ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ ಪ್ರಜಾಪ್ರಭುತ್ವವನ್ನು ಕತ್ತಲಲ್ಲಿರಿಸಿದೆ: ಕುಂ.ವೀರಭದ್ರಪ್ಪ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 6: ಕನ್ನಡ ಪತ್ರಕರ್ತೆ, ಬರಹಗಾರ್ತಿ ಗೌರಿ ಲಂಕೇಶ್(55) ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಚಿಂತಕ, ಸಾಹಿತಿ ಕುಂ.ವೀರಭದ್ರಪ್ಪ ಅವರು, 'ಈ ಹತ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕತ್ತಲಲ್ಲಿರಿಸುತ್ತದೆ' ಎಂದು ಸಂತಾಪ ವ್ಯಕ್ತಪಡಿಸಿದರು.

ಅಪರೂಪದ ಪತ್ರಕರ್ತೆ ಗೌರಿ ಲಂಕೇಶ್ ವ್ಯಕ್ತಿ ಪರಿಚಯಅಪರೂಪದ ಪತ್ರಕರ್ತೆ ಗೌರಿ ಲಂಕೇಶ್ ವ್ಯಕ್ತಿ ಪರಿಚಯ

"ಪ್ರೊ. ಕಲಬುರ್ಗಿಯವರನ್ನು ಹತ್ಯೆ ಮಾಡಿದ ಸನಾತನ ಕ್ರೌರ್ಯವೇ ಸಹೋದರಿ ಗೌರಿ ಲಂಕೇಶ್ ಅವರನ್ನು ಭೌತಿಕವಾಗಿ ವ್ಯವಕಲನ ಮಾಡಿವೆ. ಇದು ರಣಹೇಡಿಗಳ ಹೇಯಕೃತ್ಯ. ಈ ಕೊಲೆಗಡುಕರಿಗೆ ಹಗಲು ಇರುಳುಗಳ ವ್ಯತ್ಯಾಸ ತಿಳಿಯದು, ಮುಗಿಸುವಂಥ ಕೃತ್ಯಗಳು ಪ್ಯಾಸಿಸಂ ಗೆ ರಹದಾರಿ ಕಲ್ಪಿಸುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕತ್ತಲಲ್ಲಿರುಸುತ್ತವೆ, ಸಂವಿಧಾನವನ್ನು ಸಮಾಧಿ ಮಾಡುತ್ತವೆ. ವೈಚಾರಿಕ ಪ್ರಗತಿಪರ ಮನಸ್ಸುಗಳು ಹುತಾತ್ಮಪಟ್ಟ ಏರುವ ಮುನ್ನ ಸರ್ಕಾರ ಕೊಲೆಗಡುಕರನ್ನು ಶೀಘ್ರ ಪತ್ತೆಹಚ್ಚಿ ಶಿಕ್ಷಿಸಬೇಕು ಎಂದು ಅವರು ಬಳ್ಳಾರಿ ಮೂಲದ 55 ವರ್ಷದ ಕುಂವೀ ಆಗ್ರಹಿಸಿದರು.

Gouri Lankesh's murder pulled democracy into darkness: Kum Veerabhadrappa

"ಚುನಾಯಿತ ಪ್ರತಿನಿಧಿಗಳು ಅಸಂವಿಧಾನಿಕ ಹಾಗು ಹಿಂಸೆಯನ್ನು ಪ್ರಚೋದಿಸುವ ಮಾತುಗಳನ್ನು ಸಾರ್ವಜನಿಕವಾಗಿ ವಾಂತಿ ಮಾಡಿಕೊಳ್ಳುವುದನ್ನು ಇನ್ನಾದರೂ ನಿಲ್ಲಿಸಬೇಕು" ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕುಂ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಗಣ್ಯರು ಏನಂತಾರೆ?ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಗಣ್ಯರು ಏನಂತಾರೆ?

ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5 ರಂದು ಅವರ ನಿವಾಸದಲ್ಲಿ ದುಷ್ಕರ್ಮಿಗಳು ಗುಂಡುಹಾರಿಸಿ ಸಾಯಿಸಿದ್ದು, ಇಂದು ಅಪರಾಹ್ನ 4 ಗಂಟೆಗೆ ಅವರ ಅಂತ್ಯಸಂಸ್ಕಾರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ.

