BPL, APL ಕುಟುಂಬಗಳಿಗೆ ಗುಡ್‌ ನ್ಯೂಸ್‌, ಏನದು?-ಇಲ್ಲಿದೆ ವಿವರ

ಬೆಂಗಳೂರು, ಡಿಸೆಂಬರ್‌, 07: ರಾಜ್ಯ ಸರ್ಕಾರ ಬಿಪಿಎಲ್‌, ಎಪಿಎಲ್‌ ಕಾರ್ಡುದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಆ ಸಿಹಿಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್‌ ವಿತರಣೆಗೆ ಚಾಲನೆ ನೀಡಿದ್ದಾರೆ. ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಆರೋಗ್ಯ ಇಲಾಖೆ ಹೊಸ ರೂಪ ನೀಡಿದ್ದು, ಮರುನಾಮಕರಣಗೊಂಡ ನವೀಕೃತ ಆರೋಗ್ಯ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದರು.

Good news for BPL, APL families, know details

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳನ್ನು, ಆಯುಷ್ಮಾನ್‌ ಭಾರತ್-ಪ್ರಧಾನ ಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಎಂದು ಹೆಸರಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಕಾರ್ಡ್‌ನಲ್ಲಿ ಕೆಲ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.

ರಾಜ್ಯದ 5.9 ಕೋಟಿ ಜನರಿಗೆ ಹೆಲ್ತ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ.‌ ಈ ಹೊಸ ಕಾರ್ಡ್‌ಗಳನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು (ಡಿಸೆಂಬರ್‌ 07) ಚಾಲನೆ ನೀಡಿದ್ದಾರೆ.‌ ಇದು ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಚಿಕಿತ್ಸೆಗಳನ್ನು ಒದಗಿಸಬೇಕೆಂಬ ನಮ್ಮ ಸರ್ಕಾರದ ಆದ್ಯತೆಗಳಲ್ಲೊಂದಾಗಿದೆ ಎಂದರು.

BPL, APL ಕಾರ್ಡುದಾರರು ಗಮನಿಸಬೇಕದ ಅಂಶಗಳು

1. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್‌ಗೆ ನೂತನ ಹೆಲ್ತ್ ಕಾರ್ಡ್‌ಗಳನ್ನು ಸಂಯೋಜನೆಗೊಳಿಸಲಾಗಿದ್ದು, ರಾಜ್ಯದ ಬಿಪಿಎಲ್ ಕಾರ್ಡುದಾರರು ದೇಶದ ಇತರೆ ರಾಜ್ಯಗಳಲ್ಲಿ ಹೆಲ್ತ್ ಕಾರ್ಡ್‌ನಡಿ ಚಿಕಿತ್ಸೆ ಪಡೆಯಬಹುದಾಗಿದೆ.

2. ರಾಜ್ಯದಲ್ಲಿರುವ ಒಟ್ಟು 5.09 ಕೋಟಿ ಫಲಾನುಭವಿಗಳಿಗೆ ಮುಂದಿನ 6 ತಿಂಗಳ ಒಳಗಾಗಿ ಆಯುಷ್ಮಾನ್‌ ಭಾರತ್ -ಪ್ರಧಾನ ಮಂತ್ರಿ ಜನಾರೋಗ್ಯ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್‌ ಸೃಜನೆ ಮತ್ತು ವಿತರಣಾ ಗುರಿಯನ್ನು ಹೊಂದಲಾಗಿದೆ.

3. ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು ಶೇಕಡಾ 66ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡುತ್ತಿದೆ.

4. ಯೋಜನೆಯಡಿಯಲ್ಲಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಬಡ ಕುಟುಂಬಗಳು ವಾರ್ಷಿಕ 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಕುಟುಂಬದ ಒಬ್ಬರು ಅಥವಾ ಹಲವರು ಕುಟುಂಬಗಳ ಸದಸ್ಯರ ಆಧಾರದ ಮೇಲೆ ಬಳಸಿಕೊಳ್ಳಬಹುದು.‌

5. ಎಪಿಎಲ್‌ ಕುಟುಂಬದವರಿಗೂ ಸಹ ಯೋಜನೆಯಲ್ಲಿ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಈ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ 5 ಲಕ್ಷದ ಮೌಲ್ಯದ ಚಿಕಿತ್ಸೆಯಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿ ವೆಚ್ಚವನ್ನ ರಾಜ್ಯ ಸರ್ಕಾರ ಪಾವತಿಸಲಿದೆ. ಎಪಿಎಲ್ ಕಾರ್ಡುದಾರರು ಶೇಕಡಾ 70ರಷ್ಟು ಚಿಕಿತ್ಸಾ ವೆಚ್ಚವನ್ನ ಪಾವತಿಸಿದರೆ, ಶೇಕಡಾ 30ರಷ್ಟು ವೆಚ್ಚವನ್ನ ಕೇಂದ್ರೆ ಸರ್ಕಾರ ಭರಿಸಲಿದೆ ಎಂದರು.

