ಗೂಗಲ್ ದಿ ಗ್ರೇಟ್... 27ನೇ ಹುಟ್ಟುಹಬ್ಬ ಆಚರಿಸಿಕೊಂಡ ಟೆಕ್ ದೈತ್ಯ ಗೂಗಲ್ ಸಂಸ್ಥೆ... Google Birthday
ಗೂಗಲ್ ಅಂದ್ರೆ ಟೆಕ್ನಾಲಜಿ... ಗೂಗಲ್ ಅಂದ್ರೆ ಎಲ್ಲರಿಗೂ ಗುರು... ಗೂಗಲ್ ಅಂದ್ರೆ ಎಲ್ಲದಕ್ಕೂ ಉತ್ತರ ಕೊಡೋ ವಿಸ್ಮಯ... ಹೀಗೆ ಗೂಗಲ್ ಬಗ್ಗೆ ಎಷ್ಟು ಹೇಳಿದರೂ ಸಾಲುವುದಿಲ್ಲ ಬಿಡಿ. ಯಾಕೆ ಅಂದ್ರೆ ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಗೂಗಲ್ ಸಂಸ್ಥೆ ದೊಡ್ಡ ಹೆಸರು ಸಂಪಾದನೆ ಮಾಡಿದೆ. ಅಲ್ಲದೆ ಗೂಗಲ್ ಇಲ್ಲದೆ ಆಧುನಿಕ ಜಗತ್ತೇ ಇಲ್ಲ ಎನ್ನುವಷ್ಟು ಬಂಧನ ಏರ್ಪಟ್ಟಿದೆ. ಈ ರೀತಿ ಎಲ್ಲರ ನಡುವೆ ಬೆಸುಗೆ ಹಾಕುತ್ತಿರುವ ಗೂಗಲ್ ಸಂಸ್ಥೆಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಮನುಷ್ಯರು ಜಗತ್ತಿನಲ್ಲಿ ಈಗ ನೆಮ್ಮದಿಯಾಗಿ ಜೀವನ ನಡೆಸಲು ಗೂಗಲ್ ಕೂಡ ಒಂದು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಗೂಗಲ್ ಅಷ್ಟು ಆಳವಾಗಿ ಮನುಷ್ಯರ ಬದುಕಿನಲ್ಲಿ ಬೆಸೆದು ಹೋಗಿದೆ. ಮಂಡ್ಯ ಟು ಇಂಡಿಯಾ ಯಾರಿಗೆ ಏನೇ ಪ್ರಶ್ನೆ ಕಾಡುತ್ತಿದ್ದರೂ ಮೊದಲು ಅವರು ಮೊರೆ ಹೋಗುವುದು ಗೂಗಲ್ ಬಳಿ. ಪ್ರಪಂಚದ ಮೂಲೆ ಮೂಲೆಯಲ್ಲೂ ಎಲ್ಲಾ ದೇಶಗಳಲ್ಲೂ ಇದೇ ಗೂಗಲ್ ಮೂಲಕ ಜನರು ಉತ್ತರ ಕಂಡುಕೊಳ್ಳುತ್ತಾರೆ. ಆಧುನಿಕ ಕಾಲದಲ್ಲಿ ನೂರಾರು ಕೋಟಿ ಜನರ ಪಾಲಿಗೆ ಗುರು ಆಗಿರುವ ಗೂಗಲ್ ಸರ್ಚ್, ಇದೀಗ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಹೀಗಿದ್ದಾಗಲೇ ಗೂಗಲ್ ಸಂಸ್ಥೆಗೆ ಸಂಭ್ರಮದ ಸಮಯ ಬಂದಿದೆ...

1998ರ ಸಮಯದಲ್ಲಿ ಗೂಗಲ್ ಶುರು
ಹೌದು, ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಎಂಬುವವರು ಸ್ಥಾಪಿಸಿದ 'ಬ್ಯಾಕ್‌ರಬ್' ಎಂಬ ಸಂಸ್ಥೆಯೇ ಮುಂದೆ ಗೂಗಲ್ ಎಂಬ ದೈತ್ಯ ಸರ್ಚ್ ಇಂಜಿನ್ ಆಗಿ ಬೆಳೆದು ನಿಂತಿತು. 1996ರ ಸಮಯದಲ್ಲಿ ಈ 'ಬ್ಯಾಕ್‌ರಬ್' ಸಂಸ್ಥೆಯನ್ನ ಸ್ಥಾಪನೆ ಮಾಡಿದ್ದರು ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್. ಅಮೆರಿಕದಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಈ ಸಾಧನೆಯನ್ನ ಮಾಡಿದ್ದರು. ಆ ನಂತರ 1998ರ ಸಮಯದಲ್ಲಿ 1 ಲಕ್ಷ ಡಾಲರ್ ಹೂಡಿಕೆಯೊಂದಿಗೆ ಮಹತ್ವದ ಸಂಸ್ಥೆ ಗೂಗಲ್ ಕಾರ್ಯಾರಂಭ ಮಾಡಿತ್ತು. ಹೀಗೆ ಶುರುವಾದ ಸಂಸ್ಥೆ 27ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಜಗತ್ತಿನ ಮೂಲೆ ಮೂಲೆಯಲ್ಲೂ ಗೂಗಲ್ ದಿ ಗ್ರೇಟ್ ಅಂತಿದ್ದಾರೆ ಜನ.
ಗೂಗಲ್ ದಿ ಗ್ರೇಟ್...
ಒಟ್ನಲ್ಲಿ ಗೂಗಲ್ ಸಂಸ್ಥೆ ದೊಡ್ಡ ಸಾಧನೆ ಮಾಡಿದ್ದು, ಮನುಷ್ಯರ ಉತ್ತಮ ಭವಿಷ್ಯಕ್ಕಾಗಿ ದೊಡ್ಡ ದೊಡ್ಡ ತಂತ್ರಜ್ಞಾನವನ್ನು ಒದಗಿಸುತ್ತಿದೆ. ಹೀಗಾಗಿ ಮನುಷ್ಯರು ಕೂಡ ಗೂಗಲ್ ನಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಗೇ ವಿದ್ಯಾರ್ಥಿಗಳಿಂದ ಹಿಡಿದು ಸಿಬ್ಬಂದಿಯ ತನಕ ಪ್ರತಿಯೊಬ್ಬರಿಗೂ ಇದೇ ಗೂಗಲ್ ನೆರವಾಗಿ ನಿಂತಿದ್ದು, ಪ್ರತಿದಿನವೂ ಹೊಸ ಹೊಸ ವಿಚಾರಗಳನ್ನು ಮನುಷ್ಯರ ಮುಂದಿಟ್ಟು ಗಮನ ಸೆಳೆಯುತ್ತಿದೆ. ಅಲ್ಲದೆ ಗೂಗಲ್ ದಿ ಗ್ರೇಟ್... ಅಂತಾ ಜನರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications