Google Pay user: ಗೂಗಲ್ ಪೇ ಯೂಸ್ ಮಾಡುವವರಿಗೆ ದಿಢೀರ್ ಶಾಕ್,ಏನದು ?
ಗೂಗಲ್ ಪೇ ತನ್ನ ಬಳಕೆದಾರರಿಗೆ ದಿಢೀರ್ ಶಾಕ್ ನೀಡಿದೆ. ಭಾರತದಲ್ಲಿ ಗೂಗಲ್ ಪೇಯನ್ನು ಕೋಟ್ಯಾಂತರ ಜನ ಬಳಸುತ್ತಾರೆ. ಈ ಬಾರಿ ದೀಪಾವಳಿ ಸಮಯದಲ್ಲಿ ಬಂಪರ್ ಕೊಡುಗೆಯನ್ನು ಕೊಟ್ಟಿದ್ದ ಗೂಗಲ್ ಪೇ ಏಕಾಏಕಿ ತನ್ನ ಗ್ರಾಹಕರಿಗೆ ದಿಢೀರ್ ಶಾಕ್ ಕೊಟ್ಟಿದೆ. ಈಗೆಲ್ಲ ಸಣ್ಣ ಸಣ್ಣ ಮೊತ್ತದ ಹಣ ವಹಿವಾಟಿಗೂ ಜನ ಗೂಗಲ್ ಪೇ ಯೂಸ್ ಮಾಡ್ತಾರೆ. ವಿಶ್ವಾಸಾರ್ಹ ಆ್ಯಪ್ ಗಳಲ್ಲಿ ಗೂಗಲ್ ಪೇ ಸಹ ಒಂದಾಗಿದೆ. ಆದರೆ, ಗೂಗಲ್ ಪೇ ಕೊಡುವಂತೆ ಕೊಟ್ಟು ಬಿಗ್ ಆಫರ್‌ವೊಂದನ್ನು ಕಿತ್ತುಕೊಂಡಿದೆ.
ದೀಪಾವಳಿ ಸಂಭ್ರಮಾಚರಣೆಯಲ್ಲಿ ಇದ್ದ ಭಾರತೀಯರಿಗೆ ಗೂಗಲ್ ಪೇ ವಿಶೇಷ ಬಂಪರ್ ಕೊಡುಗೆಯೊಂದನ್ನು ಕೊಟ್ಟಿತ್ತು. ಜನರಿಗೆ ಹಣ ಗೆಲ್ಲುವು ಗೂಗಲ್ ಪೇ ಟ್ವಿಂಕಲ್ ಲಡ್ಡು ಗೇಮ್‌ವೊಂದನ್ನು ಪರಿಚಯಿಸಿತ್ತು. ಇದರಲ್ಲಿ ಜನ ಪಾಲ್ಗೊಂಡು ವಹಿವಾಟುಗಳನ್ನು ಸಹ ನಡೆಸಿದ್ದರು. ಆದರೆ, ಜನ ಹಣ ವಹಿವಾಟು ನಡೆಸುತ್ತಿರುವಾಗಲೇ ಗೂಗಲ್ ಪೇ ಶಾಕ್ ಕೊಟ್ಟಿದೆ.

ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ಗೂಗಲ್ ಕೇಶ್‌ಬ್ಯಾಕ್ ಬಂಪರ್ ಗಿಫ್ಟ್ ಕೊಟ್ಟಿತ್ತು. ದೀಪಾವಳಿ ಹಾಗೂ ವರ್ಷಾಂತಕ್ಕೆ ಇನ್ನೆರಡು ತಿಂಗಳು ಬಾಕಿ ಇರುವಂತೆ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ವಿಶೇಷ ಲಡ್ಡು ಗಿಫ್ಟ್ ಕೊಟ್ಟಿತ್ತು. ಗೂಗಲ್ ಸಹ ಅದೇ ರೀತಿ ವಿಶೇಷ ಕೊಡುಗೆಯನ್ನು ಕೊಟ್ಟಿತ್ತು. ಗೂಗಲ್ ತನ್ನ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಗೆಲ್ಲುವ ಸುವರ್ಣ ಅವಕಾಶವನ್ನು ಕೊಡುವಂತೆ ಕೊಟ್ಟು ಕಸಿದುಕೊಂಡಿದೆ. ಗೂಗಲ್ ಪೇ ಈ ಕ್ಯಾಶ್‌ಬ್ಯಾಕ್ ಗಿಫ್ಟ್ ವಾಪಸ್ ಪಡೆದಿದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗೂಗಲ್ ಎಲ್ಲಾ ಗೂಗಲ್ ಪೇ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟಿತ್ತು. ಈ ಮೂಲಕ ಭರ್ಜರಿ ಕ್ಯಾಶ್ ಬ್ಯಾಕ್ ಪಡೆಯುವುದಕ್ಕೆ ಅವಕಾಶ ಇತ್ತು. Google Pay ಬಳಕೆದಾರರಿಗೆ ಬರೋಬ್ಬರಿ 1,001 ಕ್ಯಾಶ್‌ಬ್ಯಾಕ್ ಗೆಲ್ಲಲು ಅದ್ಭುತ ಅವಕಾಶವನ್ನು ಕೊಡುವಂಗೆ ಕೊಟ್ಟು ವಾಪಸ್ ತೆಗೆದುಕೊಂಡಿದೆ.

