ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ
ಸರ್ಕಾರಿ ನೌಕರರಿಗೆ ಹೊಸ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಶುಭ ಸುದ್ದಿಯನ್ನು ಅಪ್ಡೇಟ್ಸ್‌ಗಳನ್ನು ನೀಡುತ್ತಲಿರುತ್ತದೆ. ಹಾಗೆಯೇ ಇದೀಗ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ಇಲ್ಲದೆ ನೋಡಿ ಮಾಹಿತಿ.
ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಏಜೆನ್ಸಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು, ಅಭಿಪ್ರಾಯ/ಸಲಹೆಗಳನ್ನು ಕೋರಲಾಗಿದೆ. ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದಲ್ಲಿ ಕಾರ್ಯನಿವರ್ಹಿಸುತ್ತಿರುವ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳು/ಶೋಷಣೆಯಿಂದ ರಕ್ಷಿಸುವ ಕುರಿತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

2025-26ನೇ ಸಾಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ Consumer Price Index ಆಧಾರದ ಮೇಲೆ ವೇತನ ನಿಗದಿಪಡಿಸುತ್ತಿದೆ. ಸದರಿ Consumer Price Index Numbers for Industrial workers ವಿವರ ಈ ಕೆಳಗೆ ನೀಡಲಾಗಿದೆ.
2018ರ Consumer price index ಆಧಾರದ ಮೇಲೆ 2025-26ನೇ ಸಾಲಿನ ವೇತನವನ್ನು ನಿಗದಿಪಡಿಸಿರುವ ಕಾರ್ಮಿಕ ಇಲಾಖೆಯ ದರಗಳಂತೆ ಸಿಬ್ಬಂದಿಗೆ ವೇತನ ಪಾವತಿಸಲು ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದ್ದರಿಂದ ದರಗಳಂತೆ ಟೆಂಡರ್ ಕರೆಯಲು 2 ಅಥವಾ 3 ಮಾಹೆಗಳ ಕಾಲಾವಕಾಶ ತೆಗೆದುಕೊಳ್ಳುವುದರಿಂದ, ಕಾಲಕಾಲಕ್ಕೆ ಸಿಬ್ಬಂದಿಗಳಿಗೆ ವೇತನ ಪಾವತಿಯಾಗುತ್ತಿಲ್ಲ ಹಾಗೂ ಸದರಿ ಅವಧಿಯಲ್ಲಿ ಸಿಬ್ಬಂದಿ PF, EST ಸರಿಯಾಗಿ ಜಮೆಯಾಗುತ್ತಿಲ್ಲ.
230320180 Consumer price index espades 2025ನೇ ಸಾಲಿನ ವೇತನವನ್ನು ನಿಗದಿಪಡಿಸಲಾಗಿದೆ. ಆದ್ದರಿಂದ ಸಿಬ್ಬಂದಿಗಳ ಜೀವನ ಮಟ್ಟ ಕುಸಿದಿದ್ದು, ಜೀವನಾವಶ್ಯಕ ವಸ್ತಗಳ ಬೆಲೆಗಳು ಗಗನಮುಖಿಯಾಗಿರುತ್ತದೆ. ಈ ಹಿನ್ನೆಲೆ ವಸ್ತು ಬೆಲೆಗಳನ್ನಾಧರಿಸಿ, ಸಿಬ್ಬಂದಿಗೆ ಕನಿಷ್ಟ ಮಾಸಿಕ 25,000 ರೂಪಾಯಿಗಳನ್ನು ನಿಗದಿಪಡಿಸಬೇಕಾಗಿರುತ್ತದೆ.
ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಇದ್ದು, ಸದರಿ ಸಿಬ್ಬಂದಿಗಳಿಗೂ ಪ್ರಸ್ತುತ ಕೆಲಸಕ್ಕೆ ಸೇರಿದ ಸಿಬ್ಬಂದಿಗೂ ಒಂದೇ ಸಮಾನ ವೇತನ ಪಾವತಿಸುವುದರ ಬದಲಾಗಿ ಸಿಬ್ಬಂದಿಗಳ ಸೇವಾವಧಿಯನ್ನಾಧರಿಸುವುದು ನ್ಯಾಯ ಸಮ್ಮತ ಆಗುತ್ತದೆ.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ, ಪದವಿ/ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿರುವ ವಿದ್ಯಾರ್ಥಿಗಳು/ಪದವಿಧರರು ಜೀವನ ನಿರ್ವಹಣೆಗಾಗಿ ಲಭ್ಯವಾಗುವ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರ ಜವಾಬ್ದಾರಿಯುತ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ, ಕನಿಷ್ಠ ಗ್ರೂಪ್ ಸಿ ಹುದ್ದೆಗೆ ನೀಡುವ ವೇತನದಂತೆ ಕೆಲವು ಸೌಲಭ್ಯಗಳನ್ನು ನೀಡಿ ಸೂಕ್ತ ಆದೇಶ ಹೊರಡಿಸಿ. ಇದರಿಂದ ಸಿಬ್ಬಂದಿಗಳು ಕೃತಜ್ಞತಾ ಭಾವದಿಂದ ಕಾರ್ಯನಿರ್ವಹಿಸುತ್ತಾರೆ ಎಂಬ ಸಲಹೆ ನೀಡಲಾಗಿದೆ.












Click it and Unblock the Notifications