ಗಿಗ್ ಕಾರ್ಮಿಕರ ನೆರವಿಗೆ ಕಾನೂನು ರೂಪಿಸಲಿದೆ ಕರ್ನಾಟಕ ಸರ್ಕಾರ

ಬೆಂಗಳೂರು, ಜೂನ್ 30: ಕರ್ನಾಟಕ ಸರ್ಕಾರ ಗಿಗ್ ಕಾರ್ಮಿಕರಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಿತ್ತು. ಈಗ ಅವರ ಭದ್ರತೆಗಾಗಿ ಹೊಸ ಮಸೂದೆ ಮಂಡಿಸಲು ತಯಾರಿ ನಡೆಸಿದೆ. ಕರಡು ಪ್ರತಿ ಸಿದ್ಧವಾಗಿದ್ದು, ಮುಂಗಾರು ಅಧಿವೇಶನದಲ್ಲಿಯೇ ಮಂಡನೆಯಾಗುವ ನಿರೀಕ್ಷೆ ಇದೆ.

ಕರ್ನಾಟಕ ಗಿಗ್ ವರ್ಕರ್ಸ್ (ಸೇವಾ ಮತ್ತು ಕಲ್ಯಾಣ ನಿಯಮಗಳು) ಮಸೂದೆ, 2024 ಅನ್ನು ಕರ್ನಾಟಕ ಸರ್ಕಾರ ಜಾರಿಗೆ ತರಲಿದೆ. ಇದರಿಂದಾಗಿ ಡೆಲಿವರಿ ವೃತಿಯಲ್ಲಿ ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರಿಗೆ ಅನುಕೂಲವಾಗಲಿದೆ.

Gig Workers Safeguard Karnataka Governement To Come Up With Law

ಈ ಕರಡು ಮಸೂದೆಯ ಅನ್ವಯ ಡೆಲಿವರಿ ಬಾಯ್‌ಗಳನ್ನು ನೇಮಕ ಮಾಡಿಕೊಳ್ಳುವ ಕಂಪನಿಗಳು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಕೆಲಸದ ಸಂದರ್ಭದಲ್ಲಿ ಡೆಲಿವರಿ ಬಾಯ್‌ಗಳು ರಸ್ತೆ ಅಪಘಾತದಲ್ಲಿ ಗಾಯಗೊಂಡರೆ, ಮೃತಪಟ್ಟರೆ ಪರಿಹಾರ ನೀಡಲು ಇದು ಸಹಾಯಕವಾಗಲಿದೆ.

ಡೆಲಿವರಿ ವೃತಿಯಲ್ಲಿ ತೊಡಗಿರುವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಈ ಮಸೂದೆ ನೆರವಾಗಲಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಎಲ್ಲಾ ಆನ್‌ಲೈನ್ ಡೆಲಿವರಿ ಕಂಪನಿಗಳು ಈ ಮಸೂದೆ ಅಡಿ ನೋಂದಣಿ ಮಾಡಿಕೊಳ್ಳಬೇಕು.

ಎಷ್ಟು ಗಿಗ್ ಕಾರ್ಮಿಕರು?: ಕರ್ನಾಟಕ ಸರ್ಕಾರ ನೀತಿ ಆಯೋಗಕ್ಕೆ ಸಲ್ಲಿಕೆ ಮಾಡಿರುವ ವರದಿ ಅನ್ವಯ ರಾಜ್ಯದಲ್ಲಿ 2.33 ಲಕ್ಷಕ್ಕೂ ಅಧಿಕ ಗಿಗ್ ಕಾರ್ಮಿಕರು ಇದ್ದಾರೆ. ಇವರಲ್ಲಿ ಅತಿ ಹೆಚ್ಚು ಕಾರ್ಮಿಕರು ಬೆಂಗಳೂರು ನಗರದಲ್ಲಿದ್ದಾರೆ.