ಟ್ವಿಂಕಲ್ ಲಡ್ಡು ಆಫರ್ ನಿಲ್ಲಿಸಿದ ಗೂಗಲ್ ಪೇ
ಗೂಗಲ್ ಪೇ ಆರು ವಿವಿಧ ಲಡ್ಡು ಸಂಗ್ರಹಿಸುವ ಟ್ವಿಂಕಲ್ ಗೇಮ್ ಪರಿಚಯಿಸಿತ್ತು. ಆರು ಕಲರ್ ಲಡ್ಡುಗಳು ಕಲೆಕ್ಟ್ ಆದ ಮೇಲೆ Google Pay ಮೂಲಕ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಅಕ್ಟೋಬರ್ 21ರಲ್ಲಿ ಈ ಬಂಪರ್ ಆಫರ್ ಪರಿಚಯಿಸಿತ್ತು. ಅಲ್ಲದೇ ನವೆಂಬರ್ 7ರ ವರೆಗೆ ಅವಕಾಶ ನೀಡುವುದಾಗಿ ಹೇಳಿತ್ತು. ಆದರೆ, ಯಾವುದೇ ಸೂಚನೆ ನೋಡದೆ ನವೆಂಬರ್ 2ಕ್ಕೆ ಇದನ್ನು ಮುಕ್ತಾಯ ಮಾಡಿದೆ.
ಈ ಟ್ವಿಂಕಲ್ ಲಡ್ಡು ಆಫರ್ ಪಡೆಯುವುದಕ್ಕೆ ಕೆಲವು ವಹಿವಾಟುಗಳನ್ನು ನಡೆಸಬೇಕು ಎಂದು ಗೂಗಲ್ ಪೇ ಹೇಳಿತ್ತು. ಈ ಆಫರ್ ಅನ್ನು ನಂಬಿ ಜನ ವಹಿವಾಟು ಸಹ ನಡೆಸಿದ್ದರು. ಆದರೆ, ಗೂಗಲ್ ಪೇ ಇದೀಗ ಏಕಾಏಕಿ ಈ ಆಫರ್ ಅನ್ನು ನಿಲ್ಲಿಸಿದೆ.
ವಿವಿಧ ವಹಿವಾಟುಗಳನ್ನು ನಡೆಸಿದರೆ ಒಂದೊಂದು ಲಡ್ಡು ಸಿಗಲಿದೆ. ಆರು ಲಡ್ಡು ಸಿಕ್ಕರೆ 1001 ರೂಪಾಯಿ ಕ್ಯಾಶ್‌ಬ್ಯಾಕ್ ಸಿಗಲಿದೆ ಎಂದು ಹೇಳಿತ್ತು. ಈಗ ನವೆಂಬರ್ 7ಕ್ಕೆ ಮುಗಿಯಬೇಕಾದ ಪ್ಲಾನ್ ಅನ್ನು 2ಕ್ಕೆ ಮುಗಿಸಿದೆ. ಅಲ್ಲದೇ ಈ ಪ್ಲಾನ್ ನಿಲ್ಲಿಸುವ ಬಗ್ಗೆ ಯಾವುದೇ ಮೆಸೇಜ್ ಕೊಟ್ಟಿಲ್ಲ.












Click it and Unblock the Notifications