ತೊಗಾಡಿಯಾಗೆ ರಾಜ್ಯ ಪ್ರವೇಶ ನಿಷಿದ್ಧ: ಜಾರ್ಜ್

ಬೆಂಗಳೂರು, ಮಾ. 10: ಪ್ರವೀಣ್‌ಬಾಯ್ ತೊಗಾಡಿಯಾ ಅವರಿಗೆ ರಾಜ್ಯದಲ್ಲಿ ನಡೆಯುವ ಯಾವ ಹಿಂದು ಸಮಾವೇಶದಲ್ಲೂ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರವೀಣ್‌ಬಾಯ್ ತೊಗಾಡಿಯ ಪೂತ್ತೂರು ಮತ್ತಿತರ ಕಡೆ ಭಾಷಣ ಮಾಡಿದ ನಂತರ ಕೋಮು ಗಲಭೆಗಳಾದ ಉದಾಹರಣೆಯಿದೆ. ಅವಕಾಶ ನಿರಾಕರಿಸಿರುವುದನ್ನೇ ಅಪಪ್ರಚಾರಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.[ಸಿಎಂ ಸಿದ್ದರಾಮಯ್ಯಗೆ ಪ್ರವೀಣ್ ತೊಗಾಡಿಯಾ ಪತ್ರ!]

karnataka

ಬಜೆಟ್ ಅಧಿವೇಶನದ ನಂತರ ಅಧಿಕಾರಿಗಳ ಸಾರ್ವತ್ರಿಕ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಈ ಬಾರಿ ವರ್ಗಾವಣೆಗೆ ಸಂಬಂಧಿಸಿ ಯಾವ ಗೊಂದಲಗಳಿಗೂ ಆಸ್ಪದ ನೀಡುವುದಿಲ್ಲ ಎಂದರು.

ಶಿವಮೊಗ್ಗದ ಕೋಮುಗಲಭೆ ಹಾಗೂ ರಾಜ್ಯಾದ್ಯಂತ ನಡೆಯುತ್ತಿರುವ ಹಿಂದು ಸಮಾಜೋತ್ಸವಗಳ ಹಿನ್ನೆಲೆಯಲ್ಲಿ ಹೆಚ್ಚ್ಚಿನ ಬೋದೋಬಸ್ತ್ ನೀಡಲಾಗುತ್ತಿದೆ. ಗದಗ ಮತ್ತು ಶಿವಮೊಗ್ಗ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಲಾಗಿದೆ. ಪೊಲೀಸ್ ಭತ್ಯೆಯನ್ನು ಏರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.[ಉಡುಪಿ ಪ್ರವೇಶಿಸದಂತೆ ಪ್ರವೀಣ್ ತೊಗಾಡಿಯಾಗೆ ನಿಷೇಧ]

ಅತ್ಯಾಚಾರ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ ಭಂಗವಾಗುವಂಥ ಕಾರ್ಯಕ್ರಮಗಳಿಗೆ ಅಥವಾ ಅಂಥ ಭಾಷಣಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+