ದಿಗಳನ್ನು ತಡೆಯಲು ಸರ್ಕಾರಕ್ಕಾಗಿ ಕೆಲಸ ಮಾಡುತ್ತವೆ.

ಈ ಸಂಬಂಧ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುಳ್ಳು ಸುದ್ದಿ ಹರಡುವವರ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಕಲಿ ಸುದ್ದಿ ಹರಡುವುದನ್ನು ಪತ್ತೆ ಹಚ್ಚಲು ಮೂರು ವಿಭಿನ್ನ ಘಟಕಗಳಿಗೆ ಏಜೆನ್ಸಿಗಳ ನೋಂದಾವಣೆಗಾಗಿ ಆಹ್ವಾನ ನೀಡಲಾಗಿದೆ. ಇದರಲ್ಲಿ ಫ್ಯಾಕ್ಟ್ ಚೆಕ್ ಟೀಮ್, ಅನಲಿಟಿಕ್ಸ್ ತಂಡ ಮತ್ತು ಕೆಪಾಸಿಟಿ ಬಿಲ್ಡಿಂಗ್ ತಂಡ ಇರಲಿವೆ. ಸರ್ಕಾರದ ಆದೇಶದ ಪ್ರಕಾರ ಮೂರು ತಂಡಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ.
1. ಫ್ಯಾಕ್ಟ್ ಚೆಕ್ ಟೀಮ್:
ಈ ತಂಡದಲ್ಲಿ ಕರ್ನಾಟಕ ಸರ್ಕಾರದಿಂದ ನೋಂದಾಯಿತರಾದ ಸ್ವತಂತ್ರ ಫ್ಯಾಕ್ಟ್ ಚೆಕ್ ಏಜೆನ್ಸಿಗಳನ್ನು ಹೊಂದಿರುತ್ತದೆ. ಅಲ್ಲದೆ ಮಾಹಿತಿ ಅಸ್ವಸ್ಥತೆಯನ್ನು ಗುರುತಿಸುವುದು ಇದರ ಉದ್ದೇಶವಾಗಿರುತ್ತದೆ.
2. ಅನಲಿಟಿಕ್ಸ್ ತಂಡ:
ಈ ತಂಡವು ಡಾಟಾ ಅನಲಿಟಿಕ್ಸ್ ಹಾಗೂ ಕೃತಕ ಬುದ್ದಿವಂತಿಕೆಯ ತಂತ್ರಜ್ಞಾನದ ಬುನಾದಿಯನ್ನು ಅಳವಡಿಸಿ ಮಾಹಿತಿ ಅಸ್ಥಸ್ಥತೆ ಪರಿಸರ ವ್ಯವಸ್ಥೆಯನ್ನು ಚುರುಕುಗೊಳಿಸಲು ರಚನೆಯಾಗಲಿದೆ.
3. ಕೆಪಾಸಿಟಿ ಬಿಲ್ಡಿಂಗ್ ತಂಡ:
ಈ ತಂಡವು ಸಾರ್ವಜನಿಕರಿಗೆ ಮಾಹಿತಿ ಅಸ್ವಸ್ಥತೆಯ ಪರಿಸರ ವ್ಯವಸ್ಥೆಯ ಅಸ್ತಿತ್ವ ಮತ್ತು ಪ್ರಭಾವದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ.
ಏಜೆನ್ಸಿ ಅರ್ಹತೆ ಅಗತ್ಯತೆ
ಈ ಆಹ್ವಾನವು ಭಾರತದಲ್ಲಿ ನೋಂದಾಯಿತರಾದ ಎಲ್ಲರಿಗೂ ಮುಕ್ತ ಪ್ರವೇಶವಿದ್ದು, ಕಳೆಗೆ ಸೂಚಿಸಲಾದ ಪೂರ್ವಾರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.
1. ಶಾಸನಬದ್ಧವಾಗಿರಬೇಕು, ಭಾರತದಲ್ಲಿ ನೋದಾಯಿತವಾಗಿರಬೇಕು.
2. ಆಗಸ್ಟ್ 31 ಕ್ಕೆ ಅನ್ವಯವಾಗುವಂತೆ ಕನಿಷ್ಟ 3 ವರ್ಷಗಳ ಚಾಲ್ತಿಯಲ್ಲಿರಬೇಕು.
3. ಫ್ಯಾಕ್ಟ್ ಚೆಕ್ಕಿಂಗ್ ಸೇವೆಯಲ್ಲಿ ನಿರತರಾಗಿರಬೇಕು ಮತ್ತು ಇದೇ ರೀತಿಯ ಚಟುವಟಿಕೆಗಳನ್ನು ಕೂಗೊಂಡಿರುವ ದಾಖಲೆ ಹೊಂದಿರಬೇಕು.
4. ಧನಸಹಾಯದಲ್ಲಿ ಪಾರದರ್ಶಕತೆ- ಕಳೆದ ಮೂರು ಹಣಕಾಸು ವಾರ್ಷಿಕವಾಗಿ ಏಜೆನ್ಸಿಯು ಒಟ್ಟಾರೆ ಆದಾಯದ ತನ್ನ ಲೆಕ್ಕಪತ್ರದಲ್ಲಿ ಸ್ವೀಕರಿಸಿದ 5% ಅಥವಾ ಹೆಚ್ಚಿನ ಧನಸಹಾಯವು ತಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿರಬೇಕು.
5. ಏಜೆನ್ಸಿ ಅಥವಾ ಇವರ ನಿರ್ದೇಶಕರ ವಿರುದ್ಧ ಯಾವುದೇ ಅಪರಾಧ ಪ್ರಕ್ರಿಯೆಗಳು ಅಥವಾ ಯಾವುದೇ ಗಂಭೀರ ಅಪರಾಧ ಅಥವಾ ನೀತಿ ಸಂಹಿತೆ ಅಪರಾಧಗಳ ದಾಖಲೆಗಳು ಇರಬಾರದು,
6. ಇ ಪ್ರೊಕ್ಯೂರ್‌ಮೆಂಟ್ ಪೋರ್ಟಲ್ http://kppp.karnataka.gov.in ನಲ್ಲಿ ಲಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿದ ಪ್ರಸ್ತಾವನೆಗಳನ್ನು ಸಲ್ಲಿಸಬೇಕು.
ಏಜೆನ್ಸಿಗಳು ತಮ್ಮ ಆಸಕ್ತಿಯ ಯಾವುದಾದರೂ ತಂಡಕ್ಕೆ ಭಾಗಿಯಾಗಿ ಅಥವಾ ಎಲ್ಲ ತಂಡಗಳಿಗೂ ಅನ್ವಯಿಸುವಂತೆ ವ್ಯಕ್ತಪಡಿಸಬಹುದು.
ವಿವರಗಳು http://kppp.karnataka.gov.in ಮತ್ತು http://itibtst.karnataka.gov.in ನಲ್ಲಿ ಲಭ್ಯವಿದೆ. ದಾಖಲೆಗಳಲನ್ನು ಸಲ್ಲಿಸಲು ಕಡೆಯ ದಿನಾಂಕ ಅಕ್ಟೋಬರ್ 16 ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.

Click it and Unblock the Notifications