Get Updates
Get notified of breaking news, exclusive insights, and must-see stories!

Tungabhadra Dam: ರಾಜ್ಯದ ಎಲ್ಲ ಜಲಾಶಯಗಳ ಸ್ಥಿತಿಗತಿ ಪರಿಶೀಲನೆಗೆ ತಜ್ಞರ ಸಮಿತಿ ರಚನೆ

ಬೆಂಗಳೂರು, ಆಗಸ್ಟ್ 13: ಕರ್ನಾಟಕದ ರಾಜ್ಯದ ಎರಡನೇ ಅತೀ ದೊಡ್ಡ ಜಲಾಶಯವಾದ ತುಂಗಭದ್ರಾ ಡ್ಯಾಂ (Tungabhadra Dam) ಗೇಟೊಂದು ಕೊಚ್ಚಿ ಹೋದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಜಲಾಶಯಗಳ ಪರಿಶೀಲನೆಗೆ ಮುಂದಾಗಿದೆ. ಈ ಸಂಬಂಧ ತಜ್ಞರನ್ನು ಒಳಗೊಂಡ 'ಅಣೆಕಟ್ಟುಗಳ ಸುರಕ್ಷತಾ ಸಮಿತಿ' ರಚನೆ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಅಧಿಕಾರಿಗಳು ತಜ್ಞರು ಈ ಸಮಿತಿಯಲ್ಲಿ ಇರಲಿದ್ದು, ಅವರೆರು ಶೀಘ್ರವೇ ವಿವಿಧ ಡ್ಯಾಂಗಳ ಸ್ಥಿತಿಗತಿ ಪರಿಶೀಲಿಸಲಿದ್ದಾರೆ. ಸುರಕ್ಷತೆ ತಪಾಸಣೆ ಮಾಡಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.

Government Formed Committee for Review All Dams in State after Tungabhadra Dam Issue

ನಿರಂತರ ಮಳೆಗೆ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಅದರ ಕ್ರಸ್ಟ್ ಕಿತ್ತು ಹೋಗಿದ್ದು, ಗೇಟ್ ತಯಾರಿ ಕಾರ್ಯ ಆರಂಭಿಸಲಾಗಿದೆ. ಸದ್ಯ ತುಂಗಭದ್ರಾ ಅಣೆಕಟ್ಟಿನ ಮೇಲೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಇದರೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇರುವ ಇತರ ಅಣೆಕಟ್ಟುಗಳನ್ನು ಪರಿಶೀಲಿಸುವ ಕಾರ್ಯ ಸಹ ಮಾಡಲಾಗುವುದು ಎಂದು ಹೇಳಿದರು.

52ಟಿಎಂಸಿ ನೀರು ಬಿಟ್ಟು ಗೇಟ್ ಫಿಟ್

ಇನ್ನೂ ತುಂಗಭದ್ರಾ ಡ್ಯಾಂ ಗೇಟ್ ತಯಾರಿಸಲಾಗುತ್ತಿದೆ. ಜಿಂದಾಲ್ ಕಂಪನಿಯಿಂದ ಅಗತ್ಯ ಕಬ್ಬಿಣ ಕೇಳಿದ್ದೇವೆ. 19ನೇ ತುಂಡಾಗಿರುವುದಿಂದ ಈ ದ್ವಾರದಿಂದ ನೀರಿನ ರಭಸ ಹೆಚ್ಚಾಗಿದೆ. ಮರಳಿ ಗೇಟ್ ಕೂರಿಸಲು ಡ್ಯಾಂನಲ್ಲಿ 52ಟಿಎಂಸಿ ನೀರು ಹೊರ ಬೀಡಬೇಕಿದೆ. ಈ ಸಂಬಂಧ ತಜ್ಞರು ಅನುಮತಿ ನೀಡಿದ್ದಾರೆ

ಡ್ಯಾಂಗೆ 05 ತಾತ್ಕಾಲಿಕ ಗೇಟ್ ತಯಾರಿ ಕೆಲಸ

ಅಲ್ಲದೇ ಟಿಬಿ ಡ್ಯಾಂ 48 ಟನ್ ತೂಕ್ ಹೊಂದಿದ್ದ ಗೇಟ್ ಆಗಿತ್ತು. ಸದ್ಯ ಅಷ್ಟು ದೊಡ್ಡ ಪ್ರಮಾಣದ ಗೇಟ್ ಕೂರಿಸಲು ಮಳೆಗಾಲದಲ್ಲಿ ಅಸಾಧ್ಯವಾಗಿದೆ. ಅಷ್ಟೇ ತೂಕದ ಗೇಟ್ ತಯಾರಿಸಿ ಕೂರಿಸಲು ಒಂದಷ್ಟು ತಾಂತ್ರಿಕ ಸವಾಲುಗಳು ಎದುರಾಗುತ್ತವೆ. ಒಂದು ವೇಳೆ ಕೂರಿಸಲು ಮುಂದಾದರೆ ಡ್ಯಾಂ ಇತರ ಗೇಟ್‌ಗಳಿಗೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ.

Government Formed Committee for Review All Dams in State after Tungabhadra Dam Issue

ಹೀಗಾಗಿಯ ರಾಜ್ಯ ಸರ್ಕಾರ ಎಲ್ಲ ಅರಿತುಕೊಂಡು, ತಜ್ಞರ ಜೊತೆಗೆ ಚರ್ಚಿಸಿ 05 ಹೊಸ ತಾತ್ಕಾಲಿಕ ಗೇಟ್ ನಿರ್ಮಿಸುತ್ತಿದೆ. ಇವುಗಳನ್ನು ಈಗ ಅಳವಡಿಸಿ ನೀರು ಪೋಲಾಗದಂತೆ ತಡೆಯುತ್ತೇವೆ. ಬೇಸಿಗೆ ವೇಳೆ ನೀರಿಲ್ಲದ್ದನ್ನು ನೋಡಿಕೊಂಡು ಸೂಕ್ತ ಗಾತ್ರ, ತೂಕದ ಗೇಟ್ ಅಳವಡಿಸಲಾಗುವುದು ಎಂದು ಡಿಸಿಎಂ ವಿವರಿಸಿದರು.

ಅಪಾರ ಪ್ರಮಾಣದಲ್ಲಿ ಡ್ಯಾಂ ನೀರು ಹೊರಕ್ಕೆ

ಸದ್ಯ ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಕೊಪ್ಪಳ, ಹೊಸಪೇಟೆ, ವಿಜಯನಗರ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ವಿವಿಧೆಡೆ ಹಳೆಯ ನದಿ ಮೇಲ್ಸೇತುವೆಗಳ ಮೇಲೆ ವಾಹನ, ಜನ ಸಂಚಾರ ರದ್ದುಗೊಳಿಸಳಾಗಿದೆ. ಅಗತ್ಯ ಸುರಕ್ಷತೆ ಕೈಗೊಳ್ಳುವಂತೆ ಆಯಾ ಜಿಲ್ಲಾಡಳಿತಕ್ಕೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+