ಮಸೂದೆಯ ಪ್ರಕಾರ ಕಂಪನಿಗಳು ಕಾರ್ಮಿಕ ಇಲಾಖೆಗೆ ಗಿಗ್ ಕಾರ್ಮಿಕರು ಸುರಕ್ಷತೆ ಬಗ್ಗೆ ಮಾರ್ಗಸೂಚಿಗಳನ್ನು ನೀಡಬೇಕು, ಅವರಿಂದ ಶುಲ್ಕ ಸಂಗ್ರಹ ಮಾಡಿ ಒಪ್ಪಂದ ಮಾಡಿಕೊಳ್ಳುವುದನ್ನು ಸಹ ಕಡ್ಡಾಯಗೊಳಿಸಲಾಗುತ್ತದೆ. ಅವರ ವಿರುದ್ಧ ಬರುವ ದೂರುಗಳನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲು ಸಹ ಸೂಚಿಸುತ್ತದೆ.

ಗಿಗ್ ಕಾರ್ಮಿಕರ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಮಸೂದೆಯಲ್ಲಿ ಹಲವಾರು ಅಂಶಗಳನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಲಿದೆ. ಈ ಮೂಲಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಸ್ಪಷ್ಟವಾದ ನಿಯಮವನ್ನು ರೂಪಿಸಲಿದೆ.

2023ರಲ್ಲಿ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಕಾನೂನು ರೂಪಿಸಿತ್ತು. ಈ ಮಾದರಿ ಕಾನೂನು ರೂಪಿಸಿದ ದೇಶದ ಮೊದಲ ರಾಜ್ಯ ರಾಜಸ್ಥಾನ. ಈಗ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಇಂತಹ ಹೆಜ್ಜೆ ಇಟ್ಟಿದೆ.

ಇಷ್ಟು ದಿನ ಅಗ್ರಿಗೇಟರ್‌ಗಳು ಗಿಗ್ ಕಾರ್ಮಿಕರನ್ನು ನೇಮಕಾತಿ ಮಾಡುವ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನೋಂದಣಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಕಾರ್ಮಿಕ ಇಲಾಖೆಯ ಮಾಹಿತಿ ಪ್ರಕಾರ ಓಲಾ, ಊಬರ್, ಅಮೆಝಾನ್, ಫ್ಲಿಕ್ ಕಾರ್ಟ್, ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ 20 ಅಗ್ರಿಗೇಟರ್‌ಗಳ ಜೊತೆ ಇಲಾಖೆ ಸಭೆಯನ್ನು ನಡೆಸಿದೆ. ಸರ್ಕಾರ ಮುಂದಿಟ್ಟ ಪ್ರಸ್ತಾವನೆಗೆ ಅವರು ಸಹ ಒಪ್ಪಿಗೆ ನೀಡಿದ್ದು, ಬಳಿಕ ಕರಡು ಮಸೂದೆ ರಚಿಸಲಾಗುತ್ತಿದೆ.

ಕೆಲವೇ ದಿನಗಳಲ್ಲಿ ಈ ಮಸೂದೆಯ ಪ್ರಮುಖ ಅಂಶಗಳನ್ನು ಕಂಪನಿಗಳ ಮುಂದಿಟ್ಟು ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಬಳಿಕ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ. ಜುಲೈನಲ್ಲಿ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಲಿದೆ. ಆಗ ಮಸೂದೆ ಮಂಡಿಸುವ ನಿರೀಕ್ಷೆ ಇದೆ.

ಕರ್ನಾಟಕ ಸರ್ಕಾರ ಈಗಾಗಲೇ 'ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ' ಮೂಲಕ ಅಸಂಘಟಿತ ಕಾರ್ಮಿಕರ ನೆರವಿಗೆ ಧಾವಿಸಿದೆ. ಪೂರ್ಣಕಾಲಿಕ ಹಾಗೂ ಅರೆಕಾಲಿಕ ಡೆಲಿವರಿ ನೌಕರರು ಈ ಯೋಜನೆಯ ಲಾಭ ಪಡೆಯಬಹುದು. ಆದರೆ ಈ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗದ ಕಾರಣ ಅಪಘಾತ, ಮರಣ ಸಂದರ್ಭದಲ್ಲಿ ಹೆಚ್ಚಿನ ಪರಿಹಾರವನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+