ರೇಖಾರಾಣಿ ಫೇಸ್ ಬುಕ್ ಪೋಸ್ಟ್
"ಒಬ್ಬಳು ವಿಚಾರವಾದಿಯಾಗಿ ನನಗೆ ಹಿಂದೂ ಧರ್ಮದ ಬಗ್ಗೆ ಅಪಾರ ಗೌರವವಿದೆ. ಜಗತ್ತಿಗೆ ದಯೆ-ಧರ್ಮವನ್ನು ಹಂಚಿದವರು ನಾವು.... ನಮ್ಮ ಧರ್ಮದಲ್ಲಿ ನೀವು ವಾದಮಾಡಬಹುದು, ಸಾರ್ವಜನಿಕವಾಗಿ ಭಗವದ್ಗೀತೆ ಸುಟ್ಟುಹಾಕಬಹುದು, ದೇವಸ್ಥಾನ ನನ್ನ ಎಕ್ಕಡ ಎನ್ನಬಹುದು, ದೇವರನ್ನು ಹಿಯ್ಯಾಳಿಸಿ ಸಾಹಿತ್ಯ ಬರೆದು, ಹಂಗಿಸಿ ಸಿನೆಮಾ ತೆಗೆದು ವಿಚಾರವಂತರಾಗಿ ಹೋರಾಟಗಾರರಾಗಬಹುದು.

ಜಾತಿ- ಧರ್ಮವನ್ನು ಧಿಕ್ಕರಿಸಬಹುದು, ಅಂತರ್ಜಾತೀಯ ವಿವಾಹವಾಗಬಹುದು. ಮುಂದಿನ ಪೀಳಿಗೆಗೆ ದೇವರು-ಧರ್ಮದ ಅಫೀಮಿನಿಂದ ಹೊರಗೆ ತರಬಹುದು. ಬೇಕಾದ ಧರ್ಮಕ್ಕೆ ನಮ್ಮನ್ನು ಮತಾಂತರಿಸಿಕೊಳ್ಳಬಹುದು.

ಇದರಿಂದ ಯಾವ ದೇಶಕ್ಕೂ, ಯಾವ ರಾಜ್ಯಕ್ಕೂ, ಯಾವುದೇ ಮನುಕುಲಕ್ಕೂ ನಷ್ಟವಿಲ್ಲ. ವಾಕ್ ಸ್ವಾತಂತ್ಯ್ರ- ಸ್ತ್ರೀ ಸ್ವಾತಂತ್ರ್ಯದ ಮತ್ತೊಂದು ಹೆಸರೇ ಹಿಂದೂ ಧರ್ಮ. ನಮಗಿರುವ ಫ್ರೀಡಂ ಯಾವ ಧರ್ಮದಲ್ಲಿದೆ ತೋರಿಸಿ? ಇಂತಹ ಧರ್ಮದಲ್ಲಿ ಹುಟ್ಟಿ, ಧರ್ಮದ ಸಿದ್ಧಾಂತಗಳನ್ನು ಅರ್ಥಮಾಡಿಕೊಂಡ ಯಾವುದೇ ಕುನ್ನಿಯೂ ಕೊಲೆಮಾಡಲಾರ.

ಹಾಗೆ ಮಾಡಿದ್ದೇ ಆದರೆ ಆತ ಹಿಂದೂ ಧರ್ಮಕ್ಕೆ ಹುಟ್ಟಿಲ್ಲ. ರಾಕ್ಷಸ ಧರ್ಮಕ್ಕೆ ಹುಟ್ಟಿದ್ದಾನೆ ಅಷ್ಟೆ! ನನ್ನನ್ನು ವಿಚಾರವಾದಿಯಾಗಲು ಸ್ವಾತಂತ್ರ್ಯಕೊಟ್ಟ ಹಿಂದೂ ಧರ್ಮದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಪಡುತ್ತಾ ಗೌರಿ ಲಂಕೇಶ್ ಕೊಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ.

ಎಂದು ಅಶೋಕ್ ಕಶ್ಯಪ್ ಪತ್ನಿ, ನಿರ್ಮಾಪಕಿ ರೇಖಾ ರಾಣಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

English summary
"Gauri Lankesh's murder, a wellknown Kannada writer and journalist has pulled democracy into darkness,"Kannada novelist, writer Kum Veerabhadrappa reacted. The journalist was killed in her residence in Rajarajeshwari Nagar, Bengaluru on September 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X