Government Employees: ರಾಜ್ಯ ಸರ್ಕಾರಿ ನೌಕರರಿಗೆ ಸಾಲಸೌಲಭ್ಯದ ಬಗ್ಗೆ ಶುಭ ಸುದ್ದಿ
Government Employees: ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಶುಭ ಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಕಡಿಮೆ ಬಡ್ಡಿ ದರದ ವಿಚಾರವಾಗಿ ಬಿಗ್ ಗುಡ್ ನ್ಯೂಸ್‌ವೊಂದನ್ನು ನೀಡಿದೆ. ಹಾಗಾದ್ರೆ ಅದೇನು ಹಾಗೂ ಏನೆಲ್ಲಾ ಅನುಕೂಲಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ರೈತರಿಗೆ ಕಡಿಮೆ ಬಡ್ಡಿದರ, ಬಡ್ಡಿರಹಿತ ಸಾಲವನ್ನು ಸರ್ಕಾರದಿಂದ ನೀಡಲಾಗುತ್ತದೆ. ಹಾಗೆಯೇ ಸರ್ಕಾರಿ ನೌಕರಿಗೂ ಸಾಲ ನೀಡುವ ಬಗ್ಗೆ ಸರ್ಕಾರ ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದೆ.

ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ನೀಡಲು ನಿರ್ಧರಿಸಿದೆ. ಅದೇ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆಯಡಿ ಬ್ಯಾಂಕುಗಳು ಕೊಡುತ್ತಿರುವ ಸೌಲಭ್ಯಗಳ ಜೊತೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ, ವೈಯಕ್ತಿಕ ಸಾಲ ಸೌಲಭ್ಯ ಕುರಿತು ಏಪ್ರಿಲ್ 15ರಂದು ಬ್ಯಾಂಕ್ ಅಧಿಕಾರಿಗಳ ಜೊತೆಗೆ ಸಭೆ ಕರೆಯಲಾಗಿದೆ.
ಇನ್ನು ಈ ಕುರಿತು ರಾಜ್ಯ ಸರ್ಕಾರದಿಂದ ಸಭಾ ಸೂಚನಾ ಪತ್ರವನ್ನು ಹೊರಡಿಸಲಾಗಿದೆ. ರಾಜ್ಯ ಸಚಿವ ಸಂಪುಟದ ತೀರ್ಮಾಮ ಮಾಡಿದಂತೆ ಅಧಿಕಾರಿ, ನೌಕರರು ಮತ್ತು ಅವಲಂಬಿತ ಕುಟುಂಬದ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಮದ ವಿವಿಧ ಬ್ಯಾಂಕುಗಳು ಒದಗಿಸುವ ವಿಶಿಷ್ಟ ಸೌಲಭ್ಯಗಳನ್ನು ಪಡೆಯಲು ಉಪಯೋಗ ಆಗುವಂತೆ ವೇತನ ಪ್ಯಾಕೇಜ್‌ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ರಾಜ್ಯ ಸರ್ಕಾರವು ಕಡ್ಡಾಯಗೊಳಿಸಿದೆ ಎಂದು ತಿಳಿಸಿದೆ.
ಸದರಿ ಯೋಜನೆಯಡಿ ಸರ್ಕಾರದ ಎಲ್ಲಾ ಅಧಿಕಾರಿಗಳು/ನೌಕರರು ಬ್ಯಾಂಕುಗಳು ಕೊಡುತ್ತಿರುವ ಸಂಬಳ ಪ್ಯಾಕೇಜು ಖಾತೆಯಾಗಿ ಪರಿವರ್ತಿಸಿಕೊಳ್ಳಲು ಬ್ಯಾಂಕುಗಳು ಅನುಕೂಲ ಮಾಡಿಕೊಡಬೇಕಾಗಿದ್ದು, ಈ ವಿಚಾರದಲ್ಲಿ ಸಮಸ್ಯೆಗಳು ಇದ್ದರೆ ಅವುಗಳನ್ನು ನಿವಾರಿಸುವುದು ಅವಶ್ಯಕ ಆಗಿರುತ್ತದೆ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಪರವಾಗಿ ಬ್ಯಾಂಕುಗಳು ಸಂಬಳ ಪ್ಯಾಕೇಜು ಖಾತೆಯಾಗಿ ಪರಿವರ್ತನೆ ಮಾಡಿಕೊಳ್ಳುವ ಅಧಿಕಾರಿ/ನೌಕರರಿಗೆ, ರಾಷ್ಟ್ರೀಕೃತ ಬ್ಯಾಂಕುಗಳು, ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಖರೀದಿ ಸಾಲಗಳನ್ನು ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಬಗ್ಗೆ ಮನವಿ ಮಾಡಿದ್ದಾರೆ ಎಂಬುದಾಗಿ ತಿಳಿಸಿದೆ.
ಆದ್ದರಿಂದ ಮೇಲಿನ ವಿಷಯಗಳನ್ನು ಚರ್ಚಿಸಲು ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸರ್ಕಾರದ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ 2025 ಏಪ್ರಿಲ್ 15ರಂದು ಸಂಜೆ 4 ಗಂಟೆಗೆ, ಕೊಠಡಿ ಸಂಖ್ಯೆ: 701, 7ನೇ ಮಹಡಿ, ಬಹುಮಹಡಿ ಕಟ್ಟಡ, ಬೆಂಗಳೂರು ಇಲ್ಲಿ ಸಭೆಯನ್ನು ನಡೆಸಲು ತೀರ್ಮಾನ ಮಾಡಲಾಗಿದೆ. ಅಲ್ಲದೆ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ತಪ್ಪದೇ ಹಾಜರಾಗಬೇಕೆಂದು ಮನವಿ ಮಾಡಿದೆ.
ಕಾರ್ಮಿಕರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರವು ಕೌಶಲಯುಕ್ತ ಮತ್ತು ಕೌಶಲ್ಯ ರಹಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಲು ಮುಂದಾಗಿದೆ. ಶೀಘ್ರದಲ್ಲೆ ಈ ಬಗ್ಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ. ಒಂದು ವೇಳೆ, ಕರಡು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದಷ್ಟೇ ಪ್ರಮಾಣದಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಿದರೆ, ಕಾರ್ಮಿಕರಿಗೆ ದೇಶದಲ್ಲಿಯೇ ಅತಿ ಹೆಚ್ಚು ಕನಿಷ್ಠ ವೇತನ ನೀಡುವ ರಾಜ್ಯ ಎಂಬ ಕೀರ್ತಿಗೆ ಪಾತ್ರ ಆಗಲಿದೆ.
ಒಟ್ಟು 82 ವಿವಿಧ ಕೆಲಸಗಳಿಗೆ ಕಾರ್ಮಿಕರ ಕನಿಷ್ಠ ವೇತನ ಅನ್ವಯ ಆಗಲಿದೆ. ಈ ಬಗ್ಗೆ 2022ರಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಕರಡು ಅಧಿಸೂಚನೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಲಾಗುವುದು. ಮಂಡಳಿಯು ಅನುಮೋದನೆ ನೀಡಿದರೆ, ಶೀಘ್ರದಲ್ಲೇ ಸರ್ಕಾರ ಅಧಿವೇಶನ ಹೊರಡಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications