ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ವೈದ್ಯರ ಮುಷ್ಕರ, ಸರ್ಕಾರಿ ವೈದ್ಯರ ರಜೆ ಕಟ್

|
Google Oneindia Kannada News

ಬೆಂಗಳೂರು, ನವೆಂಬರ್ 15 : ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು ಮಸೂದೆ ತಿದ್ದುಪಡಿ ವಿರೋಧಿಸಿ ರಾಜ್ಯ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಮುಂದುವರೆದಿದ್ದು, ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.

ನಾಳೆಯಿಂದ ಬೆಂಗಳೂರಿನ ಎಲ್ಲಾ ಖಾಸಗಿ 'ಒಪಿಡಿ'ಗಳು ಬಂದ್ನಾಳೆಯಿಂದ ಬೆಂಗಳೂರಿನ ಎಲ್ಲಾ ಖಾಸಗಿ 'ಒಪಿಡಿ'ಗಳು ಬಂದ್

ಕಳೆದ ಎರಡು ದಿನಗಳಿಂದ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಸರ್ಕಾರಿ ವೈದ್ಯರ ರಜೆಗೆ ಕುತ್ತು ಎದುರಾಗಿದೆ. ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಇರುವ ಕಾರಣ ಅನಿವಾರ್ಯವಾಗಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಎಚ್ಚೆತ್ತಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಿ ಆಸ್ಪತ್ರೆಯ ವೈದ್ಯರು ರಜೆ ತೆಗೆದುಕೊಳ್ಳಬಾರದು ಎಂದು ಸುತ್ತೋಲೆ‌ ಹೊರಡಿಸಿದೆ.

Government doctors leave cancelled due to the ongoing protest by private doctors

ಖಾಸಗಿ ವೈದ್ಯರ ಪ್ರತಿಭಟನೆ ಮುಗಿಯುವವರೆಗೆ ಸರ್ಕಾರಿ ವೈದ್ಯರಿಗೆ ರಜೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ವೈದ್ಯರ ಧರಣಿ: ಆರೋಗ್ಯ ಮಂತ್ರಿಯ ಹಠಮಾರಿತನಕ್ಕೆ ಇನ್ನೆಷ್ಟು ಬಲಿ?ವೈದ್ಯರ ಧರಣಿ: ಆರೋಗ್ಯ ಮಂತ್ರಿಯ ಹಠಮಾರಿತನಕ್ಕೆ ಇನ್ನೆಷ್ಟು ಬಲಿ?

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ನವೆಂಬರ್ 13ರಂದು ಸಾಂಕೇತಿಕವಾಗಿ ಒಂದು ದಿನ ಮುಸ್ಕರ ಮಾಡಿದ್ದರು. ಇದಾದ ಬಳಿಕ ಸರ್ಕಾರದ ಮೇಲೆ ಒತ್ತಡ ಹೇರಲು ನವೆಂಬರ್ 13ರಿಂದ ವೈದ್ಯರು ಆಸ್ಪತ್ರೆಗಳನ್ನು ಮುಚ್ಚಿ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ.

ಇದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಈಗಾಗಲೇ ಸುಮಾರು 10 ರಿಂದ 15 ಜನರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸಾಮಾಗ್ರಿಗಳಿಲ್ಲ. ಒಟ್ಟಿನಲ್ಲಿ ಸರ್ಕಾರ ಮತ್ತು ವೈದ್ಯರ ನಡುವಿನ ಹಗ್ಗ-ಜಗ್ಗಾಟದಲ್ಲಿ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ.

