ಕೈ ಮುಗೀತೀನಿ ಮಗನ ಬಗ್ಗೆ ಕೇಳ್ಬೇಡಿ: ಅಂಗಲಾಚಿದ ಪರಶುರಾಮ್ ತಂದೆ

ಬೆಂಗಳೂರು, ಜೂನ್ 16: ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ತಂದೆ ಅಶೋಕ ವಾಘ್ಮೋರೆ ಇಂದು ತಮ್ಮನ್ನು ಪ್ರಶ್ನಿಸಲು ಬಂಧ ಮಾಧ್ಯಮದವರನ್ನು ಧೈನ್ಯದಿಂದ ಬೇಡಿಕೊಂಡರು.

'ನಿಮ್ಮ ಕೈ ಮುಗಿಯುತ್ತೇನೆ ಮಗನ ಬಗ್ಗೆ ಏನೂ ಕೇಳಬೇಡಿ, ನಾನು ಈಗಾಗಲೇ ಬಹಳ ನೊಂದಿದ್ದೇನೆ, ನೀವು ಪ್ರಶ್ನೆ ಕೇಳಿ ಇನ್ನೂ ನೋಯಿಸಬೇಡಿ' ಎಂದು ಕಣ್ಣೀರು ಹಾಕುತ್ತಾ ಕೈ ಮುಗಿದು ಬೇಡಿಕೊಂಡರು.

ಆರೋಪಿ ಪರಶುರಾಮ ವಾಘ್ಮೋರೆ ಪೋಷಕರು ಹಾಗೂ ವಿಜಯಪುರ ಜಿಲ್ಲಾ ಶ್ರೀರಾಮಸೇನೆ ಅಧ್ಯಕ್ಷ ರಾಕೇಶ್ ಮಠ ಅವರನ್ನು ವಿಚಾರಣೆಗೆಂದು ಎಸ್‌ಐಟಿಯು ಬೆಂಗಳೂರಿಗೆ ಕರೆಸಿಕೊಂಡಿತು.

Gauri murder accused Parashurams parents inquired by SIT

ಅದಾಗಲೇ ತೀವ್ರ ಆಘಾತದಲ್ಲಿದ್ದ ಹಾಗೂ ನೊಂದಿದ್ದ ಪರಶುರಾಮ್ ವಾಘ್ಮೋರೆಯ ಪೋಷಕರನ್ನು ಬೇಗನೆ ವಿಚಾರಣೆ ಮುಗಿಸಿ ಹೊರಗೆ ಬಿಟ್ಟ ಎಸ್‌ಐಟಿ ಸದಸ್ಯರು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠ ಅವರನ್ನು ಮಾತ್ರ ಸತತವಾಗಿ 5 ಗಂಟೆ ವಿಚಾರಣೆ ನಡೆಸುತ್ತಲೇ ಇದ್ದಾರೆ.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠ ನಿನ್ನೆ ಫೇಸ್‌ಬುಕ್‌ನಲ್ಲಿ ಪರಶುರಾಮ್ ವಾಘ್ಮೋರೆಯ ಚಿತ್ರ ಹಾಕಿ ಹಣ ಸಹಾಯಕ್ಕೆ ಮನವಿ ಮಾಡಿದ್ದ ಹಾಗಾಗಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Gauri murder accused Parashurams parents inquired by SIT

ತಮ್ಮ ಮಗನಿಗೆ ಆದ ಗತಿಯಿಂದ ತೀವ್ರವಾಗಿ ಕುಗ್ಗಿಹೋಗಿರುವ ಆರೋಪಿ ಪರಶುರಾಮ ಅವರ ಪೋಷಕರು ಇಂದು ಸಿಬಿಐ ಕೇಂದ್ರದ ಹೊರಗೆ ಕುಳಿತು ಅಳುತ್ತಿದ್ದರು. ಅವರ ಅವಸ್ಥೆ ನೋಡಿ ಪೊಲೀಸರು, ಮಾಧ್ಯಮದವರು ಮರುಗಿದರು. ಮಗ ಮಾಡಿದ ತಪ್ಪಿಗೆ ಪೋಷಕರು ಹಿಂಸೆ ಅನುಭವಿಸುತ್ತಿದ್ದ ದೃಶ್ಯ ಮನಕಲುಕುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+