ಹತ್ಯೆದಿನ ಹಂತಕ ಗೌರಿ ಲಂಕೇಶ್ ಮನೆ ಸುತ್ತ 3 ಬಾರಿ ಬಂದು ಹೋಗಿದ್ದ!

Posted By: ವಿಕಾಸ್ ನಂಜಪ್ಪ
Subscribe to Oneindia Kannada
   Gauri lankesh : cctv footage suggests that the killer was alone | Oneindia Kannada

   ಬೆಂಗಳೂರು, ಸೆಪ್ಟೆಂಬರ್ 13: ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಯುತ್ತಿದ್ದು ಸಿಸಿಟಿವಿ ಫೂಟೇಜ್ ಗಳು ನೀಡಿದ ಸಾಕ್ಷ್ಯಗಳ ಪ್ರಕಾರ ಒಬ್ಬನೇ ಒಬ್ಬ ವ್ಯಕ್ತಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

   In Pics: ನಾನೂ ಗೌರಿ ಎಂದು ಬಂದರು ಸಾವಿರಾರು ಮಂದಿ

   ಸಿಸಿಟಿವಿಯಲ್ಲಿ ದಾಖಲಾಗಿರುವ ಬೇರೆ ಬೇರೆ ಕೋನಗಳ ದೃಶ್ಯಾವಳಿಗಳು ಇದನ್ನು ಹೇಳುತ್ತಿವೆ. ಗೌರಿ ಲಂಕೇಶ್ ಹತ್ಯೆಯಾದ ದಿನ ಅಂದರೆ ಸೆಪ್ಟೆಂಬರ್ 5ರಂದು ಬಿಳಿ ಶರ್ಟ್ ಧರಿಸಿ ಹೆಲ್ಮೆಟ್ ಹಾಕಿಕೊಂಡಿದ್ದ ಹಂತಕ ಮೂರು ಬಾರಿ ಅವರ ಮನೆ ಬಳಿ ಬಂದು ಹೋಗಿದ್ದ.

   Gauri Lankesh murder: Probe suggests presence of one killer

   3.15 ನಿಮಿಷಕ್ಕೆ ಆತ ಮೊದಲ ಬಾರಿಗೆ ಮನೆ ಪಕ್ಕ ಬಂದಿದ್ದ. ಮೂರು ಬಾರಿಯೂ ಆತ ಬೈಕ್ ನಲ್ಲೇ ಬಂದಿದ್ದು. ಮೂರನೇ ಬಾರಿಗೆ ಆತ ಬರುವಾಗ ಆತನ ಜತೆಗೊಂದು ಬ್ಯಾಗ್ ಇತ್ತು. ಇದರಲ್ಲಿ ಆತ ಬಂದೂಕು ಅಡಗಿಸಿಟ್ಟುಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

   ಗೌರಿ ಲಂಕೇಶ್ ಹತ್ಯೆ ಮಾಡಿದ ಆಂಧ್ರ ಮೂಲದ ಸುಪಾರಿ ಕಿಲ್ಲರ್ ಬಂಧನ?

   ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ವ್ಯಕ್ತಿಗಳನ್ನು ವಿಶೇಷ ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ಆದರೆ ಇಲ್ಲಿಯವರೆಗೆ ಯಾರನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿಲ್ಲ.

   ಹಲವು ಕೋನಗಳಿಂದ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ಸುಳಿವುಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಎಲ್ಲವನ್ನೂ ಪಡೆದುಕೊಂಡು ತನಿಖೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

   ಗೌರಿ ಲಂಕೇಶ್ ಕೊಲೆ ಮಾಡಿದ ವ್ಯಕ್ತಿ ಒಟ್ಟು ನಾಲ್ಕು ಬುಲೆಟ್ ಗಳನ್ನು ಶೂಟ್ ಮಾಡಿದ್ದ. ಇದರಲ್ಲಿ ಮೂರು ಆಕೆಯ ದೇಹವನ್ನು ಹೊಕ್ಕರೆ ಒಂದು ಮಾತ್ರ ಮಿಸ್ ಆಗಿ ಗೋಡೆಗೆ ಬಡಿದಿತ್ತು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The investigations being conducted into the Gauri Lankesh murder case increasingly suggests that there could have been just one assailant. The various angles captured by the CCTV footage suggests that the killer was alone.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