ಕರ್ನಾ­ಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ 2017ರ ಮುಖ್ಯಾಂಶಗಳು

* ಸರ್ಕಾರ ನಿಗದಿಪಡಿಸುವು­ದಕ್ಕಿಂತ ಹೆಚ್ಚಿನ ದರವನ್ನು ಖಾಸಗಿ ಆಸ್ಪತ್ರೆಗಳು ಸಂಗ್ರಹಿಸುವಂತಿಲ್ಲ

* ಸಂಗ್ರಹ ಮಾಡಿದರೆ 25,000 ದಿಂದ 5 ಲಕ್ಷದವರೆಗೆ ದಂಡ ವಿಧಿಸುವ ಮತ್ತು 6 ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ
* ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಯಿಂದ ಅಥವಾ ಅವರ ಪ್ರತಿನಿ­ಧಿ­ಯಿಂದ ಮುಂಗಡ ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ

* ಆಸ್ಪತ್ರೆಯಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೆ ಸಂಬಂಧಿಕರಿಗೆ ದೇಹ ಹಸ್ತಾಂತರಿಸುವ ಮುನ್ನ ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯಿಸುವಂತಿಲ್ಲ.

* ರೋಗಿಗಳ ಕುಂದು ಕೊರತೆ ವಿಚಾರಣೆಗೆ ಜಿಲ್ಲಾ ಅಥವಾ ಮಹಾನಗರ ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಸಮಿತಿ ರಚಿಸಲು ಅವಕಾಶ

* ಈ ಸಮಿತಿಗೆ ಜಿಲ್ಲಾ ಪಂಚಾ­ಯಿತಿ ಮುಖ್ಯ ಕಾರ್ಯ ನಿರ್ವಹಣಾ­ಧಿಕಾರಿ ಅಧ್ಯಕ್ಷರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ಒಬ್ಬ ಪ್ರತಿ­ನಿಧಿ, ಜಿಲ್ಲಾ ಸರ್ಜನ್‌, ಸರ್ಕಾರಿ ವಕೀಲ ಮತ್ತು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿದ ಮಹಿಳಾ ಪ್ರತಿನಿಧಿಗಳು ಸದಸ್ಯರು

* ಹೊಸ ಮಸೂದೆಯು ಆಸ್ಪತ್ರೆ, ದವಾಖಾನೆ, ನರ್ಸಿಂಗ್‌ ಹೋಂ, ಡೆಂಟಲ್‌ ಕ್ಲಿನಿಕ್‌, ಡೆಂಟಲ್‌ ಪಾಲಿ ಕ್ಲಿನಿಕ್, ಚಿಕಿತ್ಸಾ ಪ್ರಯೋಗಾಲಯ, ರೋಗ ನಿಧಾನ ಕೇಂದ್ರ, ಪ್ರಸೂತಿ ಗೃಹ, ರಕ್ತನಿಧಿ, ಕ್ಷ-ಕಿರಣ ಪರೀಕ್ಷಾ ಕೇಂದ್ರ, ಸ್ಕ್ಯಾನಿಂಗ್‌ ಕೇಂದ್ರ, ಫಿಸಿಯೋಥೆರಪಿ ಕೇಂದ್ರ, ಚಿಕಿತ್ಸಾಲಯ, ಪಾಲಿ ಕ್ಲಿನಿಕ್‌, ವೈದ್ಯ ಸಲಹಾ ಕೇಂದ್ರ, ಸಾರ್ವಜನಿಕ ರೋಗ ತಪಾಸಣೆ, ರೋಗ ನಿಧಾನ, ರೋಗ ತಡೆಗಟ್ಟುವಿಕೆ ಅಥವಾ ರೋಗ­ಗುಣಪಡಿಸುವ ಮುಂತಾದ ಹೆಸರಿನಿಂದ ಕರೆಯುವ ಸಂಸ್ಥೆಗಳು, ಸ್ವಯಂ ಸೇವಾ ಅಥವಾ ಖಾಸಗಿ ಸಂಸ್ಥೆಗಳಿಗೆ ಅನ್ವಯ.
* ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಂಬಂಧಿಸಿದ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯ. ನೋಂದಣಿ ನಿಬಂಧನೆಗಳು ಮತ್ತು ಷರತ್ತುಗಳನ್ನು ಬದಿಗೊತ್ತಿ ಖಾಸಗಿ ವೈದ್ಯಕೀಯ ಸಂಸ್ಥೆ ಸ್ಥಾಪನೆ ಮಾಡುವಂತಿಲ್ಲ.

English summary
No leave for Government Hospital doctors until strike ends. Karnataka Health and family welfare department commissioner sent out circular. Leave cancelled due to the ongoing protest by private doctors against KPME bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X