6. ಪ್ರಸ್ತುತ ರಾಜ್ಯದಲ್ಲಿ 3,450ಕ್ಕೂ ಹೆಚ್ಚಿನ ಆರೋಗ್ಯ ಸಂಸ್ಥೆಗಳು "ಆಯುಷ್ಮಾನ್‌ ಭಾರತ್- ಪ್ರಧಾನ ಮಂತ್ರಿ ಜನಾರೋಗ್ಯ - ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ" ಯೋಜನೆಯಲ್ಲಿ ಸೇವೆ ನೀಡಲು ನೊಂದಾಯಿಸಿಕೊಂಡಿರುತ್ತಾರೆ.

7. ಸುಮಾರು 1,650 ಚಿಕಿತ್ಸಾ ಪ್ಯಾಕೇಜ್‌ಗಳು ರಾಜ್ಯದ ಎಲ್ಲಾ ಸಾರ್ವಜಜಿಕ ಆಸ್ಪತ್ರೆ ಮತ್ತು 540 ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ಹಾಗೂ 171 ಅತ್ಯಂತ ತುರ್ತು ಚಿಕಿತ್ಸೆಯ ಮತ್ತು ಜೀವ ಉಳಿಸುವ ಪ್ಯಾಕೇಜ್‌ಗಳನ್ನು ಒಳಗೊಂಡಿದೆ.

8. ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್‌ ಕುಟುಂಬಗಳಿದ್ದು, ಇದರಲ್ಲಿ 69 ಲಕ್ಷ SECC 2011 ಸಮೀಕ್ಷೆಯಂತೆ ಬಡತನ ರೇಖೆಗಿಂತ ಕೆಳಗಿವೆ. ಕೇಂದ್ರ ಸರ್ಕಾರ ಈ ಕುಟುಂಬಗಳಿಗೆ 60:40 ಅನುಪಾತದಲ್ಲಿ ಅನುದಾನ ಒದಗಿಸುತ್ತಿದೆ. ರಾಜ್ಯ ಸರ್ಕಾರವು ಉಳಿದ 46 ಲಕ್ಷ ಬಿಪಿಎಲ್‌ ಹಾಗೂ 19 ಲಕ್ಷ ಎಪಿಲ್‌ ಕುಟುಂಬಗಳಿಗೆ ಶೇಕಡಾ 100ರಷ್ಟು ಅನುದಾನ ಒದಗಿಸುತ್ತಿದೆ.

9. ಆಯುಷ್ಮಾನ್‌ ಭಾರತ್‌ - ಪ್ರಧಾನ ಮಂತ್ರಿ ಜನಾರೋಗ್ಯ ಯೋಜನಾ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ Co-branded ಗುರುತಿನ ಚೀಟಿಗಳಾಗಿದ್ದು, Co-branded ಗುರುತಿನ ಚೀಟಿಗಳನ್ನು ಉಚಿತವಾಗಿ ನೀಡಲಾಗುವುದು.‌

10. ಈ ಗುರುತಿನ ಚೀಟಿಗಳನ್ನು ರಾಷ್ಟ್ರೀಯ ಆರೋಗ್ಯ ID (ABHA ID)ಯೊಂದಿಗೆ ಜೋಡಿಸಲಾಗಿರುತ್ತದೆ. ಇದರಿಂದ ಫಲಾನುಭವಿಗಳ ವ್ಯೆದ್ಯಕೀಯ ದಾಖಲೆಗಳನ್ನು ಸಂರಕ್ಷಿಸಿ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗುತ್ತದೆ.

11. ಪಡಿತರ ಚೀಟಿಯೊಂದಿಗೆ ಜೋಡಿಸಲಾದ ಮೂಲ ಆಧಾರ್‌ ಗುರುತಿನ ಚೀಟಿಯ ಸಹಾಯದಿಂದ ಹತ್ತಿರದ ಗ್ರಾಮ-1 ಕೇಂದ್ರಗಳು ಅಥವಾ ನಾಗರೀಕ ಸೇವಾ "ಆಯುಷ್ಮಾನ್‌ ಭಾರತ್ -ಪ್ರಧಾನ ಮಂತ್ರಿ ಜನಾರೋಗ್ಯ -ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ" ಗುರುತಿನ ಚೀಟಿಗಳನ್ನು ಸುಲಭವಾಗಿ ನೊಂದಾಯಿಸಿ ಪಡೆಯಬಹುದಾಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+